'ನಾವೆಲ್ಲಾ ಒಂದೇ' ಎಂದ ಸಮ್ಮಿಶ್ರ ಸರ್ಕಾರದ ಹಿರಿಯ ನಾಯಕರು; ಆಂತರಿಕ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ?

news18
Updated:August 31, 2018, 9:10 PM IST
'ನಾವೆಲ್ಲಾ ಒಂದೇ' ಎಂದ ಸಮ್ಮಿಶ್ರ ಸರ್ಕಾರದ ಹಿರಿಯ ನಾಯಕರು; ಆಂತರಿಕ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ?
news18
Updated: August 31, 2018, 9:10 PM IST
ನ್ಯೂಸ್ 18 ಕನ್ನಡ 

ಬೆಂಗಳೂರು ( ಆಗಸ್ಟ್ 31) : ಹಲವು ದಿನಗಳಿಂದ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದ ನಾಯಕರಲ್ಲಿ ಎದ್ದಿದ್ದ ಆಂತರಿಕ ಕಿತ್ತಾಟಕ್ಕೆ ಇಂದು ತಾತ್ಕಾಲಿಕ ತೆರೆ ಬಿದ್ದಂತಾಗಿದೆ. ಸಮ್ಮಿಶ್ರ ಸರ್ಕಾರದ ಮೂರನೇ ಸಮನ್ವಯ ಸಮಿತಿ ಸಭೆ ಇಂದು ಕುಮಾರಕೃಪಾದಲ್ಲಿ ನಡೆಯುತ್ತಿದ್ದು, ಸಭೆಗೂ ಮುನ್ನ 'ನಾವೆಲ್ಲಾ ಒಂದೇ' ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಸದೃಢವಾಗಿದೆ ಎಂದು ಸಾರುವ ಯತ್ನಕ್ಕೆ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಯತ್ನಿಸಿದ್ದಾರೆ.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ 3ನೇ ಸಭೆಯು ಇಂದು ಕುಮಾರ ಕೃಪಾ ಅತಿಥಿ ಗೃಹದಲ್ಲಿ ನಡೆಯುವ ಮುನ್ನ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದರು. ನಂತರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಆಗಮಿಸಿದ ನಂತರ ಸಿದ್ದರಾಮಯ್ಯ ಹಸ್ತ ಲಾಘವ ಮಾಡಿದರು. ಜತೆಗೆ ಕಾಂಗ್ರೆಸ್​ ರಾಜ್ಯದ ಉಸ್ತವಾರಿ ವೇಣುಗೋಪಾಲ್​, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸೇರಿದಂತೆ ಹಲವು ನಾಯಕರಿದ್ದರು. ಕ್ಯಾಮೆರಾಗಳ ಬಳಿ ತಿರುಗಿದ ಸಿದ್ದರಾಮಯ್ಯ ಈಗಲಾದರೂ ಒಪ್ಪಿಕೊಳ್ಳುತ್ತೀರಾ ನಮ್ಮಲ್ಲಿ ಒಗ್ಗಟ್ಟಿದೆ ಎಂಬುದನ್ನು ಎಂದು ಮಾಧ್ಯಮದವರಿಗೆ ತಿಳಿಸಿದರು. ಅದಕ್ಕೆ ಸಿದ್ದರಾಮಯ್ಯ ಕೂಡ ನಗುತ್ತಲೇ ಮಾಧ್ಯಮದ ಕಡೆ ನೋಟ ಬೀರಿದರು.

ಆಂತರಿಕ ಕಲಹಗಳೇನು?:

ಸಿದ್ದರಾಮಯ್ಯ ಗುಂಪಿನಲ್ಲಿರುವ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಇವತ್ತು ಹೊಸ ಬಾಂಬ್ ಸಿಡಿಸಿದ್ದರು. ಜೆಡಿಎಸ್​ - ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಇರುವುದು ವಾಸ್ತವ. ಗಣಪತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಶಾಕಿಂಗ್ ಹೇಳಿಕೆ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ಧರು. ಸಿಎಂ ಇಬ್ರಾಹಿಂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸಹಜವಾಗಿ ರಾಜಕೀಯ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆಯಿತು.

ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಚರ್ಚೆ ಹುಟ್ಟುಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಹೊಸ ಅಸ್ತ್ರ ಪ್ರಯೋಗಿಸಿದ್ದರು. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆದರೆ ಅದು ಸಿದ್ದರಾಮಯ್ಯ ಅವರ ಹೆಗಲಿಗೆ ​ ಹೋಗುವ ಸಾಧ್ಯತೆ ಇರುವುದನ್ನು ಅರಿತ ಕುಮಾರಸ್ವಾಮಿ ಈಗ ಹೊಸ ದಾಳ ಉರುಳಿಸಿದ್ದಾರೆ.  ಅವರಿಗೆ ಸ್ಪರ್ಧೆಯಾಗಿ ಅವರ ಪಕ್ಷದ ಹಿರಿಯ ನಾಯಕ ದೇಶಪಾಂಡೆ ಕೂಡ ಇದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅವರು ಕೂಡ ಅರ್ಹರು ಎಂದು ಕಾಂಗ್ರೆಸ್​ ನಾಯಕರ ನಡುವೆ ಸ್ಪರ್ಧೆ ಏರ್ಪಡುವಂತೆ ಮಾಡಿದ್ದಾರೆ.

ಕೃಷಿ ಸಚಿವ  ಶಿವಶಂಕರ್ ರೆಡ್ಡಿ  ಸಿದ್ದರಾಮಯ್ಯ ಮುಖ್ಯಮಂತ್ರಿ ಆದ್ರೆ ತಪ್ಪೇನು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದರು. ಇದು ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಪರ ಒಲವು ಜಾಸ್ತಿ ಇರುವುದು ವ್ಯಕ್ತವಾಗುತ್ತಿದೆ. ಆದ್ರೆ ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ ಮೊದಲಾದ ಪ್ರಮುಖರೂ ಸಿಎಂ ಗಾದಿಯ ಮೇಲೆ ಚಿತ್ತವಿರಿಸಿದ್ದಾರೆ. ಒಂದೆಡೆ, ಸಿಎಂ ಹೆಚ್​ಡಿಕೆ ಅವರು ದೇಶಪಾಂಡೆ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರಿಗೆ ಹೆಚ್.ಡಿ. ದೇವೇಗೌಡರು ಬೆಂಬಲವಾಗಿ ನಿಂತಿರುವ ಸುದ್ದಿಯೂ ಇದೆ.
Loading...

ಸಭೆಗೆ ಆಗಮಿಸುತ್ತಾ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಮೈತ್ರಿ ಸರ್ಕಾರಕ್ಕೆ ನೂರರ ಸಂಭ್ರಮ ಹಿನ್ನಲೆ ಸಿಎಂ ಹೆಚ್ಡಿಕೆಗೆ ಶುಭಾಶಯ ಕೊರಿದರು. ಕ್ಯಾಮರಾಗಳತ್ತ ಸಿಎಂ ಹೇಳುತ್ತಾ ಈಗಲಾದರೂ ಗಟ್ಟಿಯಾಗಿದ್ದೇವೆ ಎಂದು ಒಪ್ಪಿಕೊಳ್ತೀರಾ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದರು. ನಾವೆಲ್ಲಾ ಒಂದೇ ಎಂದು ಹೇಳುತ್ತಾ ಒಗ್ಗಟ್ಟು ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಪ್ರದರ್ಶಿಸಿದರು.

ಇಂದಿನ ಸಭೆಯಲ್ಲಿ ‌ಸಮನ್ವಯ ಸಮಿತಿ ವಿಸ್ತರಣೆ ಬಗ್ಗೆ ನಿರ್ಧಾರ. ಹೀಗಾಗಿ ಸಮನ್ವಯ ಸಮಿತಿ ಸಭೆ ಬಳಿಗೂ ತೆರಳದೇ, ತಮ್ಮ ನಿವಾಸದ ಕಡೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಹೊರಟು ಹೊದರು. ಸಮನ್ವಯ ‌ಸಮಿತಿ ಸಭೆಯಲ್ಲಿ ಚರ್ಚಿಸ ಬೇಕಾದ ಅಂಶಗಳ ಬಗ್ಗೆ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ತೀರ್ಮಾನ ವನ್ನು ಕೈಗೊಂಡರು.

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...