HOME » NEWS » State » LOCALS SCARE OF FLOOD DUE TO HEAVY RAIN CONTINUED IN KODAGU GNR

ಕೊಡಗಿನಲ್ಲಿ ಮುಂದುವರಿದ ಧಾರಕಾರ ಮಳೆ - ಪ್ರವಾಹದ ಆತಂಕದಲ್ಲಿ ಸ್ಥಳೀಯರು

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಮುಂದುವರೆದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಸಾಧ್ಯತೆ ಇದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 12 ಅಡಿಯಷ್ಟು ನೀರು ಹರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ.

news18-kannada
Updated:September 21, 2020, 8:42 AM IST
ಕೊಡಗಿನಲ್ಲಿ ಮುಂದುವರಿದ ಧಾರಕಾರ ಮಳೆ - ಪ್ರವಾಹದ ಆತಂಕದಲ್ಲಿ ಸ್ಥಳೀಯರು
ಸಾಂದರ್ಭಿಕ ಚಿತ್ರ
  • Share this:
Kodagu Rain | ಕೊಡಗು(ಸೆ.21): ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಒಂದೂವರೆ ತಿಂಗಳಲ್ಲಿ ಮೂರು ಮೂರು ಬಾರಿ ಪ್ರವಾಹದ ಆತಂಕ ಎದುರಾಗಿದೆ. ಶುಕ್ರವಾರ ಸಂಜೆಯಿಂದಲೇ ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ತ್ರಿವೇಣಿ ಸಂಗಮ ಬಹುತೇಕ ಮುಳುಗಡೆಯಾಗಿದೆ. ತಲಕಾವೇರಿ ಬಾಗಮಂಡಲದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಡಿಕೇರಿ ತಾಲ್ಲೂಕಿನ ಬಾಗಮಂಡಲ ಬಹುತೇಕ ಮುಳುಗಡೆಯಾಗಿದೆ. ನಾಪೋಕ್ಲು ರಸ್ತೆ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ. ಪರಿಣಾಮವಾಗಿ ನಾಪೋಕ್ಲು, ಅಯ್ಯಂಗೇರಿ ಮತ್ತು ನೆಲಜಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆಯ ಮೇಲೆ ನಾಲ್ಕು ಅಡಿಯಷ್ಟು ಕಾವೇರಿ ನದಿ ನೀರು ಹರಿಯುತ್ತಿರುವುದರಿಂದ ಎಲ್ಲಾ ರೀತಿಯ ವಾಹನಗಳ ಓಡಾಟವೂ ಸಂಪೂರ್ಣ ಸ್ತಬ್ಧವಾಗಿದೆ. ಅನಿವಾರ್ಯವಾಗಿ ಜನರು ಸೊಂಟ ಮಟ್ಟದ ನದಿಯ ನೀರಿನಲ್ಲೇ ಅಪಾಯದಲ್ಲಿ ಓಡಾಡುತ್ತಿದ್ದಾರೆ.

ಮಡಿಕೇರಿ ಬಾಗಮಂಡಲಕ್ಕೂ ಸಂಪರ್ಕ ರಸ್ತೆ ಮೇಲೂ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದು, ಮಡಿಕೇರಿ ಸಂಪರ್ಕ ರಸ್ತೆಯೂ ಬಂದ್ ಆಗುವ ಸಾಧ್ಯತೆ ಇದೆ. ಬಲು ಪ್ರಾಯಾಸದಿಂದ ವಾಹನಗಳು ಓಡಾಡುತ್ತಿದ್ದು, ಮತ್ತೆ ಮಳೆ ಮುಂದುವರೆದಲ್ಲಿ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಪಂಚಾಯಿತಿ ಸದಸ್ಯರಾದ ಭಾಸ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಮುಂದುವರೆದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಸಾಧ್ಯತೆ ಇದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 12 ಅಡಿಯಷ್ಟು ನೀರು ಹರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ.ಬಾಗಮಂಡಲ ತ್ರಿವೇಣಿ ಸಂಗಮ ಬಹುತೇಕ ಮುಳುಗಡೆಯಾಗಿದ್ದರೆ, ಮಳೆ ಮುಂದುವರೆದಿರುವುದರಿಂದ ನಾಪೋಕ್ಲು, ಕರಡಿಗೋಡು, ಗುಹ್ಯ, ಕುಂಬಾರಗುಂಡಿ ಸೇರಿದಂತೆ ಹಲವು ಗ್ರಾಮಗಳು ಮತ್ತೆ ಪ್ರವಾಹ ಎದುರಿಸುವ ಸಾಧ್ಯತೆ ಇದೆ. ಬಾಗಮಂಡಲ ಸೇರಿದಂತೆ ಹಲವೆಡೆ ರಸ್ತೆ ಸಂಪರ್ಕಗಳು ಕಡಿತವಾಗಿರುವುದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಒಂದುವರೆ ತಿಂಗಳ ಅವಧಿಯಲ್ಲಿ ಕೊಡಗಿನ ಜನರು ಮೂರು ಬಾರಿ ಪ್ರವಾಹದ ಸ್ಥಿತಿ ಎದುರಿಸುವಂತೆ ಆಗಿದೆ.
Published by: Ganesh Nachikethu
First published: September 21, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories