ಬರದ ನಾಡಿನ ಭಗೀರಥರು; ಯುವಕರ ಶ್ರಮದಿಂದ ಕೆರೆಗೆ ಹರಿದು ಬಂತು ನೀರು

ಆ ಊರಲ್ಲಿ ಜನ -ಜಾನುವಾರಿಗಳಿಗೆ ಕುಡಿಯೋ ನೀರಿಗೂ ಹಾಹಾಕಾರ. ಎಷ್ಟು ಹಾಹಾಕಾರವಂದ್ರೆ, ಗುಡ್ಡಕ್ಕೆ ಮೇವಿಗೆಂದು ಹೊಡೆದ ದನಕರುಗಳನ್ನ ಅಲ್ಲೇ ಬಿಟ್ಟು ಬರುವಷ್ಟ?

ಕೆರೆಗೆ ನೀರು ತುಂಬಿಸಿದ ಯುವಕರು

ಕೆರೆಗೆ ನೀರು ತುಂಬಿಸಿದ ಯುವಕರು

  • Share this:
ಚಿಕ್ಕಮಗಳೂರು (ಫೆ.3): ಮಲೆನಾಡು ಎಂಬ ಕೀರ್ತಿಗೆ ಒಳಗಾಗದರೂ ಜಿಲ್ಲೆಯ ಕಡೂರಿನ ಜನ ಮಾತ್ರ ಪ್ರತಿಬಾರಿ ಬರಗಾಲಕ್ಕೆ ತುತ್ತಾಗುತ್ತಾರೆ. ಕುಡಿಯುವ ನೀರಿಗೂ ಹಾಹಾಕಾರ ಪಡುವಷ್ಟು ಇಲ್ಲಿನ ಜನರು ತೊಂದರೆ ಪಡುತ್ತಾರೆ. ಪ್ರತಿ ಬಾರಿ ನೀರಿನ ಸಂಕಷ್ಟಕ್ಕೆ ತುತ್ತಾಗುವ ಕಡೂರಿನ ಜನರು ಈ ಬಾರಿ ಸಮೃದ್ಧ ನೀರಿನ ಸಿಂಚನದಲ್ಲಿ ಮಿಂದೇಳುತ್ತಿದ್ದಾರೆ. ಇದಕ್ಕೆ ಕಾರಣ ತಾಲೂಕಿನ ಯಗಟಿ ಗ್ರಾಮದ ಯುವಕರು.

ಕಡೂರಿನ ಯಗಟಿ ಗ್ರಾಮದಲ್ಲಿ ಜನರ ನೀರಿನ ಹಾಹಾಕಾರ ತಪ್ಪಿಸಲು 146 ಹೆಕ್ಟೇರ್​ ವಿಸ್ತೀರ್ಣದ ಕೆರೆ ಇದೆ. ಆದರೆ, ಈ ಕೆರೆಗೆ ಮಳೆಗಾಲದಲ್ಲಿ ನೀರು ಮಾತ್ರ ತುಂಬುವುದಿಲ್ಲ. ತುಂಬಿದರೂ ಅದು ಬೇಸಿಗೆಯ ಧಗೆ ತಣಿಸುವುದಿಲ್ಲ. ಇದೆ ಕಾರಣಕ್ಕೆ ಇಷ್ಟು ದೊಡ್ಡ ಕೆರೆ ಇದ್ದರೂ ಪ್ರಯೋಜನಕ್ಕೆ ಬಾರದೆ ಜನರು ಬೇಸಿಗೆಯನ್ನು ಕಳೆಯುತ್ತಿದ್ದರು.ಆದರೆ ಈ ಗ್ರಾಮದ ಕೆಲ ಯುವಕರ ಶ್ರಮದಿಂದಾಗಿ ಈಗ ಈ ಕೆರೆ ನೀರು ತುಂಬಿದ್ದು, ಜನರ ದಾಹ ತಣಿಸಲು ಸಿದ್ದವಾಗಿದೆ. ಇದಕ್ಕೆ ಕಾರಣ ಗಣಪತಿ ಸೇವಾ ಸಮಿತಿ ಯುವಕರು. ತಮ್ಮ ಗ್ರಾಮದಲ್ಲಿ ಇಷ್ಟು ದೊಡ್ಡ ಕೆರೆ ಇದ್ದರೂ ಯಾಕೆ ನೀರು ತುಂಬುತ್ತಿಲ್ಲ ಎಂದು ಇದರ ಮೂಲ ಹುಡುಕಿಕೊಂಡು ಹೊರಟ ಯುವಕರಿಗೆ ಬ್ರಿಟಿಷರ ಕಾಲದಲ್ಲಿ 1891ರಲ್ಲಿ ನದಿ ನೀರಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ಯಾರೇಜ್​ ಹಾನಿಯಾಗಿರುವುದು ಕಂಡು ಬಂದಿತು. ಈ ಬ್ಯಾರೇಜ್​ ಹಾಳಾದ ಕಾರಣದಿಂದ ಕೆರೆಗೆ ಸೇರಬೇಕಾದ ನೀರೆಲ್ಲಾ ವೇದಾವತಿ ನದಿ ಸೇರಿ ಹಳ್ಳ ಕೊಳ್ಳಗಳ ಮೂಲಕ ಹರಿದು ಪೋಲಾಗುತ್ತಿತ್ತು. ಇದು ತಿಳಿದ ಕೂಡಲೇ ಯುವಕರು ಬ್ಯಾರೇಜ್​ ಪುನರ್​​ನಿರ್ಮಾಣಕ್ಕೆ ಮುಂದಾಗಿದ್ದು, ನದಿ ನೀರನ್ನು ಕರೆಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಊರಿನಲ್ಲಿ ಗಣಪತಿ ಹಬ್ಬಕ್ಕೆಂದು ಸಂಗ್ರಹಿಸಿದ ಹಣದಲ್ಲಿ ಒಂದು ಪಾಲನ್ನು ಇದರ ಪುನರ್​ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. 70 ಸಾವಿರ ಖರ್ಚು ಮಾಡಿ ಈ ಬ್ಯಾರೇಜ್​ ದುರಸ್ತಿಗೊಳಿಸಿದ್ದು, ಬಳಿಕ ಕೆರೆಯ ಹೂಳು ತೆಗೆಸಿದ್ದಾರೆ. ಪರಿಣಾಮ ಕೆರೆಗೆ ನೀರು ಸಂಗ್ರಹವಾಗಿದೆ.

ಇದನ್ನು ಓದಿ: ಇನ್ನೂ ದುರಸ್ತಿಯಾಗದ ಎನ್​ಆರ್​ಪುರದ ಅತಿದೊಡ್ಡ ತೂಗು ಸೇತುವೆ; ನದಿ ದಾಟಲು ತೆಪ್ಪವೇ ಆಸರೆ

ಇದರಿಂದ 345 ಎಕರೆಯ ಕೆರೆ ತುಂಬಿದ್ದು, ಯುವಕರ ಶ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಯುವಕರು ಮಾಡಿದ್ದು, ಊರಿನ ನೀರಿನ ಸಮಸ್ಯೆ ಹೋಗಲಾಡಿಸಿರುವುದು, ಗ್ರಾಮಸ್ಥರಲ್ಲಿ ಖುಷಿತಂದಿದೆ.

 
First published: