• Home
 • »
 • News
 • »
 • state
 • »
 • ಬೆಂಗಳೂರು, ಕಲಬುರ್ಗಿ, ಮೈಸೂರು, ಬೀದರ್​​ನಲ್ಲಿ ಮಾತ್ರ ಲಾಕ್​​ಡೌನ್​​ ಮುಂದುವರಿಯುವ ಸಾಧ್ಯತೆ ಇದೆ - ಬಿ. ಶ್ರೀರಾಮುಲು

ಬೆಂಗಳೂರು, ಕಲಬುರ್ಗಿ, ಮೈಸೂರು, ಬೀದರ್​​ನಲ್ಲಿ ಮಾತ್ರ ಲಾಕ್​​ಡೌನ್​​ ಮುಂದುವರಿಯುವ ಸಾಧ್ಯತೆ ಇದೆ - ಬಿ. ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಕರ್ನಾಟಕದಲ್ಲಿ 18 ಜಿಲ್ಲೆಗಳನ್ನು ಕೊರೋನಾ ಹಾಟ್​​ಸ್ಪಾಟ್​​ ಕೇಂದ್ರಗಳು ಎಂದು ಗುರುತಿಸಲಾಗಿದೆ. ಆದ್ದರಿಂದ ಈ ಎಲ್ಲಾ ಜಿಲ್ಲೆಗಳಲ್ಲೂ ಲಾಕ್​​ಡೌನ್​​ ಮುಂದುವರಿಸುವ ಬಗ್ಗೆಯೂ ಕ್ಯಾಬಿನೆಟ್​​ನಲ್ಲಿ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ 11ನೇ ತಾರೀಕು ಕೇಂದ್ರದ ನಿರ್ಧಾರ ಪ್ರಕಟಿಸುತ್ತಾರೆ ಎಂದು ಕಾಯುತ್ತಿದ್ದೇನೆ. ನಂತರ ರಾಜ್ಯ ಸರ್ಕಾರ ಅಂತಿಮ ನಿರ್ಧಾರವೇನು ಎಂಬುದನ್ನು ತಿಳಿಸಲಿದ್ದೇವೆ ಎಂದರು ಬಿ. ಶ್ರೀರಾಮುಲು.

ಮುಂದೆ ಓದಿ ...
 • Share this:

  ಬೆಂಗಳೂರು(ಏ.09): ಪ್ರಧಾನಿ ನರೇಂದ್ರ ಮೋದಿಯವರು ಏನೇ ನಿರ್ಧಾರ ಪ್ರಕಟಿಸಿದರೂ ರಾಜ್ಯದ 4 ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಲಾಕ್​​ಡೌನ್​​​​ ಮುಂದುವರಿಸಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಇಂದು ನಗರದಲ್ಲಿ ನ್ಯೂಸ್​​-18 ಕನ್ನಡದೊಂದಿಗೆ ಮಾತಾಡಿದ ಶ್ರೀರಾಮುಲು, ರಾಜ್ಯದ 17 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಕರ್ನಾಟಕ ಸುಧಾರಿಸಿದೆ. ಏನೇ ಆಗಲಿ ರಾಜ್ಯದ ನಾಲ್ಕು ಜಿಲ್ಲೆಗಳಾದ ಮೈಸೂರು, ಬೆಂಗಳೂರು, ಕಲಬುರ್ಗಿ ಮತ್ತು ಬೀದರ್​​ನಲ್ಲಿ ಲಾಕ್‌ಡೌನ್ ಮುಂದುವರೆಸುವ ಸಾಧ್ಯತೆ ಇದೆ ಎಂದರು.

  ಕರ್ನಾಟಕದಲ್ಲಿ 18 ಜಿಲ್ಲೆಗಳನ್ನು ಕೊರೋನಾ ಹಾಟ್​​ಸ್ಪಾಟ್​​ ಕೇಂದ್ರಗಳು ಎಂದು ಗುರುತಿಸಲಾಗಿದೆ. ಆದ್ದರಿಂದ ಈ ಎಲ್ಲಾ ಜಿಲ್ಲೆಗಳಲ್ಲೂ ಲಾಕ್​​ಡೌನ್​​ ಮುಂದುವರಿಸುವ ಬಗ್ಗೆಯೂ ಕ್ಯಾಬಿನೆಟ್​​ನಲ್ಲಿ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ 11ನೇ ತಾರೀಕು ಕೇಂದ್ರದ ನಿರ್ಧಾರ ಪ್ರಕಟಿಸುತ್ತಾರೆ ಎಂದು ಕಾಯುತ್ತಿದ್ದೇನೆ. ನಂತರ ರಾಜ್ಯ ಸರ್ಕಾರ ಅಂತಿಮ ನಿರ್ಧಾರವೇನು ಎಂಬುದನ್ನು ತಿಳಿಸಲಿದ್ದೇವೆ ಎಂದರು ಬಿ. ಶ್ರೀರಾಮುಲು.

  ಸದ್ಯ ಐದು ಸಾವಿರ ರ‍್ಯಾಪಿಡ್​​ ಕಿಟ್​​ಗಳನ್ನು ಖರೀದಿ ಮಾಡಲಾಗಿದೆ. ಈಗಾಗಲೇ ರ‍್ಯಾಪಿಡ್​​ ಪರೀಕ್ಷೆಯನ್ನು ಆರಂಭಿಸಲಾಗಿದೆ. ಇಡೀ ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳು ಮಾತ್ರ ಡೇಂಜರ್​​​ ಎನ್ನಬಹುದು. ನಮ್ಮ ನಿರ್ಧಾರವೂ ಪ್ರಧಾನ ಮಂತ್ರಿಗಳ ಆದೇಶದ ಮೇಲೆ ನಿಂತಿದೆ. ಮುಂದೆಯೂ ರಾಜ್ಯದ ನಾಲ್ಕು ಡೇಂಜರ್​​ ಜೋನ್​​​ ಜಿಲ್ಲೆಗಳಲ್ಲಿ ಲಾಕ್​​ಡೌನ್​​​ ಮುಂದುವರಿಸುವ ಬಗ್ಗೆ ಅಭಿಪ್ರಾಯ ಕೇಳಿ ಬಂದಿದೆ ಎಂದು ಶ್ರೀರಾಮುಲು ಹೇಳಿದರು.

  ಇದನ್ನೂ ಓದಿ: ಹಂತ ಹಂತವಾಗಿ ಲಾಕ್ ಡೌನ್ ಹೀಗೆ ಸಡಿಲಿಸಿ; ತಜ್ಞರ ಸಮಿತಿ ನೀಡಿದ ಸಲಹೆಗಳ ಮುಖ್ಯಾಂಶಗಳಿವು

  ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಬಾಗಲಕೋಟೆಯಲ್ಲಿ ವೃದ್ಧನೋರ್ವ ಕೊರೋನಾ ಸೋಂಕಿಗೆ ಬಲಿಯಾಗಿದ್ದ. ಇಂದು ಗದಗದಲ್ಲಿ 80 ವರ್ಷದ ವ್ಯಕ್ತಿ ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಜತೆಗೆ ಸೋಂಕಿತರ ಸಂಖ್ಯೆಯೂ 211ಕ್ಕೇರಿದೆ.

  Published by:Ganesh Nachikethu
  First published: