LIVE NOW

Election Tracker LIVE: ನಾನು ಕೇವಲ ತುಮಕೂರಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತೇನೆ; ದೇವೇಗೌಡ

Lok Sabha Election Highlights live: ಇಂದು ದೇವೇಗೌಡ, ನಿಖಿಲ್​ ಕುಮಾರಸ್ವಾಮಿ, ಪ್ರತಾಪ್​ ಸಿಂಹ ಸೇರಿ ಸಾಕಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

Kannada.news18.com | March 25, 2019, 5:51 PM IST
facebook Twitter google Linkedin
Last Updated March 25, 2019
auto-refresh

Highlights

ಬೆಂಗಳೂರು: ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಎರಡನೇ ಹಂತದ ಚುನಾವಣೆಗೆ ಮಾ. 26 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಹಾಗಾಗಿ ಇಂದು ದೇವೇಗೌಡ, ನಿಖಿಲ್​ ಕುಮಾರಸ್ವಾಮಿ, ಪ್ರತಾಪ್​ ಸಿಂಹ ಸೇರಿ ಸಾಕಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

 

 
5:50 pm (IST)

ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ ವೇಳೆ ಜಯಮಾಲಾ ಉಪಸ್ಥಿತಿ

ಸಚಿವೆ ಜಯಮಾಲಾ ಹೇಳಿಕೆ

ಸಮ್ಮಿಶ್ರ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ

ಪ್ರಮೋದ್ ಮಧ್ವರಾಜ್ ಗೆ ಸಚಿವರಾಗಿ ಮಾಡಿದ ಕೆಲಸವೇ ಶ್ರೀರಕ್ಷೆ

ಹಸ್ತದ ಚಿಹ್ನೆ ಇಲ್ಲಾಂದ್ರೆ ತೊಂದ್ರೆ ಇಲ್ಲ

ಚಿಹ್ನೆಯಿಂದ ಗೆದ್ದ ಶೋಭಾ ಕರಂದ್ಲಾಜೆ ಏನು ಮಾಡಿದ್ದಾರೆ

ಉಡುಪಿ ಚಿಕಮಗಳೂರು ಕ್ಷೇತ್ರಕ್ಕೆ ಏನು ಮಾಡಿದಾರೆ

ಶೋಭಾಗೆ ಅವರ ಪಕ್ಷದವರೇ ಗೋ ಬ್ಯಾಕ್ ಅಂತಿದಾರೆ

ಕಾಂಗ್ರೆಸ್ ಮುಕ್ತ ಮಾಡೋಕೆ ಈ ಜನ್ಮದಲ್ಲಿ ಸಾಧ್ಯವಿಲ್ಲ

ಇದು ಬಿಜೆಪಿಗರಿಗೆ ಸವಾಲು

ಕಾಂಗ್ರೆಸ್ ಜನರ ನಡುವೆ ಹುಟ್ಟಿದ ಪಕ್ಷ

ಜನರು ನಮ್ಮ ಕೈ ಬಿಡಲ್ಲ

ಕರಾವಳಿ‌ ಮಲೆನಾಡು ಜನರು ಮೂರ್ಖರಲ್ಲ

ಚಿಹ್ನೆಗಿಂತ ವ್ಯಕ್ತಿ‌ಮುಖ್ಯ, ಪ್ರಮೋದ್ ಗೆದ್ದು ತೋರಿಸ್ತಾರೆ

ಮೋದಿ ಏನು ಮಾಡಿದಾರೆ ಮುಖ್ಯ ಅಲ್ಲ, ಸಂಸದರ ಕೊಡುಗೆ ಏನು

ನಮಗೂ ಮೋದಿಯೇ ಪ್ರಧಾನಿ,

ಆದರೆ ಬಿಜೆಪಿ ಸಂಸದರು ಏನು ಮಾಡಿದಾರೆ ಅನ್ನೋದು ಮುಖ್ಯ

24 ಗಂಟೆ ಮೋದಿಮೋದಿ ಅಂತಾರೆ

ಇವರಲ್ಲಿ ಸತ್ವ ಇಲ್ಲ, ಮಾತೆತ್ತಿದ್ರೆ ಮೋದಿ ಅಂತಾರೆ

ಮಹಿಳೆ ಅಂತ ಶೋಭಾನ ಯಾರೂ ಟೀಕೆ ಮಾಡ್ತಿಲ್ಲ

ನಾನೂ ಒಬ್ಬ ಮಹಿಳೆ ಅಲ್ವಾ, ಟೀಕೆ ಎದುರಿಸೋದು ಮುಖ್ಯ

ಬಿಜೆಪಿ ಗೆ ಸೋಲಿನ ಚಿಂತೆನಮಗೆ ಗೆಲುವಿನ ವಿಶ್ವಾಸವಿದೆ.

5:49 pm (IST)

ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ ವೇಳೆ ಕೆ.ಜೆ.ಜಾರ್ಜ್ ಉಪಸ್ಥಿತಿ

ಸಮ್ಮಿಶ್ರ ಅಭ್ಯರ್ಥಿ ಗೆ ನಮ್ಮ ಸಂಪೂರ್ಣ ಬೆಂಬಲ

ಪ್ರಮೋದ್ ಮಧ್ವರಾಜ್ ಬಹುಮತದಿಂದ ಗೆಲ್ತಾರೆ

ಈ ಕ್ಷೇತ್ರದಲ್ಲಿ ಹಿಂದುತ್ವದ ಗಾಳಿಯೂ ಇಲ್ಲ ಏನೂ ಇಲ್ಲ

ಪ್ರಮೋದ್ ಮಧ್ವರಾಜ್ ಹಿಂದೂ ಅಲ್ವಾ

ನಮ್ಮಪಕ್ಷದಲ್ಲಿ ಹೆಚ್ಚಿನ ನಾಯಕರು ಹಿಂದೂಗಳೇ

ನಾವು ಎಲ್ಲಾ ಧರ್ಮಗಳನ್ನು ಗೌರವಿಸ್ತೇವೆ

ಸಮ್ಮಶ್ರ ಸರ್ಕಾರ. ನಡೆಸ್ತಾ ಇದ್ದೇವೆ.

ಕೋಮುವಾದಿ ಬಿಜೆಪಿ ಯನ್ನು ಹೊರಗಿಡೋದಷ್ಟೇ ನಮ್ಮ ಗುರಿ

ಸಚಿವ ಕೆ.ಜೆ.ಜಾರ್ಜ್ ಹೇಳಿಕೆ

ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮೋಸ ಮಾಡಿಲ್ಲ

ಅವರಿಗೆ ಟಿಕೆಟ್ ಕೊಟ್ಟಿದ್ದು ನಾವು, ಗೆಲ್ಲಿಸಿದ್ದು ನಾವು

ಸಮ್ಮಿಶ್ರ ಸರ್ಕಾರ ದಲ್ಲಿ ಈ ಬದಲಾವಣೆ ಅನಿವಾರ್ಯ

ಮುಂದೆ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತೆ

5:30 pm (IST)

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿಕೆ

ನಾನು ಯಾವ ವ್ಯಕ್ತಿಯ ಬಗ್ಗೆಯೂ ನಿಂದನೆ ಮಾಡಲು ಹೋಗಲ್ಲ

ನಾನು ಎಲ್ಲಾ ಕಡೆಯೂ ಪ್ರಚಾರಕ್ಕೆ ಹೋಗುತ್ತೇನೆ

ಕೇವಲ ನಾನು ತುಮಕೂರಿಗೆ ಮಾತ್ರ ಸೀಮಿತವಾಗಿರಲ್ಲ

ಎಲ್ಲಿ ಅಭ್ಯರ್ಥಿಗಳಿಗೆ ನನ್ನ ಅಪೇಕ್ಷೆ ಇದೆಯೋ ಅಲ್ಲೆಲ್ಲಾ ಹೋಗುತ್ತೇನೆ

ಇದಾದ ಮೇಲೆ ನಾನು ಹೊರ ರಾಜ್ಯದ ಪ್ರಚಾರಕ್ಕೂ ಹೋಗುತ್ತೇನೆ

ಆಂಧ್ರಪ್ರದೇಶದ ಚಂದ್ರ ಬಾಬು ನಾಯ್ಡು ಕೂಡ ನನ್ನನ್ನು ಕರೆದಿದ್ದಾರೆ

ನಾನು ಅಲ್ಲಿಗೆ ಹೋಗುತ್ತೇನೆ.

ಪರಮೇಶ್ವರ್ ಅವರ ನಾಯಕತ್ವದಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ

ಬಿಜೆಪಿ ಕುಗ್ಗಿಸುವ ಶಕ್ತಿ ನಮಗಿದೆ, ಆ ಕೆಲಸ ನಾವು ಮಾಡುತ್ತೇವೆ.

ಚುನಾವಣಾ ಫಲಿತಾಂಶ ಬಂದ ಮೈತ್ರಿ ಪಕ್ಷಗಳ ಬೆಲೆ ಗೊತ್ತಾಗುತ್ತೆ.

ಮೈತ್ರಿ ಪಕ್ಷದ ನಾಯಕರು ತಲೆ ಬಾಗಿ ನಡೆದುಕೊಂಡಿದ್ದಾರೆ ಅಂತಾ‌


5:29 pm (IST)

ಡಿಸಿಎಂ ಪರಮೇಶ್ವರ್ ಹೇಳಿಕೆ

ದೇವೇಗೌಡರನ್ನು ನಾವು ತುಮಕೂರಿಗೆ, ಕರ್ನಾಟಕಕ್ಕೆ ಸೀಮಿತ ‌ಮಾಡಿಲ್ಲ

ಅವರು ಇಡೀ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ

ಅವರು ಸಿಎಂ ಆಗಿದ್ದಾಗ ಜಿಲ್ಲಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ.

ಹೇಮಾವತಿಯಿಂದ 24 ಟಿಎಂಸಿ ನೀರನ್ನು ಕೊಡಬೇಕು ಎಂದು ನಿರ್ಧಾರ ಆಗಿತ್ತು.

ನಮಗೆ ಬರಬೇಕಿದ್ದ ನೀರು ಬಂದಿದೆ

ಬರಗಾಲದಲ್ಲಿ ಸ್ವಲ್ಪ ಬರದೆ ಇರಬಹುದು ಅಷ್ಟೇ..

ಎತ್ತಿನಹೊಳೆ ಈಗಾಗಲೇ ನಾವು ಪ್ರಾರಂಭ ಮಾಡಿದ್ದೀವಿ.

ಅದರಿಂದಲೂ ನಮ್ಮ ಜಿಲ್ಲೆಗೆ ನೀರು ಸಿಗಲಿದೆ

ದೇವೇಗೌಡರು ಯಾವಾಗಲೂ ನೀರು ಕಡಿಮೆ ಮಾಡಿ ಎಂದು ಹೇಳಿಲ್ಲ

ಕೇವಲ ಮತಕ್ಕಾಗಿ ಈ ರೀತಿ ಹೇಳೋದು ತಪ್ಪು..

ರೇವಣ್ಣ ಸ್ವಾಭಾವಿಕವಾಗಿ ನೀರು ಕೊಡಿ ಎಂದು ಕೇಳಿರಬಹುದು

ಹಾಗಂತ ನಾವು ಜಾಸ್ತಿ ಕೊಡಿ ಎಂದು ಕೇಳಿದ್ದೇವೆ.

ನಾವು ಇಬ್ಬರು ಜಗಳ ಮಾಡ್ತೀವಿ ಅಂತಲೇ ಅವರು ಬೋರ್ಡ್ ಮಾಡಿದ್ದಾರೆ.

ಬೋರ್ಡ್ ‌ನಿಯಮ ಪ್ರಕಾರ ನಮಗೆ ‌ನೀರು ಸಿಗುತ್ತಿದೆ

24 ಟಿಎಂಸಿ ನೀರಿನಲ್ಲಿ 23 ಟಿಎಂಸಿ ನೀರು ಹರಿದಿದೆ

ನಮ್ಮಲ್ಲಿ ಇದಕ್ಕೆ ದಾಖಲೆಗಳು ಇವೆ

ಈಗಾಗಲೇ ಕಡಿಮೆ ಆಗಿರುವ ನೀರನ್ನು ಕೂಡಲೇ ಹರಿಸುವಂತೆ ನಾವು ಕೇಳಿದ್ದೇವೆ

ಶೀಘ್ರದಲ್ಲೇ ಆ ನೀರು ಕೂಡ ಹರಿಯಲಿದೆ

Load More