ಧಾರವಾಡ ವಶಕ್ಕೆ ಕಾಂಗ್ರೆಸ್​​ ರಣತಂತ್ರ; 'ಕೈ'ಗೆ ಸಿಗಲಿದೆಯಾ ಬಿಜೆಪಿ ಭದ್ರಕೋಟೆ?

Lok Sabha Election 2019: ಕ್ಷೇತ್ರದಲ್ಲಿ 16 ಲಕ್ಷ 88 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇಕಡಾ 35ರಷ್ಟು ಲಿಂಗಾಯತರು ಮತ್ತು ಶೇಕಡಾ 23 ರಷ್ಟು ಅಲ್ಪಸಂಖ್ಯಾತ ಮತದಾರರಿದ್ದಾರೆ. ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎನ್ನುವ ಉಮೇದಿಯಲ್ಲಿರುವ ಕಾಂಗ್ರೆಸ್‌ ಲಿಂಗಾಯತ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ

G Hareeshkumar | news18
Updated:March 15, 2019, 11:02 AM IST
ಧಾರವಾಡ ವಶಕ್ಕೆ ಕಾಂಗ್ರೆಸ್​​ ರಣತಂತ್ರ; 'ಕೈ'ಗೆ ಸಿಗಲಿದೆಯಾ ಬಿಜೆಪಿ ಭದ್ರಕೋಟೆ?
ಸಂಭ್ಯಾವ್ಯ ಅಭ್ಯರ್ಥಿಗಳು
G Hareeshkumar | news18
Updated: March 15, 2019, 11:02 AM IST
ಹುಬ್ಬಳ್ಳಿ ( ಮಾ.15) :  ಧಾರವಾಡ ಲೋಕಸಭಾ ಕ್ಷೇತ್ರವನ್ನು ಕೈವಶ ಪಡಿಸಿಕೊಳ್ಳಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದೆ. ಲಿಂಗಾಯತ ಅಥವಾ ಅಲ್ಪಸಂಖ್ಯಾತ ಟ್ರಂಪ್‌ಕಾರ್ಡ್‌ ಪ್ರಯೋಗಕ್ಕೆ ಹೈಕಮಾಂಡ್‌ ಮುಂದಾಗಿದೆ. ಬಿಜೆಪಿ ಪಾರುಪತ್ಯ ಅಳಿಸಿಹಾಕಲು ಅಖಾಡ ಸಿದ್ಧಪಡಿಸಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಹದಿನಾರು ಚುನಾವಣೆಗಳಲ್ಲಿ ಆರಂಭಿಕವಾಗಿ ಸತತ ಹತ್ತು ಬಾರಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸಿತ್ತು. ಆದರೆ ಹುಬ್ಬಳ್ಳಿಯ ಈದ್ಗಾ ಮೈದಾನದ ಧ್ವಜಾರೋಹಣ ಗಲಾಟೆಯ ನಂತರ ಕಳೆದ ಆರು ಚುನಾವಣೆಗಳಲ್ಲಿ ನಿರಂತರವಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ.

ಕ್ಷೇತ್ರದಲ್ಲಿ 16 ಲಕ್ಷ 88 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇಕಡಾ 35ರಷ್ಟು ಲಿಂಗಾಯತರು ಮತ್ತು ಶೇಕಡ 23 ರಷ್ಟು ಅಲ್ಪಸಂಖ್ಯಾತ ಮತದಾರರಿದ್ದಾರೆ. ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎನ್ನುವ ಉಮೇದಿಯಲ್ಲಿರುವ ಕಾಂಗ್ರೆಸ್‌ ಲಿಂಗಾಯತ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಹೀಗಾಗಿ ಲಿಂಗಾಯತ ಸಮಾಜದ ವಿನಯ್‌ ಕುಲಕರ್ಣಿ ಮತ್ತು ಮುಸ್ಲೀಮ್‌ ಸಮಾಜದ ಶಾಕೀರ್‌ ಸನದಿ ಹೆಸರು ಮುನ್ನೆಲೆಗೆ ಬಂದಿವೆ.

