ಪ್ರಧಾನಿ ಆಗುವವರಿಗೆ ಪ್ರಬುದ್ಧತೆ ಇರಬೇಕು; ರಾಹುಲ್​ ಗಾಂಧಿ ಲೇವಡಿ ಮಾಡಿದ ಎಸ್​.ಎಂ.ಕೃಷ್ಣ

ಕಾಂಗ್ರೆಸ್ ನ ಉದ್ಧಟತನನದಿಂದ ರಾಹುಲ್ ಕೇರಳದ ವಯನಾಡ್ ನಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲಿರುವ ಕಮ್ಯುನಿಸ್ಟ್ ಪಕ್ಷದವರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ವಯನಾಡ್ ನಲ್ಲಿ ಸ್ಪರ್ಧಿಸಿದ್ದು, ಅವರು ಈಗ ಅಲ್ಲಿ ಬೆಂಬಲಕ್ಕೆ ನಿಂತಿಲ್ಲದೇ ಇರುವುದು ದುರಂತ. ಕಾಂಗ್ರೆಸ್ ಈಗ ಯಾರಿಗೂ ಬೇಡವಾದ ಪಕ್ಷವಾಗಿ ಪರಿವರ್ತನೆಯಾಗಿದೆ

G Hareeshkumar | news18
Updated:April 20, 2019, 5:44 PM IST
ಪ್ರಧಾನಿ ಆಗುವವರಿಗೆ ಪ್ರಬುದ್ಧತೆ ಇರಬೇಕು; ರಾಹುಲ್​ ಗಾಂಧಿ ಲೇವಡಿ ಮಾಡಿದ ಎಸ್​.ಎಂ.ಕೃಷ್ಣ
ಎಸ್​ ಎಂ ಕೃಷ್ಣ
G Hareeshkumar | news18
Updated: April 20, 2019, 5:44 PM IST
ಶಿವಮೊಗ್ಗ (ಏ.20) :  ಪ್ರಧಾನಮಂತ್ರಿ ಆಗುವವರಿಗೆ ಪ್ರಬುದ್ಧತೆ ಇರಬೇಕು. ರಾಹುಲ್ ಅವರಲ್ಲಿ ಪ್ರತಿಯೊಂದು ಸಂದರ್ಭದಲ್ಲಿ ಅಪ್ರಬುದ್ಧತೆ ಎದ್ದು ಕಾಣುತ್ತಿದೆ. ಒಂದು ದೇಶದ ಪ್ರಧಾನಮಂತ್ರಿ ಆಗಬೇಕಾದರೆ ಎಷ್ಟು ಅನುಭವ ಬೇಕು. ರಾಹುಲ್ ಗೆ ಈ ಅರ್ಹತೆ ಇಲ್ಲ ಎಂದು ಮಾಜಿ ಸಿಎಂ ಎಸ್​​ ಕೃಷ್ಣ ಹೇಳಿದ್ದಾರೆ

ಇಂದು ಮಹಾಘಟಬಂಧನ್ ಎಲ್ಲಿದೆ. ವಿಧಾನಸಭೆ ಮುಂದೆ ನಿಂತು ಕೈ ಎತ್ತಿದ್ರಲ್ಲಾ, ಆ ಘಟಬಂಧನ್ ಅಲ್ಲಿಗೆ ಸೀಮಿತವಾಗಿದೆ. ಈ ಮಹಾಘಟಬಂಧನ್ ಹೋಗಲಿ, ಬರಿ ಘಟಬಂಧನ್ ಕೂಡ ಸರಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಹುಲ್ ಗಾಂಧಿ ಈಗ ಕೇರಳದಲ್ಲೂ ಸ್ಪರ್ಧಿಸಿರುವುದು ಹಾಸ್ಯಾಸ್ಪದವಾಗಿದೆ. ಅಮೇಥಿಯಲ್ಲಿ ಸ್ಮೃತಿ ಇರಾನಿಯವರು ಒಳ್ಳೆಯ ಕೆಲಸ ಮಾಡಿದ್ದು, ಅಲ್ಲಿ ಭಯ ಹುಟ್ಟಿರುವುದರಿಂದಲೇ, ರಾಹುಲ್ ಕೇರಳಕ್ಕೆ ತೆರಳಿದ್ದಾರೆ ಎಸ್​​ ಎಂ ಕೃಷ್ಣ ವ್ಯಂಗ್ಯವಾಡಿದ್ದರು.  

