Lockdown ಪರ - ವಿರುದ್ಧ ಅಭಿಪ್ರಾಯ: ಎಲ್ಲರ ಚಿತ್ತ ಸಂಪುಟದತ್ತ

ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರಿಂದ ಲಾಕ್ ಡೌನ್ ಜಾರಿಗೊಳಿಸೋ ಚಿಂತನೆಯಲ್ಲಿ ಸರ್ಕಾರವಿದೆ. ಸರ್ಕಾರದ ಚಿಂತನೆಗೆ ಪರ - ವಿರುದ್ಧದ ಅಭಿಪ್ರಾಯಗಳು ಕೇಳಿ ಬಂದಿವೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಹುಬ್ಬಳ್ಳಿ (ಜ. 3):  ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ (Lockdown) ಜಾರಿಯಾಗುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಪರಿಸ್ಥಿತಿ ಕೈ ಮೀರುತ್ತಾ ಹೋದರೆ ಲಾಕ್ ಡೌನ್ ಅನಿವಾರ್ಯ ಎಂಬ ಮಾತು ಸರ್ಕಾರದ್ದಾಗಿದೆ. ಲಾಕ್ ಡೌನ್ ಗೆ ಪರ - ವಿರುದ್ಧದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಎಲ್ಲರ ಚಿತ್ತ ಸಚಿವ ಸಂಪುಟದತ್ತ (Cabinet Meeting) ನೆಟ್ಟಿದೆ. ಧಾರವಾಡ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲಿಯೂ ಹೊಸ ತಳಿ ಓಮೈಕ್ರಾನ್ ಸೋಂಕಿತರ (Omicron)  ಸಂಖ್ಯೆಯೂ ಹೆಚ್ಚಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮತ್ತೆ ಎರಡು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೆಲ್ಲದರ ಬೆಳವಣಿಗೆಯ ಹಿಂದೆಯೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುತ್ತೆ ಅನ್ನೋ ಮಾತೂ ಕೇಳಿ ಬರುತ್ತಿದೆ.

ಪಾಸಿಟಿವಿಟಿ ದರ ಹೆಚ್ಚಳ

ರಾಜ್ಯದಲ್ಲಿ ಲಾಕ್ ಡೌನ್ ಕುರಿತು ಜನವರಿ 07 ರಂದು ನಡೆಯೋ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುತ್ತೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಹೆಬಸೂರು ಗ್ರಾಮದಲ್ಲಿ ಮಾತನಾಡಿದ ಅವರು, ತಜ್ಞರ ವರದಿಯನ್ನು ಆಧರಿಸಿ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಕೋವಿಡ್ ಪಾಸಿಟಿವಿಟಿ ರೇಟ್ ಗೆ ಅನುಗುಣವಾಗಿ ಲಾಕ್ ಡೌನ್ ತೀರ್ಮಾನ ಕೈಗೊಳ್ಳಲಾಗುತ್ತೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಸಂಪುಟ ಸಭೆಯಲ್ಲಿ ತೀರ್ಮಾನ
ಲಾಕ್ ಡೌನ್ ವಿಚಾರದಲ್ಲಿ ನನ್ನ ಮತ್ತು ಕೆಲ ಸಚಿವರು, ಶಾಸಕರ ಅಭಿಪ್ರಾಯ ಮುಖ್ಯವಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ಕಡೆ ಕೊರೋನಾ ಉಲ್ಬಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ವರದಿ ಆಧರಿಸಿ ಲಾಕ್ ಡೌನ್ ನಿರ್ಧಾರ ಕೈಗೊಳ್ಳುತ್ತೆ. ಕೋವಿಡ ನಿಯಂತ್ರಣದ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹುಬ್ಬಳ್ಳಿ ತಾಲೂಕಿನ ಹೆಬಸೂರಿನಲ್ಲಿ ಮುನೇನಕೊಪ್ಪ ತಿಳಿಸಿದ್ದಾರೆ.

ಸದ್ಯಕ್ಕೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದ ಹೊರಟ್ಟಿ...
ರಾಜ್ಯದಲ್ಲಿ ಲಾಕ್ ಡೌನ್ ಆರಂಭಗೊಂಡರೆ ಜನರಿಗೆ ಮತ್ತಷ್ಟು ತೊಂದರೆಯಾಗಲಿದೆ. ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡರೆ ಸದ್ಯಕ್ಕೆ ಲಾಕ್ ಡೌನ್ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಹೆಬಸೂರಿನಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಒಂದೇ ಮದ್ದಲ್ಲ. ಅನಿವಾರ್ಯವಾದಲ್ಲಿ ಲಾಕ್ ಡೌನ್ ಮಾಡಲೇಬೇಕಾಗುತ್ತದೆ. ಆದರೆ ಈಗಾಗಲೇ ಲಾಕ್ ಡೌನ್ ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಮತ್ತೆ ಲಾಕ್ ಡೌನ್ ಜಾರಿಯಾದ್ರೆ ಮತ್ತಷ್ಟು ತೊಂದರೆಯಾಗಲಿದೆ.

ಇದನ್ನು ಓದಿ: Lockdown ಅನಿವಾರ್ಯ.. ಕರ್ನಾಟಕ ಲಾಕ್​​ಡೌನ್​ ಬಗ್ಗೆ ಸುಳಿವು ಬಿಟ್ಟುಕೊಟ್ಟ ಮತ್ತೊಬ್ಬ ಸಚಿವರು!

ಜನರ ಸಹಕಾರ ಅಗತ್ಯ

ಕೋವಿಟ್ ಎಷ್ಟೆಲ್ಲಾ ಹೆಚ್ಚಾಗುತ್ತಿದ್ದರೂ ಬಹಳಷ್ಟು ಜನ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ತಿಲ್ಲ. ಶಾಲಾ ಮಕ್ಕಳಲ್ಲಿಯೂ ಕೋವಿಡ್ ಹೆಚ್ಚಳವಾಗ್ತಿದೆ. ಅನಿವಾರ್ಯವಾದಾಗ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳುತ್ತೆ. ನಮ್ಮ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಎಲ್ಲಿಯೂ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಇದಕ್ಕೆ ಜನ ಹೆಚ್ಚು ಸಹಕಾರ ಕೊಡಬೇಕೆಂದು ಹೊರಟ್ಟಿ ಕರೆ ನೀಡಿದರು.

ಇದನ್ನು ಓದಿ: ಲಸಿಕೆ ಪಡೆಯಲು ಉತ್ಸಾಹ; ಮೊದಲ ದಿನವೇ 40 ಲಕ್ಷ ಮಕ್ಕಳಿಗೆ ವಾಕ್ಸಿನೇಷನ್

ಇದೇ ವೇಳೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೋವಿಡ್ ಪ್ರಮಾಣ ಹೆಚ್ಚಾದಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ. ಈ ನಡುವೆ ವರ್ತಕರು, ಜನ ಸಾಮಾನ್ಯರು ಲಾಕ್ ಡೌನ್ ಸದ್ಯಕ್ಕೆ ಬೇಡ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳದೆ ಎರಡು ವರ್ಷಗಳಿಂದ ಇನ್ನಿಲ್ಲದ ತೊಂದರೆ ಅನುಭವಿಸಿ, ಪರಿಸ್ಥಿತಿ ಸುಧಾರಿಸಿಕೊಳ್ಳಲು ಹೆಣಗಾಡುತ್ತಿರುವ ವೇಳೆಯಲ್ಲಿ ಮತ್ತೆ ಲಾಕ್ ಡೌನ್ ಮಾಡಿದಲ್ಲಿ ಅಧೋಗತಿಗೆ ತಳ್ಳಲ್ಪಟ್ಟಂತಾಗಲಿದೆ. ಲಾಕ್ ಡೌನ್ ಬದಲಿಗೆ ಪರ್ಯಾಯ ನಿರ್ಬಂಧಗಳನ್ನು ಹೇರುವಂತೆ ವರ್ತಕರು ಮನವಿ ಮಾಡಿದ್ದಾರೆ.
Published by:Seema R
First published: