HOME » NEWS » State » LOCKDOWN EFFECT FULLY QUIET MODELING FIELD IN HUBLI DUE TO CORONAVIRUS LOCKDOWN IN HUBBALLI HG

Lockdown Effect: ಹುಬ್ಬಳ್ಳಿಯಲ್ಲಿ ಸಂಪೂರ್ಣ ಸ್ತಬ್ಧಗೊಂಡ ಮಾಡೆಲಿಂಗ್ ಕ್ಷೇತ್ರ; ಲಾಕ್‌ಡೌನ್ ಹೊಡೆತಕ್ಕೆ ಕಂಗೆಟ್ಟ ಮಾಡೆಲ್‌ಗಳು


Updated:May 27, 2020, 9:32 PM IST
Lockdown Effect: ಹುಬ್ಬಳ್ಳಿಯಲ್ಲಿ ಸಂಪೂರ್ಣ ಸ್ತಬ್ಧಗೊಂಡ ಮಾಡೆಲಿಂಗ್ ಕ್ಷೇತ್ರ; ಲಾಕ್‌ಡೌನ್ ಹೊಡೆತಕ್ಕೆ ಕಂಗೆಟ್ಟ ಮಾಡೆಲ್‌ಗಳು
ರ‍್ಯಾಂಪ್‌ ವಾಕ್
  • Share this:
ಲಾಕ್‌ಡೌನ್‌ನಿಂದಾಗಿ ಮಾಡೆಲಿಂಗ್ ಕ್ಷೇತ್ರ ಸಂಪೂರ್ಣ ಸ್ತಬ್ಧಗೊಂಡಿದೆ. ಹುಬ್ಬಳ್ಳಿಯಂತಹ ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆ ಕಾಣುತ್ತಿದ್ದ ಮಾಡೆಲಿಂಗ್‌ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ. ಆಗಾಗ ನಡೆಯುತ್ತಿದ್ದ ಮಾಡೆಲಿಂಗ್ ಶೋಗಳು ಬಂದ್‌ ಆಗಿವೆ. ಇದರಿಂದ ಮಾಡೇಲ್ಸ್, ಕಲಾವಿದರು, ಕೋರಿಯೋಗ್ರಾಫರ್ಸ್, ಡ್ಯಾನ್ಸರ್ಸ್‌, ಕ್ಯಾಮೆರಾಮೆನ್‌ಗಳು ಸೇರಿದಂತೆ ಹಲವು ಜನರು ತೊಂದರೆಗೆ ಸಿಲುಕಿದ್ದಾರೆ.

ಕೆಲವರಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಅವಕಾಶ ಒದಗಿ ಬಂದಿತ್ತು. ಶೋಗಳಲ್ಲಿ ಅವಕಾಶಗಳಿದ್ದರೂ ಭಾಗವಹಿಸಲು ಸಾಧ್ಯವಾಗದ ಸ್ಥಿತಿಯನ್ನು ಕರೋನಾ ತಂದೊಡ್ಡಿದೆ. ಮಾಡೆಲಿಂಗ್‌ನಲ್ಲಿ ಏನಾದರು ಸಾಧನೆ ಮಾಡಬೇಕೆಂದು ಕನಸು ಕಾಣುತ್ತಿದ್ದ ಪ್ರತಿಭೆಗಳು ಕೊರಗುವಂತಾಗಿದೆ. ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸದ್ಯಕ್ಕೆ ಕಂಡ ಕನಸುಗಳು ಕಮರಿವೆ.

ಹುಬ್ಬಳ್ಳಿಯಲ್ಲಿ ಪ್ರಮಾಥ್ ಸ್ಟಾರ್ ಮಾಡೆಲಿಂಗ್ ಸಂಸ್ಥೆ ನೂರಾರು ಯುವ ಪ್ರತಿಭೆಗಳಿಗೆ ವೇದಿಕೆಯಾಗಿತ್ತು. ಕಲಾವಿದರು ಸೇರಿದಂತೆ ಅನೇಕ ಮಾಡೆಲಿಂಗ್‌ ವೃತ್ತಿಪರರಿಗೆ ಉದ್ಯೋಗ ಕಲ್ಪಿಸಿತ್ತು. ವರ್ಷಪೂರ್ತಿ ಮಾಡೆಲಿಂಗ್ ಸ್ಪರ್ಧೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಾಗಿ ಇವೆಂಟ್ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳ ಲಾಕ್‌ಡೌನ್‌ ಮಾಡೆಲಿಂಗ್ ಜಗತ್ತಿಗೆ ಆಘಾತ ನೀಡಿದೆ. ಸುದೀರ್ಘ ತಯಾರಿ ಮಾಡಿಕೊಂಡಿದ್ದ ಇವೆಂಟ್ಸ್‌ಗಳು ರದ್ದಾಗಿವೆ.

ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಯುವ ಸಮೂಹ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಆಸಕ್ತಿ ತೋರಿಸಿತ್ತು. ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿದವರು ಮುಂದಿನ ಹಂತಗಳಿಗೂ ಆಯ್ಕೆಯಾಗಿದ್ದರು. ದೇಶದ ವಿವಿಧ ನಗರಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು.