ಕಾಂಗ್ರೆಸ್ ನ ಉದ್ಧಟತನನದಿಂದ ರಾಹುಲ್ ಕೇರಳದ ವಯನಾಡ್ ನಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲಿರುವ ಕಮ್ಯುನಿಸ್ಟ್ ಪಕ್ಷದವರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ವಯನಾಡ್ ನಲ್ಲಿ ಲಸ್ಪರ್ಧಿಸಿದ್ದು, ಅವರು ಈಗ ಅಲ್ಲಿ ಬೆಂಬಲಕ್ಕೆ ನಿಂತಿಲ್ಲದೇ ಇರುವುದು ದುರಂತ. ಕಾಂಗ್ರೆಸ್ ಈಗ ಯಾರಿಗೂ ಬೇಡವಾದ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ರಫೇಲ್ ಪ್ರಕರಣ ಸಂಬಂಧ ಕೇಳಲಾದ ಪ್ರಶ್ನೆಗೆ ರಾಹುಲ್ ಪ್ರತಿಕ್ರಿಯಿಸಿ, ಚೌಕಿದಾರ್ ಚೋರ್ ಹೈ ಎಂದಿದ್ದರು. ಈ ನರ್ಸರಿ ಮಕ್ಕಳ ರೀತಿಯಲ್ಲಿ ರಿಂಗಾ ರಿಂಗಾ ರೋಸಸ್ ಎನ್ನುವಂತೆ, ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಇದು ಕಾಮನ್ಸೆನ್ಸ್ ಇರುವವರಿಗೆ ಅರ್ಥವಾಗುತ್ತೆ. ರಿವಿವ್ ಪಿಟಿಷನ್ ಬಂದಾಗ ಅದಕ್ಕೆ ಕಾರಣ ಕೇಳಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಇದಕ್ಕೆ ರಾಹುಲ್ ಗಾಂಧಿ ಏನು ತಿಳಿದುಕೊಳ್ಳದೇ, ವಿಷಯ ಪ್ರಸ್ತಾಪಿಸಿದ್ದರು. ಈಗ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದ್ದು,ಏ. 23 ಕ್ಕೆ ವಿಚಾರಣೆ ನಡೆಯಲಿದೆ. ಇದು ಅನುಭವದ, ಅರ್ಹತೆಯ ಶೂನ್ಯತೆ ತೋರಿಸುತ್ತದೆ ಎಂದರು . 

ದೇಶದಲ್ಲಿ ರಾಜಕೀಯ ಸಂಚಲನ ಆರಂಭವಾಗಲಿದೆ

ಮೇ. 23 ರ ನಂತರ ದೇಶದಲ್ಲಿ ರಾಜಕೀಯ ಸಂಚಲನ ಆರಂಭವಾಗಲಿದೆ. ಈ ಸಂಚಲನ ರಾಜ್ಯದಲ್ಲಿ ಬಿಜೆಪಿಗೆ ಎಲ್ಲಿ ತೆಗೆದುಕೊಂಡು ಹೋಗಲಿದೆ ಎಂಬುದು ನೀವೆ ನೋಡಿ. ರಾಘವೇಂದ್ರ ಹಾಗೂ ಮೋದಿಗೆ ಮತ ನೀಡುವ ಮೂಲಕ ಬಿಎಸ್​ ಯಡಿಯೂರಪ್ಪಅವರ ಕೈ ಬಲ ಪಡಿಸಿ ಎಂದು ಎಸ್​​ ಎಂ ಕೃಷ್ಣ ಕರೆ ನೀಡಿದರು.

ಇದನ್ನೂ ಓದಿ :  'ರಾಜಕೀಯವಾಗಿ ನನ್ನ ಘನತೆಗೆ ಕುಂದು ತರಲು ಯತ್ನಿಸಿದವರು ಈಗ ಸ್ವರ್ಗದಲ್ಲಿದ್ದಾರೆ'; ಮಾಜಿ ಪ್ರಧಾನಿ ದೇವೇಗೌಡ

ಇದೇ ವೇಳೆ ಮಾಜಿ ಪ್ರಧಾನಿ ಹೆಚ್​ ಡಿ ದೇವೆಗೌಡ ಹಾಗೂ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಅಪ್ಪ ಆದ ಮೇಲೆ ಮಗ. ಮಗ ಆದ್ಮೇಲೆ ಮೊಮ್ಮಗ ಬರುವುದು ವಾಡಿಕೆ. ಆದರೆ, ಮೂರು ಕ್ಷೇತ್ರದಲ್ಲಿ ಎಲ್ಲರನ್ನು ಕರೆತಂದು, ಒಮ್ಮೆಲೆ ಚುನಾವಣೆ ಎದುರಿಸಿರುವುದು, ಅತಿ ಆಯ್ತು ಎಂದು ಅನಿಸುತ್ತಿದೆ. ಜೆಡಿಎಸ್ ನವರನ್ನು ನಾವು ಸರಿ ಇಲ್ಲ ಎಂದು ಹೇಳಿಯಾಗಿದೆ. ಈಗ ನೀವು ಹೇಳಿ ಎಂದರು.

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...