ಕೊರೋನಾ ತಡೆಗೆ ಲಾಕ್​ಡೌನ್​ ಒಂದೇ ಮೂಲ ಮಂತ್ರ; ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

ರಾಯಚೂರು ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಆಗಿಲ್ಲ, ಮುಂದೆ ಸೋಂಕು ಹೆಚ್ಚಳವಾದರೇ ಆಕ್ಸಿಜನ್ ಬೇಕಾಗುತ್ತೆ.  ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳ ಸಹ ಆಗಿವೆ ಎಂದರು.

  • Share this:

ರಾಯಚೂರು(ಮೇ 02): ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ನಿನ್ನೆ ರಾಯಚೂರು ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆ ಬಳಿಕ ಸಚಿವ ಲಕ್ಷ್ಮಣ ಸವದಿ ಕೊರೊನಾ 2 ನೇ ಅಲೆ ಆರಂಭದಿಂದ ರಾಯಚೂರಿನಲ್ಲಿ ಈವರೆಗೆ 8 ಜನರು  ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 760 ಬೆಡ್ ಗಳ ವ್ಯವಸ್ಥೆ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ 807 ಬೆಡ್ ಗಳು ಲಭ್ಯ ಇವೆ ಎಂದರು.


ಇಡೀ ಜಿಲ್ಲೆಯಲ್ಲಿ ಈವರೆಗೆ ವ್ಯಾಕ್ಸಿನ್ ನೀಡಿದ್ದು ಮೊದಲ ಡೋಸ್ 16,149, ಎರಡನೇ ಡೋಸ್ ಕೊಟ್ಟಿದ್ದು 10,404.  ವ್ಯಾಕ್ಸಿನ್  ಹೆಚ್ಚಾಗಿ ನೀಡಲು ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ 1 ಕೋಟಿ ವ್ಯಾಕ್ಸಿನ್ ನೀಡುವ ಪ್ಲಾನ್ ಇದೆ. ಈಗ 2ನೇ ಅಲೆ ಬಂದು ಬಿಟ್ಟಿದೆ, ಜೀವ ಉಳಿಸಬೇಕು, ಜೀವನವೂ ನಡೆಸಬೇಕಾಗಿದೆ.


ಕೆಲವೇ ಮಾರ್ಗಸೂಚಿಗಳು ಹೊರಡಿಸಿ 6-10ವರೆಗೆ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ನಾವು ಲಾಕ್ ಡೌನ್ ಅನ್ನದೇ ಇದ್ರೂ ಸಹ ಅದೇ ಸ್ವರೂಪದಲ್ಲಿ ಇರಲಿದೆ. ಜನತಾ ಕರ್ಫ್ಯು ಗೆ ಜನರು ಸಹ ಸಹಕಾರ ನೀಡಬೇಕು, ಕೊರೊನಾ ಚೈನ್ ಲಿಂಕ್ ಕಟ್ ಮಾಡುವುದು ಅನಿವಾರ್ಯವಾಗಿದೆ ಎಂದರು.ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಜನತಾ ಕರ್ಫ್ಯು ರೂ ರೂಲ್ಸ್ ಎಲ್ಲರೂ ಪಾಲಿಸಬೇಕು, ಯಾರು ಸರ್ಕಾರದ ರೂಲ್ಸ್ ಉಲ್ಲಂಘನೆ ಮಾಡಿದ್ರೆ ಕ್ರಮಕೈಗೊಳ್ಳುತ್ತೇವೆ. ಕಟ್ಟುನಿಟ್ಟಿನಿಂದ ಪಾಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಯಚೂರು ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಆಗಿಲ್ಲ, ಮುಂದೆ ಸೋಂಕು ಹೆಚ್ಚಳವಾದರೇ ಆಕ್ಸಿಜನ್ ಬೇಕಾಗುತ್ತೆ.  ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳ ಸಹ ಆಗಿವೆ ಎಂದರು.