ಕಾಂಗ್ರೆಸ್​​ ನಲ್ಲಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಪ್ರಬಲ ಆಕಾಂಕ್ಷಿ

ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ವಿನಯ್‌ ಕುಲಕರ್ಣಿ ವಿಧಾನಸಭೆ ಚುನಾವಣೆಯಲ್ಲಿಯೂ ನೆಲಕಚ್ಚಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ವಿನಯ್‌ ಕುಲಕರ್ಣಿಯವರ ಸತತ ಸೋಲಿನ ಬಗ್ಗೆ ಕ್ಷೇತ್ರದಲ್ಲಿ ಅನುಕಂಪವಿದೆ. ಹೀಗಾಗಿ ಟಿಕೆಟ್‌ ಸಿಕ್ಕರೆ ಗೆಲ್ಲಲು ಬೇಕಾದ ಸ್ಟ್ರ್ಯಾಟಜಿಯನ್ನು ಈಗಾಗಲೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಸಂಸದ ಐ.ಜಿ. ಸನದಿಯವರ ಪುತ್ರ ಶಾಕೀರ್‌ ಸನದಿ ಹೆಸರು ಅಲ್ಪಸಂಖ್ಯಾತ ಕೋಟಾದಲ್ಲಿ ಮುನ್ನೆಲೆಯಲ್ಲಿದೆ. ಕ್ಷೇತ್ರದಲ್ಲಿ ಶೇಕಡಾ 23 ರಷ್ಟು ಅಲ್ಪಸಂಖ್ಯಾತ ಮತದಾರರು ಇರುವ ಕಾರಣ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮುಸ್ಲೀಮ್‌ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕು ಎನ್ನುವ ಕೂಗಿದೆ.

 ಬಿರುಸಿನ ಪ್ರಚಾರದಲ್ಲಿ  ಸಂಸದ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಪ್ರಯಾಣಿಸುತ್ತಿದ್ದ ವಿಮಾನ ಸಂಶಯಾಸ್ಪದ ರೀತಿಯಲ್ಲಿ ಲ್ಯಾಂಡಿಂಗ್‌ ಆಗಿದ್ದಾಗ ಪೊಲೀಸರಿಗೆ ದೂರು ನೀಡಿದ್ದು ಇದೇ ಶಾಕೀರ್‌ ಸನದಿ. ರಾಹುಲ್‌ ಗಾಂಧಿಯವರ ಜೊತೆಗೆ ಶಾಕೀರ್‌ ಸನದಿಗೆ ಉತ್ತಮ ಸಂಪರ್ಕವಿದೆ. ಹೀಗಾಗಿ ಶಾಕೀರ್‌ ಸನದಿ ಅಚ್ಚರಿಯ ರೀತಿಯಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹಾಲಿ ಸಂಸದ ಪ್ರಲ್ಹಾದ್ ಜೋಶಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

 ಇದನ್ನೂ ಓದಿ: Elections 2019: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ; ಆರರಲ್ಲಿ ಬಹುತೇಕ ಅಂತಿಮ; ಎರಡು ಅನಿಶ್ಚಿತ
Loading...

ಈಗಾಗಲೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದ್ದಾರೆ. ಮೋದಿಯವರು ಹುಬ್ಬಳ್ಳಿಗೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿರುವುದು ಹಾಗೂ ಬಲಿಷ್ಠ ಕಾರ್ಯಕರ್ತ ಪಡೆ ಇರುವುದರಿಂದ ನಾಲ್ಕನೆಯ ಬಾರಿಗೆ ಗೆದ್ದು ಬೌಂಡರಿ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ.

 ಆಟಕ್ಕುಂಟು ಲೆಕ್ಕಕ್ಕಿಲ್ಲದ ಜೆಡಿಎಸ್ ಪಕ್ಷ

ಧಾರವಾಡ ಲೋಕಸಭಾ ಕ್ಷೇತ್ರ ಸದ್ಯಕ್ಕೆ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಪಾರಮ್ಯ ಮೆರೆಯಲು ಕಾಂಗ್ರೆಸ್‌ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಎನ್.ಎಚ್‌. ಕೋನರೆಡ್ಡಿ ಟಿಕೆಟ್‌ ಬಯಸಿದ್ದರೂ ಸಿಗುವುದು ಅನುಮಾನ. ಮೈತ್ರಿ ಧರ್ಮದಂತೆ ಜೆಡಿಎಸ್‌ ಬೆಂಬಲ ಪಡೆದು ಗೆಲುವು ಸಾಧಿಸಲು ಕಾಂಗ್ರೆಸ್‌ ಮುಂದಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಅಥವಾ ಅಲ್ಪಸಂಖ್ಯಾತ ಎನ್ನುವ ಲೆಕ್ಕಾಚಾರ ವರ್ಕೌಟ್‌ ಆಗುತ್ತಾ ಕಾಯ್ದು ನೋಡಬೇಕು.

- ಪರಶುರಾಮ್ ತಹಶೀಲ್ದಾರ್ 
First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...