Viral Video :"ನಿಮ್ಮ ಲಾಗಿನ್ ಟೈಮ್ ಯಾವಾಗ?" ರಿಕ್ಷಾ ಚಾಲಕನ ರಿಪ್ಲೈಗೆ ಪ್ರಯಾಣಿಕ ಫುಲ್ ಫಿದಾ

ಇತ್ತೀಚೆಗೆ ಐಟಿ ಪ್ರಯಾಣಿಕರೊಬ್ಬರು ಕಚೇರಿಗೆಂದು ತೆರಳಲು ರಿಕ್ಷಾ ಬುಕ್ ಮಾಡಿ ಅದರಲ್ಲಿ ತೆರಳುವಾಗ ಚಾಲಕನೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಕೊನೆಗೆ ಚಾಲಕ ನೀಡಿದ ರಿಪ್ಲೈ ನೋಡಿ ದಂಗಾಗಿ ಹೋದರು. ಕೂಡಲೇ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಅದು ಸಖತ್ ವೈರಲ್ ಆಗಿದೆ ಹಾಗೂ ನೆಟ್ಟಿಗರು ಈ ರಿಕ್ಷಾ ಚಾಲಕನ ರಿಪ್ಲೈಗೆ ಫಿದಾ ಆಗಿದ್ದಾರೆಂದು ಹೇಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದ ಸಿಲಿಕಾನ್ ವ್ಯಾಲಿ ಎಂದೆ ಜನಜನಿತವಾದ ನಮ್ಮ ಬೆಂಗಳೂರು (Bengaluru) ಕೇವಲ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಗಮನಸೆಳೆದ ನಗರ. ಈ ಹಿಂದೆ ದೇಶದಲ್ಲಿ ನಾಲ್ಕು ಮಹಾನಗರಗಳ ಹೆಸರುಗಳನ್ನು ಮಾತ್ರವೆ ಹೇಳಲಾಗುತ್ತಿತ್ತು, ಆದರೆ ಈಗ ಆ ನಗರಗಳ (City) ಪಟ್ಟಿಯಲ್ಲಿ ಬೆಂಗಳೂರಿನ ಹೆಸರು ಇಲ್ಲದೆ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ. ಕರ್ನಾಟಕದ (Karnataka) ರಾಜಧಾನಿಯಾಗಿರುವ ಬೆಂಗಳೂರು ಮಾಹಿತಿ ತಂತ್ರಜ್ಞಾನ (Technology) ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದ ರಾಜಧಾನಿ ಎಂದರೂ ತಪ್ಪಿಲ್ಲ. ಹಾಗಾಗಿ ಬೆಂಗಳೂರು ಕರ್ನಾಟಕದ ಮಿಕ್ಕೆಲ್ಲ ಅಥವಾ ದೇಶದ ಬೇರೆಲ್ಲ ನಗರಗಳಿಗಿಂತ ತುಸು ಭಿನ್ನವಾದ ವಾತಾವರಣವನ್ನೇ ಹೊಂದಿದೆ. ವೈವಿಧ್ಯಮಯ ಸಂಪ್ರದಾಯಗಳ ಜನರಿರುವ ಬೆಂಗಳೂರಿನಲ್ಲಿ ಜೀವನಶೈಲಿಯೂ (Lifestyle) ಇತರೆ ನಗರಗಳಿಗೆ ಹೋಲಿಸಿದರೆ ತುಸು ಭಿನ್ನವೇ ಆಗಿದೆ.

ಚಾಲಕನ ರಿಪ್ಲೈಗೆ ಪ್ರಯಾಣಿಕ ಫುಲ್ ಫಿದಾ
ಅದರಲ್ಲೂ ಬೆಂಗಳೂರಿನ ರಿಕ್ಷಾ ಅಥವಾ ಕ್ಯಾಬ್ ಚಾಲಕರೆಂದರೆ ಕೇಳಬೇಕೆ? ನಗರದಲ್ಲಿ ಮೊದಲೇ ಐಟಿ ಪ್ರತಿಭಾವಂತರ ದಂಡೇ ಇರುವುದರಿಂದ ಐಟಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಇಲ್ಲಿನ ರಿಕ್ಷಾ ಚಾಲಕರು ಬಲ್ಲರು. ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವೇ ಕಾಣಸಿಗಬಹುದಾದ ಅಂಶ ಎಂದು ಹೇಳಬಹುದು. ಇತ್ತೀಚೆಗೆ ಐಟಿ ಪ್ರಯಾಣಿಕರೊಬ್ಬರು ಕಚೇರಿಗೆಂದು ತೆರಳಲು ರಿಕ್ಷಾ ಬುಕ್ ಮಾಡಿ ಅದರಲ್ಲಿ ತೆರಳುವಾಗ ಚಾಲಕನೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಕೊನೆಗೆ ಚಾಲಕ ನೀಡಿದ ರಿಪ್ಲೈ ನೋಡಿ ದಂಗಾಗಿ ಹೋದರು. ಕೂಡಲೇ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಅದು ಸಖತ್ ವೈರಲ್ ಆಗಿದೆ ಹಾಗೂ ನೆಟ್ಟಿಗರು ಈ ರಿಕ್ಷಾ ಚಾಲಕನ ರಿಪ್ಲೈಗೆ ಫಿದಾ ಆಗಿದ್ದಾರೆಂದು ಹೇಳಬಹುದು.

ಪ್ರಯಾಣಿಕ ಚಾಲಕನೊಂದಿಗೆ ನಡೆಸಿದ ಸಂಭಾಷಣೆ ಏನು?
ಅಷ್ಟಕ್ಕೂ ಆ ಪ್ರಯಾಣಿಕ ಚಾಲಕನೊಂದಿಗೆ ನಡೆಸಿದ ಸಂಭಾಷಣೆ ಏನು? ಬಳಕೆದಾರರು ಬೆರಗಾಗುವಂತೆ ಮಾಡಿದ ರಿಕ್ಷಾ ಚಾಲಕ ನೀಡಿದ ಆ ರಿಪ್ಲೈ ಆದರೂ ಏನು ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: Love Birds: ಬಸ್​ನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ ಪಕ್ಷಿಗಳು! ಕಂಡಕ್ಟರ್​ಗೆ ಬಿತ್ತು ಭಾರಿ ದಂಡ

ಮೊದಲೇ ಬೆಂಗಳೂರು ಟ್ರಾಫಿಕ್ ದಟ್ಟಣೆಗಳಿಗೆ ಹೆಸರುವಾಸಿ. ಹಾಗಾಗಿ ಬಹಳಷ್ಟು ಜನರು ಅದರಲ್ಲೂ ವಿಶೇಷವಾಗಿ ಐಟಿ ನೌಕರರು ರಿಕ್ಷಾ ಅಥವಾ ಕ್ಯಾಬ್‍ಗಳನ್ನು ಪ್ರೀ ಬುಕ್ಕಿಂಗ್ ಮಾಡುತ್ತಿರುತ್ತಾರೆ. ಇಂತಹುದೆ ಒಂದು ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ರಿಕ್ಷಾ ಒಂದನ್ನು ತಮ್ಮ ಕಚೇರಿ ಸ್ಥಳಕ್ಕೆ ಬುಕ್ ಮಾಡಿದ್ದರು. ರಿಕ್ಷಾ ಚಾಲಕ ಮುಂಚಿತವಾಗಿಯೇ ಪ್ರಯಾಣಿಕರನ್ನು ಕುರಿತು ಮಾರ್ಗ ಮಧ್ಯದಲ್ಲಿ ರಿಕ್ಷಾಗೆ ಇಂಧನ ತುಂಬಿಸಲು ನಿಲ್ಲಿಸುವುದಾಗಿ ತಿಳಿಸಿದ್ದ ಹಾಗೂ ಪ್ರಯಾಣಿಕ ಅದಕ್ಕೆ ಸಮ್ಮತಿಸಿದ್ದ.

"ಲಾಗಿನ್ ಕಬ್ಕಾ ಹೈ"
ಹೀಗಿರುವಾಗ ಟ್ರಾಫಿಕ್ ದಟ್ಟನೆ ನೋಡಿದ ಪ್ರಯಾಣಿಕ ರಿಕ್ಷಾ ಚಾಲಕನನ್ನು ಕುರಿತು ನನಗೆ ವಿಳಂಬವಾಗುತ್ತಿದೆ ಎಲ್ಲಿಯೂ ನಿಲ್ಲಿಸದೇ ನೇರವಾಗಿ ತನ್ನನ್ನು ಕಚೇರಿಯ ಸ್ಥಳಕ್ಕೆ ಬಿಡು ಎಂದು ಕೇಳಿದಾಗ ರಿಕ್ಷಾ ಚಾಲಕ ಕೊಟ್ಟ ಉತ್ತರ ಮಾತ್ರ ಅದ್ಭುತವಾಗಿತ್ತು. ಆ ಸಂದರ್ಭದಲ್ಲಿ ರಿಕ್ಷಾ ಚಾಲಕನು ಪ್ರಯಾಣಿಕನನ್ನು ಕುರಿತು ಹಿಂದಿಯಲ್ಲಿ "ಲಾಗಿನ್ ಕಬ್ಕಾ ಹೈ" ಅಂದರೆ ನಿಮ್ಮ ಲಾಗಿನ್ ಮಾಡುವ ಟೈಮ್ ಯಾವಾಗಿದೆ ಎಂದು ಪ್ರಶ್ನಿಸಿದ್ದಾನೆ. ಈ ರಿಪ್ಲೈನಿಂದ ಪ್ರಯಾಣಿಕನಿಗೆ ಚಾಲಕನಿಗೂ ಇಂತಹ ಅಂಶಗಳ ಬಗ್ಗೆ ಗೊತ್ತಿರುವುದನ್ನು ನೋಡಿ ಅಚ್ಚರಿಯಾಗಿದೆ ಮತ್ತು ಇದನ್ನು ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಚಾಲಕನಿಗೂ ಸಹ ಐಟಿ ವಲಯದಲ್ಲಿ ಈ ರೀತಿಯ ಲಾಗಿನ್ ನಿಯಮಾವಳಿಗಳು ಇರುವ ಬಗ್ಗೆ ಗೊತ್ತಿರುವ ವಿಷಯ ತಿಳಿದು ಆನ್‍‍ಲೈನ್ ಮಾಧ್ಯಮದಲ್ಲಿ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೈರಲ್ ವಿಡಿಯೋಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಜನ
ಈ ಬಗ್ಗೆ ಪೋಸ್ಟ್ ನೋಡಿ ಪ್ರತಿಕ್ರಯಿಸಿರುವ ಒಬ್ಬ ವ್ಯಕ್ತಿ, "ಸರಿಯಾದ ಪದ, ಲಾಗಿನ್" ಎಂದು ಹೇಳಿದ್ದರೆ, ಇನ್ನೊಬ್ಬರು, "ನಾನು ಈ ಹಿಂದೆ 2012 ರಲ್ಲೇ ಇಂತಹ ಸ್ಥಿತಿಯನ್ನು ಅನುಭವಿಸಿರುವೆ" ಎಂದು ಬರೆದುಕೊಂಡಿದ್ದಾರೆ. ಮಗದೊಬ್ಬರು, "ಅವರು ಉಬರ್ ಪ್ರಾರಂಭಿಸಲು ಲಾಗಿನ್ ಮಾಡಬೇಕು, ಹಾಗಾಗಿ ಇದು ಸೇಮ್" ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kolara: ನೆಲದಲ್ಲಿ ಕೂತು ಪಾಠ ಕೇಳಿದ್ದ ಮಕ್ಕಳು! ಹೊಸ ಕಟ್ಟಡ ನಿರ್ಮಾಣಕ್ಕೆ 30 ಲಕ್ಷ ಅನುದಾನ!ಒಟ್ಟಾರೆಯಾಗಿ ಈ ರೀತಿಯ ವಿದ್ಯಮಾನಗಳು, ನಗರದ ಒಂದು ವಿಶಿಷ್ಟವಾದ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಂತಹ ರೋಚಕ ಸಂಗತಿಗಳು ಹಳೆಯ, ಸಾಂಪ್ರದಾಯಿಕ ಶೈಲಿಗಳೊಂದಿಗೆ ಆಧುನಿಕತೆಯ ಛಾಪು ಹೇಗೆ ಅಡಕಗೊಳ್ಳುತ್ತಿದೆ ಎಂಬುದನ್ನು ಕಣ್ಣಾರೆ ಕಾಣಲು ಬೆಂಗಳೂರು ಬಹುಶಃ ಉತ್ತಮ ಉದಾಹರಣೆ ಎಂದರೂ ತಪ್ಪಾಗಲಾರದು. ಇನ್ನೊಂದು ವಿಷಯ ಎಂದರೆ ನಗರದ ರಿಕ್ಷಾ ಚಾಲಕರು ಪ್ರಯಾಣಿಕ ಸ್ನೇಹಿ ಅನ್ನುವುದಕ್ಕೆ ಹೆಚ್ಚು ಕಡಿಮೆ ಯಾವುದೇ ಭಾಷೆಗಳಲ್ಲೂ ಅಲ್ಪ ಸ್ವಲ್ಪ ತಿಳಿವಳಿಕೆ ಹೊಂದಿದ್ದು ಉತ್ತರಿಸುವ ಸಾಮರ್ಥ್ಯ ಹೊಂದಿರುವುದೇ ಸಾಕ್ಷಿಯಾಗಿದೆ ಅಂತ ಹೇಳಬಹುದು.
Published by:Ashwini Prabhu
First published: