ಬಳ್ಳಾರಿ ಎಂಪಿ ಬಿಜೆಪಿ ಟಿಕೆಟ್ ಯಾರಿಗೆ? ತಮ್ಮವರಿಗೇ ಟಿಕೆಟ್ ಕೊಡ್ತಾರಾ ಶ್ರೀರಾಮುಲು?

G Hareeshkumar | news18
Updated:October 9, 2018, 6:20 PM IST
ಬಳ್ಳಾರಿ ಎಂಪಿ ಬಿಜೆಪಿ ಟಿಕೆಟ್ ಯಾರಿಗೆ? ತಮ್ಮವರಿಗೇ ಟಿಕೆಟ್ ಕೊಡ್ತಾರಾ ಶ್ರೀರಾಮುಲು?
  • Advertorial
  • Last Updated: October 9, 2018, 6:20 PM IST
  • Share this:
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ(ಅ.09): ರಾಜ್ಯದಲ್ಲಿ ಲೋಕಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಪಕ್ಷದಿಂದ ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಬಳ್ಳಾರಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದನ್ನು ಸ್ವತಃ ಬಿಜೆಪಿ ಉಪಾಧ್ಯಕ್ಷ ಬಿ ಶ್ರೀರಾಮುಲು ನಿರ್ಧರಿಸಲಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಬೇಕೋ? ಇಲ್ಲವೇ ಹೊರಗಡೆಯವರೆಗೆ ಟಿಕೆಟ್ ಕೊಡುತ್ತಾರೋ ಎನ್ನುವ ಬಗ್ಗೆ ನ್ಯೂಸ್ 18 ಕನ್ನಡ ಇನ್ ಸೈಡ್ ಸ್ಟೋರಿ ಇಲ್ಲಿದೆ. ಓದಿ

ರಾಜ್ಯದಲ್ಲಿ ನಡೆಯುತ್ತಿರುವ ಮೂರು ಲೋಕಸಭಾ ಉಪ ಚುನಾವಣೆಯಲ್ಲಿ ಬಳ್ಳಾರಿ ಚುನಾವಣಾ ನೇತೃತ್ವವನ್ನು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ಶ್ರೀರಾಮುಲು ವಹಿಸಿದ್ದಾರೆ. ಇದು ಶ್ರೀರಾಮುಲು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ ತಮ್ಮ ಕುಟುಂಬದಲ್ಲಿಯೇ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿರುವುದು ಇದಕ್ಕೆ ಕಾರಣ. ತಮ್ಮ ಕುಟುಂಬದಲ್ಲಿಯೇ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದು, ಇನ್ನಿಬ್ಬರು ಪ್ರಮುಖ ಆಕಾಂಕ್ಷಿಗಳು ಹೊರಗಡೆಯವರು.

ಶ್ರೀರಾಮುಲು ಸಹೋದರಿ ಮಾಜಿ ಸಂಸದ ಬಿ ಶಾಂತ, ಹಿರಿಯ ಸಹೋದರ, ಮಾಜಿ ಸಂಸದ ಸಣ್ಣ ಫಕೀರಪ್ಪ ಹಾಗೂ ಸೋದರಳಿಯ ಮಾಜಿ ಶಾಸಕ ಟಿ ಎಚ್ ಸುರೇಶ್ ಬಾಬು ತಮ್ಮ ಕುಟುಂಬದ ಟಿಕೆಟ್ ಪ್ರಮುಖ ಆಕಾಂಕ್ಷಿಗಳು. ಬಳ್ಳಾರಿಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರವಾಸಕ್ಕೆ ಬಂದಾಗ ಜರುಗಿದ ಸಭೆಯಲ್ಲಿ ಸಣ್ಣ ಫಕೀರಪ್ಪ ಲೋಕಸಭಾ ಚುನಾವಣೆ ಬಗ್ಗೆ ಒಲವು ತೋರಿಸಲಿಲ್ಲ. ಇನ್ನು ಮಾಜಿ ಸಂಸದೆ ಜೆ ಶಾಂತ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಚುನಾವಣೆಯನ್ನು ಶ್ರೀರಾಮುಲು ನೋಡಿಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಪರಾಜಿತಗೊಂಡ ಶ್ರೀರಾಮುಲು ಸೋದರಳಿಯ ಟಿ ಎಚ್ ಸುರೇಶ್ ಬಾಬು ಸ್ಪರ್ಧಿಸಲು ಉತ್ಸುಕತೆ ತೋರಿಸಿದ್ದಾರೆ. ಇನ್ನೆರಡು ದಿನದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಬಳ್ಳಾರಿಯ ಶ್ರೀರಾಮುಲು ನಿವಾಸದಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಕುರಿತು ಮೇಲಿಂದ ಮೇಲೆ ಸಭೆಗಳು ನಡೆಯುತ್ತಿವೆ.

ಶ್ರೀರಾಮುಲು ನಿವಾಸಕ್ಕೆ ಸೋದರಳಿಯ ಸುರೇಶ್ ಬಾಬು ಭೇಟಿ ನೀಡಿರುವುದು ತಾನು ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನುವುದು ತೋರಿಸುತ್ತದೆ. ಸಂಜೆ ವೇಳೆ ಸುರೇಶ್ ಬಾಬು ನಿವಾಸದಲ್ಲಿ ಶ್ರೀರಾಮುಲು ಒನ್ ಟು ಒನ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಸಣ್ಣ ಪಕೀರಪ್ಪ ಕಣದಿಂದ ಹಿಂದೆ ಸರಿದಿದ್ದು, ಶಾಂತ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಚುನಾವಣಾ ವೆಚ್ಚವನ್ನು ಶ್ರೀರಾಮುಲು ಭರಿಸಬೇಕಾಗುತ್ತದೆ.ಇದಕ್ಕಾಗಿಯೇ ಎರಡು ಬಾರಿ ಶಾಸಕರಾಗಿದ್ದ ಜಿಲ್ಲೆಗೆ ಪರಿಚಿತರಾಗಿರುವ ಸುರೇಶ್ ಬಾಬು ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೆಚ್ಚು ಚಿಂತನೆ ನಡೆಯುತ್ತಿದೆ. ಆದರೆ ಹೊರಗಡೆಯಿಂದ ಬಿಜೆಪಿ ಮುಖಂಡ, ಮನೋವೈದ್ಯ ಡಾ ಟಿ ಆರ್ ಶ್ರೀನಿವಾಸ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಟಿಕೆಟ್ ದೊರೆಯದೇ ಹೋದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಿದೆ.ಇನ್ನು ನಿವೃತ್ತ ಚೀಫ್ ಜಸ್ಟಿಸ್ ಎನ್ ವೈ ಹನುಮಂತಪ್ಪ ಅವರ ಮಗ ಎನ್.ಸುಜಯ್ ಕೂಡ ಆಕಾಂಕ್ಷಿಯಾಗಿದ್ದಾರೆ.

ಬಳ್ಳಾರಿಯ ಲೋಕಸಭಾ ಉಪಚುನಾವಣೆಗೆ ಶ್ರೀರಾಮುಲು ಅವರೇ ಮಾಹಿತಿ ನೀಡುವ ಪ್ರಕಾರ 8 ಜನ ಆಕಾಂಕ್ಷಿಗಳಿದ್ದಾರೆ. ಕಳೆದ ಮೂರು ದಶಕಗಳಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿರುವ ಬಿಜೆಪಿ ಈ ಬಾರಿ ಉಪ ಚುನಾವಣೆ ಶ್ರೀರಾಮುಲು ಪಾಲಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಎದುರಾಳಿಯಾಗಿ ಕಾಂಗ್ರೆಸ್ ಚಾಣಕ್ಯ ಡಿ ಕೆ ಶಿವಕುಮಾರ್ ನೇತೃತ್ವ ವಹಿಸಿರುವುದು ಹೈವೋಲ್ಟೇಜ್ ಚುನಾವಣೆಗೆ ಕಾರಣವಾಗಿದೆ.

ಬರೋಬ್ಬರಿ 30 ಸಾವಿರ ಕೋಟಿ ಗಣಿ ಹಣ; ಬಳ್ಳಾರಿ ಉಸ್ತುವಾರಿಗಾಗಿ ಐವರು ಶಾಸಕರಿಂದ ಜಪ…! 

 
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