ಲಾಕ್ಡೌನ್ ಎಫೆಕ್ಟ್; ನೆಲಕಚ್ಚಿದ ಚನ್ನಪಟ್ಟಣ ಬೊಂಬೆ ತಯಾರಿಕೆ, ಆಸರೆಯ ನಿರೀಕ್ಷೆಯಲ್ಲಿ ಕುಶಲಕರ್ಮಿಗಳು
ಕಳೆದ ಎರಡು ತಿಂಗಳಿಂದ ವಿಶ್ವದಲ್ಲೇ ಕೊರೋನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನಲುಗಿದೆ. ಅದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಗೊಂಬೆಗಳ ಉದ್ಯಮವೂ ಕೂಡ ಪಾತಾಳಕ್ಕೆ ಬಿದ್ದಿದೆ. ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಟಾಯ್ಸ್ ಶೋ ರೂಮ್ಸ್ಗಳಲ್ಲೇ ಧೂಳಿಡಿದಿವೆ.
news18-kannada Updated:May 21, 2020, 7:54 PM IST

ವಿಶ್ವ ಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳು.
- News18 Kannada
- Last Updated: May 21, 2020, 7:54 PM IST
ರಾಮನಗರ (ಮೇ 21); ಚನ್ನಪಟ್ಟಣ ಅಂದ್ರೆ ಬೊಂಬೆನಾಡು ಅಂತಾನೇ ಫೇಮಸ್ಸು. ಆದರೆ, ಈಗ ಇದೇ ಬೊಂಬೆನಾಡಿನ ಕರಕುಶಲಕರ್ಮಿಗಳು ಕೊರೋನಾ ಏಟಿಗೆ ಸಿಕ್ಕಿ ಸೊರಗುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕೊರೋನಾ ಅಬ್ಬರಕ್ಕೆ ನಲುಗಿರುವ ಬೊಂಬೆ ತಯಾರಕರು ಕೈಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಬೊಂಬೆ ತಯಾರಕರು ನ್ಯೂಸ್ 18 ಮೂಲಕ ಒತ್ತಾಯಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ವಿಶ್ವದಲ್ಲೇ ಕೊರೋನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನಲುಗಿದೆ. ಅದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಗೊಂಬೆಗಳ ಉದ್ಯಮವೂ ಕೂಡ ಪಾತಾಳಕ್ಕೆ ಬಿದ್ದಿದೆ. ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಟಾಯ್ಸ್ ಶೋ ರೂಮ್ಸ್ಗಳಲ್ಲೇ ಧೂಳಿಡಿದಿವೆ. ತಾಲೂಕಿನ ಮುನಿಯಪ್ಪನದೊಡ್ಡಿ ಸೇರಿದಂತೆ ಒಟ್ಟು 500 ಕ್ಕೂ ಹೆಚ್ಚು ಬೊಂಬೆ ತಯಾರಿಕ ಘಟಕಗಳಿವೆ. 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿಯೇ ತಮ್ಮ ಜೀವನವನ್ನ ಕಂಡುಕೊಂಡಿದ್ದಾರೆ. ಆದರೆ ಕಳೆದ 2 ತಿಂಗಳಿನಿಂದ ಅವರೆಲ್ಲರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.
ಗೊಂಬೆ ತಯಾರಿಕಾ ಘಟಕಗಳು ಎರಡು ತಿಂಗಳಿಂದ ಸ್ಥಗಿತವಾಗಿವೆ. ರಾಮನಗರ - ಚನ್ನಪಟ್ಟಣ ಮಧ್ಯೆ ಇರುವ ಹತ್ತಾರು ಟಾಯ್ಸ್ ಶೋ ರೂಮ್ಸ್ಗಳಿಗೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಟಾಯ್ಸ್ ಶೋ ರೂಮ್ಸ್ಗಳಲ್ಲಿ ಬೊಂಬೆಗಳನ್ನ ಹೆಚ್ಚಾಗಿ ಖರೀದಿ ಮಾಡ್ತಿದ್ದರು.
ಈಗ ಕೊರೋನಾ ಇದ್ದರು ಸಹ ರಾಮನಗರ ಜಿಲ್ಲೆ ಗ್ರೀನ್ ಜೋನ್ನಲ್ಲಿರುವ ಕಾರಣ ಶೋ ರೂಮ್ಸ್ಗಳು ಓಪನ್ ಆಗಿವೆ. ಆದರೆ ಪ್ರವಾಸಿಗರಿಲ್ಲದೇ ಶೋ ರೂಮ್ಗಳಲ್ಲಿ ವ್ಯಾಪಾರವಹಿವಾಟಾಗುತ್ತಿಲ್ಲ. ಜೊತೆಗೆ ತಯಾರಾದ ಗೊಂಬೆಗಳನ್ನ ಅತೀಕಡಿಮೆ ಬೆಲೆಗೆ ವ್ಯಾಪಾರವಾಗುತ್ತಿರುವುದು ಕೂಡ ಮತ್ತೊಂದು ಸಂಕಟ ತಂದಿದೆ.
ಒಟ್ಟಾರೆ ಚನ್ನಪಟ್ಟಣದ ಗೊಂಬೆಗಳು ಅಂದ್ರೆ ವಿಶ್ವದಲ್ಲೇ ಹೆಸರುವಾಸಿಯಾಗಿವೆ. ಆದರೆ ಈಗ ಗೊಂಬೆಗಳನ್ನ ತಯಾರು ಮಾಡುವ ಕರಕುಶಲಕರ್ಮಿಗಳ ಬದುಕು ಮೂರಾಬಟ್ಟೆಯಾಗಿದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂಬ ಕೂಗು ಕೇಳಿಬಂದಿದೆ.
(ವರದಿ - ಎ.ಟಿ. ವೆಂಕಟೇಶ್ ರಾಮನಗರ)ಇದನ್ನೂ ಓದಿ : 77 ಲಕ್ಷದ ಬೆಂಜ್, 15 ಲಕ್ಷಕ್ಕೆ ಹರಾಜು; ಆರ್ಟಿಓ ಆಕ್ಷನ್ ಬಿಡ್ನಲ್ಲಿ ಬಿಲ್ಡರ್ ಪಾಲಾದ ಐಶಾರಾಮಿ ಕಾರು