ಇನ್ನು ಕೆಲವರು ಹೊರ ದೇಶಗಳಿಗೂ ತಮ್ಮ ಪ್ರತಿಭೆ ತೋರಿಸಲು ಹಾರುವವರಿದ್ದರು. ಅವಕಾಶಗಳ ಬಾಗಿಲು ತೆರೆದಿದ್ದರಿಂದ ಮತ್ತಷ್ಟು ಜನರು ಮಾಡೆಲಿಂಗ್‌ ಕ್ಷೇತ್ರದತ್ತ ಒಲವು ತೋರಿಸಲು ಮುಂದಾಗಿದ್ದರು. ಮನರಂಜನಾ ಕ್ಷೇತ್ರಕ್ಕೆ ಆದ್ಯತೆ ಕೊಡುವ ಸಾಕಷ್ಟು ಕಲಾಭಿಮಾನಿಗಳು ಮಾಡೆಲಿಂಗ್‌ ಬೆಳವಣಿಗೆ ಬೆನ್ನೆಲುಬಾಗಿದ್ದರು. ಆದರೆ ಕೊರೋನಾ ನೀಡಿರುವ ಹೊಡೆತ ಎಲ್ಲರನ್ನು ಕಂಗೆಡಿಸಿದೆ.

ಮಾಡೆಲಿಂಗ್ ಶೋ


ಪ್ರತಿಯೊಬ್ಬರೂ ಸಂಕಷ್ಟದಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ. ಲಾಕ್‌ಡೌನ್‌ನ ಕಠಿಣ ನಿಯಮಗಳು ರ್ಯಾಂಪ್‌ ವಾಕ್‌ ಅನ್ನು ಕೋಮಾದಲ್ಲಿಟ್ಟಿದೆ. ಕಾರ್ಯಕ್ರಮಗಳ ಆಯೋಜನೆಗೆ ಬ್ರೇಕ್​ ‌ ಬಿದ್ದಿದೆ. ಜನರು ಒಂದೆಡೆ ಸೇರದಂತೆ ಕಟ್ಟುನಿಟ್ಟಿನ ಆದೇಶ ಇರುವುದರಿಂದ ಗುಂಪು ಸಿದ್ಧತೆಗಳಿಗೆ ಬ್ರೇಕ್​‌ ಬಿದ್ದಿದೆ. ನಿರ್ಬಂಧಿತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾಡೆಲಿಂಗ್‌ ಕ್ಷೇತ್ರವೂ ಇರುವುದರಿಂದ ಮತ್ತಷ್ಟು ಬಿಕ್ಕಟ್ಟು ಎದುರಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದಡಿ ಇಡಲು ಸಾಕಷ್ಟು ಪರ್ಯಾಯ ವಿಚಾರಗಳನ್ನು ಮಾಡಲಾಗಿದೆ. ಅದರ ಭಾಗವಾಗಿ ಆನ್‌ಲೈನ್ ಸ್ಪರ್ಧೆಗಳು ಹಾಗೂ ಮಾಡೆಲ್‌ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.ಆದರೆ ನೇರ ಸ್ಪರ್ಧೆಗಳಷ್ಟು ಆನ್‌ಲೈನ್‌ ಪ್ರಕ್ರಿಯೆ ಪರಿಣಾಮಕಾರಿಯಾಗಿಲ್ಲ. ಆನ್‌ಲೈನ್‌ ಮೂಲಕ ಸ್ಪಷ್ಟ ನಿರ್ಧಾರಕ್ಕೆ ಬರುವುದಕ್ಕೂ ಆಗುತ್ತಿಲ್ಲ. ಸಮರ್ಪಕ ತೀರ್ಪು ನೀಡಲು ಆಗುವುದಿಲ್ಲ ಅಂತಾರೆ ಹುಬ್ಬಳ್ಳಿಯ ಪ್ರಮಾಥ್ ಸ್ಟಾರ್ ಮಾಡೆಲಿಂಗ್‌ ಸಂಸ್ಥೆ ಮುಖ್ಯಸ್ಥ ಪ್ರಮಾಥ್ ಭಟ್.

ಹೀಗಾಗಿ ಮಾಡೆಲಿಂಗ್‌ ಪ್ರಿಯರು ಆದಷ್ಟು ಬೇಗ ಕರೋನಾ ಹಾವಳಿ ಕಡಿಮೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಮರಳಲಿ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆದಷ್ಟು ಬೇಗ ಕೊರೋನಾ ದೇಶದಿಂದ ತೊಲಗಲಿ. ಎಲ್ಲರೂ ಸುರಕ್ಷಿತವಾಗಿರಿ. ಆದಷ್ಟು ಬೇಗ ಮತ್ತೆ ಮಾಡೆಲಿಂಗ್‌ ಕ್ಷೇತ್ರ ಕೂಡ ಸಹಜತೆಗೆ ಮರಳುವ ನಿರೀಕ್ಷೆ ಮಾಡೋಣ ಅಂತಾರೆ ಮಾಡೆಲ್‌ ತರುಣಾ.

Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಡಬಲ್​ ಡೇಟಾ ಆಫರ್​!

ಮಂಗಳೂರಿನ ಯುವಕರಿಗೆ ಮೋದಿ ಮಾತುಗಳೇ ಸ್ಫೂರ್ತಿ; ಕಂಡುಹಿಡಿದಿದ್ದಾರೆ ಹ್ಯಾಂಡ್​ ಫ್ರೀ ಸ್ಯಾನಿಟೈಸರ್​ ಸ್ಟ್ಯಾಂಡ್​​​
First published: May 27, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories