ಬಿಜೆಪಿ ನನಗಿನ್ನೂ ಸೆಟ್ ಆಗಿಲ್ಲ- ಬಿಜೆಪಿಗೇ ಶಾಕ್ ನೀಡಿದ ಅಭ್ಯರ್ಥಿ ಉಮೇಶ್ ಜಾಧವ್

ಬಿಜೆಪಿ ನನಗೆ ಸೆಟ್ ಆಗಿಲ್ಲ, ನಿಮ್ಮ ಸಹಕಾರವಿರಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳಗೆ ಜಾಧವ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು, ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.

G Hareeshkumar | news18
Updated:April 20, 2019, 4:41 PM IST
ಬಿಜೆಪಿ ನನಗಿನ್ನೂ ಸೆಟ್ ಆಗಿಲ್ಲ- ಬಿಜೆಪಿಗೇ ಶಾಕ್ ನೀಡಿದ ಅಭ್ಯರ್ಥಿ ಉಮೇಶ್ ಜಾಧವ್
ಉಮೇಶ್ ಜಾಧವ್
G Hareeshkumar | news18
Updated: April 20, 2019, 4:41 PM IST
ಕಲುಬುರ್ಗಿ (ಏ.20) : ನನಗಿನ್ನೂ ಬಿಜೆಪಿ ಸೆಟ್ ಆಗುತ್ತಿಲ್ಲ.ಈ ಪಾರ್ಟಿಯೇ ಸೆಟ್ ಆಗುತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿಯೇ ಬಿಜೆಪಿಯವರನ್ನು ತಬ್ಬಿಬ್ಬುಗೊಳಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿಯ ಸಾರ್ವಜನಿಕ ಉದ್ಯಾನವನದ ಬಳಿ ನಡೆದ ದಲಿತ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಬಾಯಿಯಿಂದ ಈ ಮಾತುಗಳು ಹೊರ ಬಿದ್ದಿವೆ.  ಬಿಜೆಪಿ ಪಕ್ಷ ಏನೆಂದು ಗೊತ್ತಾಗುತ್ತಿಲ್ಲ. ನನಗಿನ್ನೂ ಬಿಜೆಪಿ ಸೆಟ್ ಆಗುತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂದು ಜಾಧವ್ ಅಸಹಾಯಕತೆ ಹೊರ ಹಾಕಿದ್ದಾರೆ.

ಬಿಜೆಪಿ ನನಗೆ ಸೆಟ್ ಆಗಿಲ್ಲ

ಬಿಜೆಪಿ ನನಗೆ ಸೆಟ್ ಆಗಿಲ್ಲ, ನಿಮ್ಮ ಸಹಕಾರವಿರಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ  ಜಾಧವ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು, ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಆದರೆ ಬಿಜೆಪಿ ಸೇರ್ಪಡೆಗೊಂಡರೂ ಸ್ಥಳೀಯ ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ರೀತಿ ಅಸಹಾಯಕರಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಐಎಎಸ್ ಅಧಿಕಾರಿಗಳು ಒತ್ತಾಯಿಸಿದ್ದರು 'ಅನೇಕ ನಿವೃತ್ತ ಐಎಎಸ್​​​ ಅಧಿಕಾರಿಗಳು ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಬಹಳ ನೋವುಂಟು ಮಾಡಿದ್ದಾರೆ. ಅದಕ್ಕೆ ನೀವು ಚುನಾವಣೆಗೆ ನಿಲ್ಲಬೇಕು ನಾವೆಲ್ಲರೂ ನಿಮಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದರು ಎಂದು ಜಾಧವ್​​ ಹೇಳಿದರು

ತಪ್ಪು ಮಾಡಿದ್ದಾಗಿ ಹೇಳಿಲ್ಲ
Loading...

ತಪ್ಪು ಮಾಡಿದ್ದಾಗಿ ಹೇಳಿಲ್ಲ 'ನಾನು ತುಂಬಾ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ನನ್ನ ಹೇಳಿಕೆಯನ್ನು ನೀವು ಹತ್ತು ಸಲ ಬೇಕಾದರೂ ರಿವೈಂಡ್ ಮಾಡಿ ಕೇಳಿ. ಪಕ್ಷದಲ್ಲಿ ಇದೇ ರೀತಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದಿದ್ದೆ. ನಾನು ಬಿಜೆಪಿ ಸೇರಿ ತಪ್ಪು ಮಾಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಪಕ್ಷದಲ್ಲಿ ಇನ್ನೂ ಸೆಟ್ ಆಗುತ್ತಿದ್ದೇನೆ ಎಂದು ಮಾತ್ರ ಹೇಳಿದ್ದೆ ಎಂದಿದ್ದಾರೆ.

ಹೊಂದಿಕೊಳ್ಳಲು ಸಮಯ ಬೇಕಲ್ಲವೇ? ಮದುವೆಯಾದ ಹೊಸತರಲ್ಲಿ ಹೊಂದಿಕೊಳ್ಳಲು ಗಂಡ-ಹೆಂಡತಿಗೆ ಸಮಯ ಬೇಕಾಗುವುದಿಲ್ಲವೇ ಹಾಗೆಯೇ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಜಾಧವ್ ತಿಳಿಸಿದ್ದಾರೆ. ನಮ್ಮ ಮನೆಗೆ ನೀವು ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ಕೈ ಹಿಡಿದು ಕೆಲಸ ಮಾಡಿಕೊಳ್ಳಬಹುದು ಎಂದು ಕಲಬುರಗಿ ಜನತೆಗೆ ಉಮೇಶ್​​ ಜಾಧವ್​​ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ :  ಕಲಬುರ್ಗಿಯಲ್ಲಿ ಖರ್ಗೆ, ಧರ್ಮ ಸಿಂಗ್ ನಿಜವಾದ ಜೋಡೆತ್ತುಗಳು; ಸಚಿವ ಪ್ರಿಯಾಂಕ್ ಖರ್ಗೆ

ಅದೇನೇ ಇರಲಿ ಚುನಾವಣಾ ಹೊಸ್ತಿಲಲ್ಲಿ ಉಮೇಶ್ ಜಾಧವ್ ಹೇಳಿಕೆ ಬಿಜೆಪಿ ನಾಯಕರನ್ನು ತಬ್ಬಿಬ್ಬುಗೊಳ್ಳುವಂತೆ ಮಾಡಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ.

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...