ಕೋಲಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಅರಳುವ ತವಕದಲ್ಲಿ ಕಮಲ..!

Lok Sabha Election 2019 : ಕಳೆದ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅಧಿಕ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಸ್ವಪಕ್ಷೀಯ ನಾಯಕರಿಂದಲೇ ವಿರೋಧ ಇದ್ದಾಗ್ಯೂ ಕ್ಷೇತ್ರದಲ್ಲಿ ಅವರಿಗೆಂದೆ ಒಂದಷ್ಟು ಅಭಿಮಾನಿಗಳ, ಕಾರ್ಯಕರ್ತರ ಬೆಂಬಲವಿದೆ. ಹೀಗಾಗಿ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ವಾದವೂ ಕ್ಷೇತ್ರದಲ್ಲಿದೆ.

MAshok Kumar | news18
Updated:April 22, 2019, 3:17 PM IST
ಕೋಲಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಅರಳುವ ತವಕದಲ್ಲಿ ಕಮಲ..!
ಕೆ.ಎಚ್.ಮುನಿಯಪ್ಪ ಮತ್ತು ಎಸ್.ಮುನಿಸ್ವಾಮಿ.
MAshok Kumar | news18
Updated: April 22, 2019, 3:17 PM IST
ಬಂಗಾರ ಬೆಳೆಯುವ ನಾಡು ಎಂದು ಖ್ಯಾತಿಪಡೆದಿರುವ ಕೋಲಾರದಲ್ಲಿ ಪ್ರಸ್ತುತ ಚಿನ್ನವೂ ಇಲ್ಲ, ಕುಡಿಯಲು ನೀರೂ ಇಲ್ಲ.. ಇನ್ನೂ ಕೃಷಿಯ ಬಗ್ಗೆ ಕೇಳದಿರುವುದೇ ವಾಸಿ ಎಂಬ ಪರಿಸ್ಥಿತಿ ಇದೆ. ಇಂದು ಇಡೀ ಕೋಲಾರದ ದೊಡ್ಡ ಸಮಸ್ಯೆ ಎಂದರೆ ಕುಡಿಯುವ ನೀರು. ಇನ್ನೂ ಶತಮಾನಗಳಿಂದ ಜಿಲ್ಲೆಯನ್ನು ಕಾಡುತ್ತಿರು ಅಸ್ಪೃಶ್ಯತೆ ಕ್ಷೇತ್ರದ ಅಭಿವೃದ್ದಿಗೆ ದೊಡ್ಡ ತೊಡಕಾಗಿದೆ. ಇದರ ಜೊತೆಗೆ ನಿರುದ್ಯೋಗ ಹಾಗೂ ಮೂಲಭೂತ ಸೌಕರ್ಯದಿಂದಲೂ ಇಲ್ಲಿನ ಜನ ವಂಚಿತರಾಗಿದ್ದಾರೆ.

ಕ್ಷೇತ್ರದ ನೀರಿನ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಪ್ರಸ್ತುತ ಹೋರಾಟಗಳು ತೀವ್ರವಾಗಿರುವ ದಿನಗಳಲ್ಲೇ ಮಹತ್ತರವಾದ ಚುನಾವಣೆ ಎದುರಾಗಿರುವುದು ವಿಶೇಷ. ಈ ಹೋರಾಟಗಳು ಹಾಲಿ ಸಂಸದ ಕೆ.ಎಚ್. ಮುನಿಯಪ್ಪನವರಿಗೆ ಬಿಸಿ ತಾಗಿಸುತ್ತಿರುವುದು ಸುಳ್ಳಲ್ಲ. ಅಲ್ಲದೆ ಮತದಾರರು ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಕ್ಷೇತ್ರದ ನೈಜ ಸಮಸ್ಯೆಗಳೇನು? ಹಾಲಿ ಸಂಸದರ ಮೇಲೆ ಜನರ ಆಕ್ರೋಶಕ್ಕೆ ಕಾರಣಗಳೇನು? ಬಿಜೆಪಿ ಪಕ್ಷದ ರಣತಂತ್ರವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಕೋಲಾರ ಎಂಬ ಕಾಂಗ್ರೆಸ್ ಕೋಟೆ  : ಕಾಂಗ್ರೆಸ್ ಪಕ್ಷದ ಮಟ್ಟಿಗೆ ಕೋಲಾರ ಭದ್ರಕೋಟೆ. 1951ರಿಂದ 2014ರವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಪಕ್ಷಗಳಿಗೆ ಅಧಿಕಾರದ ಅವಕಾಶವೇ ಇಲ್ಲ ಎಂಬಂತ ಪರಿಸ್ಥಿತಿ ಇದೆ. ಅದರಲ್ಲೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್​. ಮುನಿಯಪ್ಪ 1991 ರಿಂದ ಈವರೆಗೆ ಸತತ 7 ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ : ಚುನಾವಣೆ ಸಮೀಕ್ಷೆ; ಬೆಂಗಳೂರು ದಕ್ಷಿಣದಲ್ಲಿ ದಶಕಗಳ ಬಿಜೆಪಿ ಪಾರುಪತ್ಯಕ್ಕೆ ಕಾಂಗ್ರೆಸ್​ ಹಾಕತ್ತಾ ಬ್ರೇಕ್​?

ಈ ಚುನಾವಣೆಯಲ್ಲೂ ತಾನು ಗೆದ್ದೆ ಗೆಲ್ಲುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿದೆ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಕೆ.ಎಚ್​. ಮುನಿಯಪ್ಪನವರ ಗೆಲುವು ಅಷ್ಟು ಸುಲಭವಲ್ಲ ಎಂದು ವಿಶ್ಲೇಷಿಸುತ್ತಿದ್ದಾರೆ ಚಿನ್ನದ ನಾಡಿನ  ಕೆಲ ಪ್ರಗತಿಪರರು. ಅದಕ್ಕೆ ಕಾರಣಗಳು ಸಾಕಷ್ಟಿವೆ.

ಮುನಿಯಪ್ಪನಿಗೆ ಕಾಡುತ್ತಿರುವ ವಿರೋಧಿ ಅಲೆ : ಕೋಲಾರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಇನ್ನೂ ಕೆ.ಎಚ್. ಮುನಿಯಪ್ಪ ಅವರಿಗೆ ಪ್ರಬಲ ಎದುರಾಳಿ ಅಭ್ಯರ್ಥಿಯೇ ಇಲ್ಲ. ಈ  ಕಾರಣಕ್ಕೆ ಅವರ ಗೆಲುವಿನ ಓಟಕ್ಕೆ ತಡೆ ಹಾಕುವುದು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿ ಬದಲಾಗಿದೆ.
Loading...

28 ವರ್ಷದ ಅಧಿಕಾರ ಅವಧಿಯಲ್ಲಿ ಸಂಸದ ಮುನಿಯಪ್ಪ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಸ್ವತಃ ಜನರೆ ಬದಲಾವಣೆ ಬಯಸಿರುವುದು ಮುನಿಯಪ್ಪನಿಗೆ ನುಂಗಲಾರದ ತುತ್ತಾಗಿದೆ.

ಜನರ ಈ ಆಕ್ರೋಶಕ್ಕೆ ಕಾರಣಗಳೂ ಸಾಕಷ್ಟಿದೆ. ಕೋಲಾರ ಚಿನ್ನದ ಗಣಿ ಒಂದು ಕಾಲದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿತ್ತು. ಚಿನ್ನದ ಗಣಿಯಿಂದ ಸುಮಾರು 60 ಸಾವಿರ ಉದ್ಯೋಗಗಳು ಸೃಷ್ಟಿಯಾಗಿತ್ತು. ಆದರೆ, ಕಳೆದ ಹಲವು ದಶಕಗಳಿಂದ ಗಣಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಸಾಮಾನ್ಯವಾಗಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಮುನಿಯಪ್ಪ ಮತ್ತೆ ಗಣಿಯನ್ನು ಕಾರ್ಯಾರಂಭಿಸುವ ಕುರಿತು ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೆ ಇದರ ಬಗ್ಗೆ ಸಂಸದರು ಲೋಕಸಭೆ ಕಲಾಪಗಳಲ್ಲಿ ತುಟಿಬಿಚ್ಚಿಲ್ಲ.

ಇದನ್ನೂ ಓದಿ : ಕೆ.ಎಚ್​​​ ಮುನಿಯಪ್ಪ ವಿರುದ್ಧ ಪ್ರಚಾರ: ಮತ ಹಾಕದಂತೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್​​ ಕರೆ!

ಇದಲ್ಲದೆ ಸಾಮಾನ್ಯವಾಗಿ ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬರಡು ಪ್ರದೇಶಗಳು. ಇಲ್ಲಿ ಅಂತರ್ಜಲ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಕೆಸಿ ವ್ಯಾಲಿ (ಕೋರಮಂಗಲ ಚಲ್ಲಘಟ್ಟ ವ್ಯಾಲಿ) ಹಾಗೂ ಹೆಚ್​.ಎನ್ ವ್ಯಾಲಿ (ನಾಗವಾರ ಹೆಬ್ಬಾಳ) ಯೋಜನೆಯ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಶುದ್ದೀಕರಿಸಿ ಸಂಸ್ಕರಿಸಿ ಪೈಪ್​ಲೈನ್ ಮೂಲಕ ಮೂರು ಜಿಲ್ಲೆಗಳ ಕೆರೆಗಳಿಗೆ ಹರಿಸಿ ಅಂರ್ಜಲ ಮಟ್ಟ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ ಈ ಯೋಜನೆಗೆ ಸುಪ್ರೀಂ ತಡೆ ನೀಡಿರುವ ಹಿನ್ನೆಲೆಯಲ್ಲಿ ಸಂಸದರು ಈ ಮಹತ್ವದ ಯೋಜನೆ ಕುರಿತು ಆಸಕ್ತಿವಹಿಸದಿರುವುದು ಹಾಗೂ 130 ಕೋಟಿ ಮೌಲ್ಯದ ಎರಗೋಳು ನೀರಿನ ಯೋನೆಯ ಬಗ್ಗೆಯೂ ತಲೆ ಕೆಡಿಸಿಕೊಳ್ಳದಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದಲ್ಲದೆ ಯುಪಿಎ ಸರಕಾರದ ಅವಧಿಯಲ್ಲಿ ಮುನಿಯಪ್ಪನವರು ರೈಲ್ವೆ ಇಲಾಖೆ ಸಹಾಯಕ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಕೋಲಾರದಲ್ಲಿ ರೈಲ್ವೆ ಭೋಗಿ ನಿರ್ಮಿಸುವ ಕೈಗಾರಿಕೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಶಂಕುಸ್ಥಾಪನೆ ನಂತರ ಯಾವುದೇ ಕೆಲಸ ಆರಂಭಿಸಿಲ್ಲ. ಹೀಗೆ 28 ವರ್ಷ ಅಧಿಕಾರದಲ್ಲಿದ್ದರೂ ಮುನಿಯಪ್ಪನವರು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ ಹಾಗೂ ಜಿಲ್ಲೆಯ ಮೂಲ ಸಮಸ್ಯೆಗಳಿಗೆ ದೂರದೃಷ್ಟಿಯಿಂದ ಯಾವುದೇ ಯೋಜನೆ ಕೈಗೊಂಡಿಲ್ಲ ಎಂಬುದು ಅವರ ಮೇಲಿನ ಬಲವಾದ ಆರೋಪ.

ಪಕ್ಷದಲ್ಲಿದೆ ಒಳಬೇಗುದಿ : ಜಿಲ್ಲೆಯ ಮತದಾರರ ಮನಸ್ಥಿತಿ ಒಂದೆಡೆಯಾದರೆ ಪಕ್ಷದೊಳಗಿನ ಒಳಬೇಗುದಿ ಸ್ವತಃ ಕಾಂಗ್ರೆಸ್ ಸೋಲಿಗೆ ಬಲೆ ಹೆಣೆಯುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ, ಎನ್​ಹೆಚ್ ವ್ಯಾಲಿ ನೀರು ಹರಿಸುವಂತಿಲ್ಲ: ಸುಪ್ರೀಂ ಆದೇಶ

ಮುನಿಯಪ್ಪನವರ ಅತಿಯಾದ ಆತ್ಮವಿಶ್ವಾಸ ಹಾಗೂ ದರ್ಪದ ನಡವಳಿಕೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಇದೇ ಕಾರಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮುಖಂಡತ್ವದಲ್ಲಿ ಒಂದು ಗುಂಪು ಮುನಿಯಪ್ಪನಿಗೆ ಟಿಕೆಟ್ ನೀಡಬಾರದು ಎಂದು ಹೈಕಮಾಂಡ್​ಗೆ ಮನವಿ ಮಾಡಿತ್ತು. ಆದರೆ, ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕದೆ ಮತ್ತೆ ಹಾಲಿ ಸಂಸದರಿಗೆ ಟಿಕೆಟ್ ನೀಡಿದೆ. ಹಾಗೆಂದು ಅವರ ಗೆಲುವು ಪಕ್ಕ ಎನ್ನಲಾಗದು.

ಏಕೆಂದರೆ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೆ.ಜಿ.ಎಫ್, ಬಂಗಾರಪೇಟ್, ಕೋಲಾರ ಹಾಗೂ ಮಾಲೂರು ಸೇರಿದಂತೆ ಕೋಲಾರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್ ಹಾಗೂ 2 ಕಡೆ ಜೆಡಿಎಸ್ ಶಾಸಕರಿದ್ದಾರೆ. ಆದರೆ, ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೊರತುಪಡಿಸಿ ಜಿಲ್ಲೆಯಲ್ಲಿ ಬೇರೆ ಯಾವ ಶಾಸಕರೂ ಸಹ ಮುನಿಯಪ್ಪ ಪರ ಕೆಲಸ ಮಾಡುತ್ತಿಲ್ಲ. ಅಲ್ಲದೆ ಸ್ಪೀಕರ್ ಸುರೇಶ್ ಕುಮಾರ್ ಚುನಾವಣೆ ಮುಗಿಯುವವರೆಗೆ ತಾವು ಜಿಲ್ಲೆಗೆ ಬರುವುದಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧನ ವ್ಯಕ್ತಪಡಿಸಿರುವುದು ಸಹ ಮುನಿಯಪ್ಪನಿಗೆ ಕಂಟಕವಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ.

ಬಿಜೆಪಿಗಿದೆಯೇ ಚಾನ್ಸ್? :  ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಆದರೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸುಮಾರು 2 ಲಕ್ಷ ಮತ ಚಲಾವಣೆಯಾಗಿತ್ತು. ಅಲ್ಲದೆ ಜಿಲ್ಲೆಯಲ್ಲಿ ಎಡಗೈ – ಬಲಗೈ ಜಾತಿ ರಾಜಕಾರಣದ ಲಾಭ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟವಾಗಿದೆ.

ಕೋಲಾರ ಮೂಲತಃ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಈ ಕ್ಷೇತ್ರದಲ್ಲಿ ಎಸ್​ಸಿ ಸಮುದಾಯದ ಮತಗಳೇ ನಿರ್ಣಾಯಕ. ಅದರದಲ್ಲೂ ಎಡಗೈ-ಬಲಗೈ ಎಂಬ ಎರಡು ಪಂಗಡಗಳು ಇಲ್ಲಿನ ರಾಜಕೀಯಲ್ಲಿ ಬಲಿಷ್ಠವಾಗಿವೆ. ಕೆ.ಎಚ್. ಮುನಿಯಪ್ಪ ಎಡಗೈ ಪಂಗಡಕ್ಕೆ ಸೇರಿದವರು. ಆದರೆ, ಕಳೆದ ಒಂದು ದಶಕದಿಂದ ಇಲ್ಲಿನ ಬಲಗೈ ಪಂಗಡದವರು ತಮ್ಮ ಜಾತಿಗೆ ಸಂಸದ ಟಿಕೆಟ್ ಬೇಡಿಕೆ ಇಡುತ್ತಲೆ ಇದೆ. ಆದರೆ, ಅವರ ಮನವಿಗೆ ಈವರೆಗೆ ಕಾಂಗ್ರೆಸ್ ಕಿವಿಗೊಟ್ಟಿರಲಿಲ್ಲ.

ಇದನ್ನೂ ಓದಿ : ಲೋಕಸಭಾ ಚುನಾವಣೆ: ಸಂಸದ ಕೆ.ಎಚ್​​​​ ಮುನಿಯಪ್ಪ ಸ್ಪರ್ಧೆಗೆ ಕಾಂಗ್ರೆಸ್ಸಿನಲ್ಲೇ ಭಾರೀ ವಿರೋಧ!

ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಲಗೈ ಪಂಗಡಕ್ಕೆ ಸೇರಿದ ಎಸ್​. ಮುನಿಸ್ವಾಮಿ ಎಂಬುವವರಿಗೆ ಟಿಕೆಟ್​ ನೀಡಿದೆ. ಬೆಂಗಳೂರಿನ ಕಾಡುಗೋಡಿ ಪಾಲಿಕೆ ಸದಸ್ಯರಾಗಿದ್ದ ಇವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಕನಸಿನೊಂದಿಗೆ ಕೋಲಾರಕ್ಕೆ ವಲಸೆ ಬಂದಿದ್ದಾರೆ. ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ 4.5 ಲಕ್ಷ ಬಲಗೈ ಪಂಗಡದವರು ಇವರಿಗೆ ಮತ ಚಲಾಯಿಸಿದರೆ ಮುನಿಸ್ವಾಮಿಯ ಗೆಲುವು ಕಷ್ಟವೇನಲ್ಲ. ಆದರೆ, ಇವರದು ಕ್ಷೇತ್ರಕ್ಕೆ ಅಪರಿಚಿತವಾದ ಮುಖ ಅಲ್ಲದೆ ಕ್ಷೇತ್ರದಲ್ಲಿ ಬಿಜೆಪಿಗೆ ಬೂತ್ ಮಟ್ಟದ ಕಾರ್ಯಕರ್ತರಿಲ್ಲ ಎಂಬುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಕಳೆದ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅಧಿಕ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಸ್ವಪಕ್ಷೀಯ ನಾಯಕರಿಂದಲೇ ವಿರೋಧ ಇದ್ದಾಗ್ಯೂ ಕ್ಷೇತ್ರದಲ್ಲಿ ಅವರಿಗೆಂದೆ ಒಂದಷ್ಟು ಅಭಿಮಾನಿಗಳ, ಕಾರ್ಯಕರ್ತರ ಬೆಂಬಲವಿದೆ. ಹೀಗಾಗಿ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ವಾದವೂ ಇದೆ. ಇದೆ ಕಾರಣಕ್ಕೆ ಮುನಿಯಪ್ಪ ಅತಿಯಾದ ಆತ್ಮವಿಶ್ವಾದಿಂದ ಈವರೆಗೆ ಸರಿಯಾಗಿ ಚುನಾವಣಾ ಪ್ರಚಾರವನ್ನೇ ನಡೆಸಿಲ್ಲ.

ಆದರೂ, ಕ್ಷೇತ್ರದ ಜನ ಈಬಾರಿ ಬದಲಾವಣೆಯ ಮನಸ್ಸು ಮಾಡಿರುವುದಂತೂ ದಿಟ. ಒಂದು ವೇಳೆ ಇದು ಸಾಧ್ಯವಾದರೆ ಮೊದಲ ಬಾರಿಗೆ ಕೋಲಾರದ ಕೋಟೆಯ ಮೇಲೆ ಬಿಜೆಪಿಯ ಬಾವುಟ ಹಾರಿದರೂ ಅಚ್ಚರಿ ಇಲ್ಲ.
First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626