ಬಳ್ಳಾರಿಯಲ್ಲಿ ಇಆರ್​​ಎಸ್​ಎಸ್​ ವಾಹನಗಳಿಗೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಆನಂದ್ ಸಿಂಗ್


ಕೊರೋನಾ ತಡೆಗೆ ಮೂಲ ಮಂತ್ರವೇ ಲಾಕ್ ಡೌನ್, ಲಾಕ್ ಡೌನ್ ಬಿಟ್ಟರೆ ಬೇರೆ ಮಂತ್ರವೇ ಇಲ್ಲ, ಕೊರೋನಾ ತಡೆಗೆ ಹೊಸ ಆಯಾಮವೂ ಇದಕ್ಕೆ ಸಿಗುವುದಿಲ್ಲ, ಕೊರೊನಾ ಚೈನ್ ಲಿಂಕ್ ಕಟ್ ಮಾಡಬೇಕಿದೆ, ಗುಂಪುಗೂಡುವುದು ತಡೆಯಬೇಕು,  ಸಮಾಜಿಕ ಅಂತರ, ಮಾಸ್ಕ್ , ಸ್ಯಾನಿಟೈಸರ್ ಮಂತ್ರ ಪಾಲನೆ ಮಾಡುವುದು, ಗುಂಪು ತಡೆಯವುದು, ಸಭೆ, ಸಮಾರಂಭ ಬಂದ್ ಮಾಡಬೇಕಾಗಿದೆ ಎಂದರು.


ವೆಂಟಿಲೇಟರ್ ಜಿಲ್ಲಾ ಮಟ್ಟದ ಆಸ್ಪತ್ರೆಗಳು ಇವೆ, ಜಿಲ್ಲಾ ಮಟ್ಟದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ವೇಟಿಲೇಟರ್ ಇವೆ, ವೆಂಟಿಲೇಟರ್ ಗೆ ಹೋದ ರೋಗಿ ಬಹಳ ಕಷ್ಟದ ಸ್ಥಿತಿಯಲ್ಲಿ ಇರುತ್ತೆ, ರೋಗ ಶೇ. 80ರಷ್ಟು ಇದ್ದಾಗ ರೋಗಿ ವೇಟಿಲೇಟರ್ ಗೆ ಹೋಗುತ್ತೆ, ತಾಲೂಕಾ ಮಟ್ಟದಲ್ಲಿ ಎಮರೆನ್ಸಿ ಪೇಸೆಂಟ್ ಎಂದು ಭಾವಿಸಿ ಜಿಲ್ಲಾಮಟ್ಟಕ್ಕೆ ತರಲಾಗುತ್ತೆ, ಕೇಂದ್ರದ ಪಿಎಂ ಕೇರ್ ಫಂಡ್ ನಲ್ಲಿ ತಾಲೂಕಾಗಳಿಗೆ 3-4 ವೇಟಿಲೇಟರ್ ಕಳುಹಿಸಿದ್ದಾರೆ, ವೆಂಟಿಲೇಟರ್ ಗೆ ಮೂರು ಜನರು ವೈದ್ಯರ ತಂಡ ಬೇಕಾಗುತ್ತೆ, ತಾಲೂಕಾಮಟ್ಟದಲ್ಲಿ ಅದೂ ಯಾವುದು ಇರುವುದಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಡಬೇಕಾಗುತ್ತೆ ಎಂದರು.


ಕೊರೊನಾ ಹೆಸರಿನಲ್ಲಿ ಖಾಸಗಿ ವೈದ್ಯರ ಹಣ ವಸೂಲಿ ವಿಚಾರ, ಇಂತಹ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯಿಂದ ವರ್ತಿಸಬೇಕು, ಈ ಸಂದರ್ಭದ ದುರು ಲಾಭ ಪಡೆದು , ವೈದ್ಯರು ಜನರ ಶಾಪಕ್ಕೆ ಗುರಿ ಆಗುವ ಕೆಲಸ ಮಾಡಬಾರದು, ಇಂತಹ ವೇಳೆಯಲ್ಲಿ ವೈದ್ಯರು ನಮ್ಮ ಪಾಲಿನ ದೇವರು, ದೇವರು ನಮಗೆ ಅನ್ಯಾಯ ಮಾಡುವ ಕೆಲಸ ಮಾಡಬಾರದು ಎಂದು ವೈದ್ಯರಲ್ಲಿ ಲಕ್ಷ್ಮಣ ಸವದಿ ವಿನಂತಿ ಮಾಡಿಕೊಂಡರು.

Published by:Latha CG
First published: