ಬಾಗಲಕೋಟೆಯಲ್ಲಿ ಕಾಂಗ್ರೆಸ್​​ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ

ಜೆಡಿಎಸ್ ಅಭ್ಯರ್ಥಿ ಸುನಿತಾ ಚವಾಣ್​ ಅವರ ಪತಿ ನಾಗಠಾಣ ಜೆಡಿಎಸ್​ ಶಾಸಕ ದೇವಾನಂದ ಅವರ ಸಂಬಂಧಿ ರಾಮಚಂದ್ರ ದೊಡಮನಿ ಮತ್ತು ಅವರ ಆಪ್ತ ದೇವಪ್ಪ ತದ್ದೇವಾಡಿ ಅವರ ಮನೆ ಮೇಲೆ ದಾಳಿ ನಡೆದಿದೆ.

G Hareeshkumar | news18
Updated:April 20, 2019, 6:31 PM IST
ಬಾಗಲಕೋಟೆಯಲ್ಲಿ ಕಾಂಗ್ರೆಸ್​​ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ
ಐಟಿ ದಾಳಿ ನಡೆಸಿದ ಮನೆ
G Hareeshkumar | news18
Updated: April 20, 2019, 6:31 PM IST
ಬೆಂಗಳೂರು (ಏ. 20) : ಸಚಿವ ಶಿವಾನಂದ್ ಪಾಟೀಲ್  ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ  ಸುನೀತಾ ಚೌಹಾಣ್ ಅವರ ಆಪ್ತರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸುನಿತಾ ಚವಾಣ್​ ಅವರ ಪತಿ ನಾಗಠಾಣ ಜೆಡಿಎಸ್​ ಶಾಸಕ ದೇವಾನಂದ ಅವರ ಸಂಬಂಧಿ ರಾಮಚಂದ್ರ ದೊಡಮನಿ ಮತ್ತು ಅವರ ಆಪ್ತ ದೇವಪ್ಪ ತದ್ದೇವಾಡಿ ಅವರ ಮನೆ ಮೇಲೆ ದಾಳಿ ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿ ದಾಳಿ ನಡೆದಿದ್ದು, 10 ಅಧಿಕಾರ ತಂಡ ದಾಳಿ ನಡೆಸಿ ದಾಖಲೆ ಪರಿಸೀಲನೆ ನಡೆಸುತ್ತಿದೆ. ದಾಳಿ ವೇಳೆ 12 ಲಕ್ಷ ರೂ. ನಗದು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಶುಕ್ರವಾರ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಇಂದು ಜಿಲ್ಲೆಯಿಂದ ತೆರಳಿದ ತಕ್ಷಣ ಐಟಿ ದಾಳಿ ನಡೆದಿದೆ.

ಐಟಿ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು

ಐಟಿ ಅಧಿಕಾರಿಗಳು ದಾಳಿ ಮಾಡುವ ಕುರಿತು ಮೊದಲೇ ಗೊತ್ತಿತ್ತು. ಏಕಾಏಕಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಯಾವುದೇ ಆಕ್ರಮ ಹಣ ಸಿಕ್ಕಿಲ್ಲ. ಐಟಿ ದಾಳಿ ಮಾಡಿರುವುದು ವಿರೋಧಿಗಳ ಷಡ್ಯಂತ್ರ. ಸೋಲುವ ಭೀತಿಯಿಂದ ಎದುರಾಳಿಗಳು ಚುನಾವಣೆ ದಿಕ್ಕು ತಪ್ಪಿಸಲು ಈ ತಂತ್ರ ಹೆಣೆದಿದ್ದಾರೆ. ಎಂದು ಶಾಸಕ ದೇವಾನಂದ ಚವಾಣ್​ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್​ಗೆ ಐಟಿ ಶಾಕ್

ಬಾಗಲಕೋಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್​ ಆಪ್ತರಾದ ಆರೀಫ್​ ಕಾರ್ಲೆಕರ್​ ಮತ್ತು ಯಾಸೀನ್​ ಮನೆಯ ಮೇಲೆ ಮತ್ತು ಡಿಸಿಸಿ ಬ್ಯಾಂಕ್​ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಇವರಿಬ್ಬರೂ ಬಾಗಲಕೋಟೆ ಡಿಸಿಸಿ ಬ್ಯಾಂಕ್​ನ ನೌಕರರು.

 ಇದನ್ನೂ ಓದಿ: ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ಆಪ್ತನ ಮನೆ ಮೇಲೆ ಐಟಿ ದಾಳಿ

ಬಾಗಲಕೋಟೆಯಲ್ಲಿ ಸಚಿವ ಶಿವಾನಂದ್ ಪಾಟೀಲ್ ಅವರ ಆಪ್ತರಾದ ಯಾಸೀನ್ ತುಮ್ಮಹಟ್ಟಿ ಮತ್ತು ಆರಿಫ್ ಅವರ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಳೇಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ದಾಳಿಯಾಗಿದೆ. ಯಾಸೀನ್ ತುಮ್ಮರಹಟ್ಟಿ ನವನಗರದಲ್ಲಿರುವ ಡಿಸಿ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿ ಬರುತ್ತಿದ್ದ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

 
First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...