ನಗರ ಸಂಸ್ಥೆ ಚುನಾವಣೆ: ಏಳೇ ನಿಮಿಷದೊಳಗೆ ಪ್ರಕಟವಾಯಿತು ಈ ಜಿಲ್ಲೆಯ ಎಲ್ಲಾ ಫಲಿತಾಂಶ

ಮತ ಎಣಿಕೆ ಆರಂಭವಾದ ಕೇವಲ 4 ನಿಮಿಷದಲ್ಲಿಯೇ ಮೊದಲ ಫಲಿತಾಂಶ… ಕೇವಲ 7 ನಿಮಿಷಗಳಲ್ಲಿ ಎಲ್ಲ ಫಲಿತಾಂಶ… ಕಾಂಗ್ರೆಸ್ ಹೊರಗಿಡಲು ಜಿಡಿಎಸ್, ಪಕ್ಶೇತರರಿಗೆ ಅಧಿಕಾರ ಬಿಡಲು ಸಿದ್ಧವಾದ ಬಿಜೆಪಿ. ಗೆಲ್ಲುತ್ತಲೇ ನಮಾಜ್ ಮಾಡಿದ ಅಭ್ಯರ್ಥಿ. ಗೆದ್ದ ಅಭ್ಯರ್ಥಿಯ ಮೇಲೆ ಸೋತ ಅಭ್ಯರ್ಥಿಯಿಂದ ಹಲ್ಲೆ. ಇದು ನಡೆದದ್ದು ಎಲ್ಲಿ ಗೊತ್ತಾ?


Updated:September 3, 2018, 5:09 PM IST
ನಗರ ಸಂಸ್ಥೆ ಚುನಾವಣೆ: ಏಳೇ ನಿಮಿಷದೊಳಗೆ ಪ್ರಕಟವಾಯಿತು ಈ ಜಿಲ್ಲೆಯ ಎಲ್ಲಾ ಫಲಿತಾಂಶ
ಮತ ಎಣಿಕೆ ಆರಂಭವಾದ ಕೇವಲ 4 ನಿಮಿಷದಲ್ಲಿಯೇ ಮೊದಲ ಫಲಿತಾಂಶ… ಕೇವಲ 7 ನಿಮಿಷಗಳಲ್ಲಿ ಎಲ್ಲ ಫಲಿತಾಂಶ… ಕಾಂಗ್ರೆಸ್ ಹೊರಗಿಡಲು ಜಿಡಿಎಸ್, ಪಕ್ಶೇತರರಿಗೆ ಅಧಿಕಾರ ಬಿಡಲು ಸಿದ್ಧವಾದ ಬಿಜೆಪಿ. ಗೆಲ್ಲುತ್ತಲೇ ನಮಾಜ್ ಮಾಡಿದ ಅಭ್ಯರ್ಥಿ. ಗೆದ್ದ ಅಭ್ಯರ್ಥಿಯ ಮೇಲೆ ಸೋತ ಅಭ್ಯರ್ಥಿಯಿಂದ ಹಲ್ಲೆ. ಇದು ನಡೆದದ್ದು ಎಲ್ಲಿ ಗೊತ್ತಾ?

Updated: September 3, 2018, 5:09 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ. 03): ಪ್ರತಿಬಾರಿ ಚುನಾವಣೆ ನಡೆಸಿದಾಗಲೂ ರಾಜ್ಯದಲ್ಲಿಯೇ ಕೊನೆಯ ಫಲಿತಾಂಶ ಪ್ರಕಟವಾಗುವ ಮೂಲಕ ವಿಜಯಪುರ ಜಿಲ್ಲೆಯ ಚುನಾವಣಾಧಿಕಾರಿಗಳು ಗಮನ ಸೆಳೆಯುತ್ತಿದ್ದರು. ಆದರೆ, ಈ ಬಾರಿ ಮಾತ್ರ ವಿಜಯಪುರ ಜಿಲ್ಲೆಯ ಮತ ಎಣಿಕೆ ಆರಂಭವಾದ ಕೇವಲ 4 ನಿಮಿಷಗಳಲ್ಲಿ ಮೊದಲ ಫಲಿತಾಂಶ ಪ್ರಕಟವಾಗುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಮುದ್ದೇಬಿಹಾಳ ಪುರಸಭೆಯ ಮೊದಲ ವಾರ್ಡಿನ ಫಲಿತಾಂಶ ಪ್ರಕಟ ಮಾಡುವ ಮೂಲಕ ಚುನಾವಣಾಧಿಕಾರಿ ಎಂ.ಎನ್. ಚೋರಗಸ್ತಿ ಗಮನ ಸೆಳೆದಿದ್ದಾರೆ. ವಿಜಯೋತ್ಸವಕ್ಕೆ ಜನ ಬರುವ ಮುಂಚೆಯೇ ಅಂದರೆ ಮತ ಎಣಿಕೆ ಆರಂಭವಾಗಿ ಕೇವಲ 7 ನಿಮಿಷಗಳಲ್ಲಿ ಎಲ್ಲ 22 ವಾರ್ಡುಗಳ ಫಲಿತಾಂಶ ಪ್ರಕಟವಾಗಿದ್ದೂ ಕೂಡ ದಾಖಲೆಯಾಗಿದೆ.

ಜಿಲ್ಲಾವಾರು ಫಲಿತಾಂಶದ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಮುದ್ದೇಬಿಹಾಳ ಪುರಸಭೆಯಲ್ಲಿ ಒಟ್ಟು 23 ವಾರ್ಡುಗಳಿದ್ದು, ಕಾಂಗ್ರೆಸ್ಸಿನ ಅಭ್ಯರ್ಥಿ ಅಲ್ಲಾಭಕ್ಷ ಢವಳಗಿ ಅವರು ವಾರ್ಡ್ ಸಂಖ್ಯೆ 18ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈಗ ಉಳಿದ 22 ವಾರ್ಡುಗಳ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 23ರ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 8 ಸ್ಥಾನ ಗಳಿಸಿ ಸಮಬಲ ಸಾಧಿಸಿದ್ದು, ಇಬ್ಬರು ಜೆಡಿಎಸ್ ಮತ್ತು 5 ಜನ ಪಕ್ಶೇತರರು ಗೆಲುವು ಸಾಧಿಸಿದ್ದಾರೆ.

ಮುದ್ದೇಬಿಹಾಳ ವಾರ್ಡುಗಳು ಹಾಗೂ ವಿಜೇತರ ಪಟ್ಟಿ:
1. ಸಹನಾ ಬಡಿಗೇರ-ಬಿಜೆಪಿ
2. ಭಾರತಿ ಆರ್. ಪಾಟೀಲ- ಕಾಂಗ್ರೆಸ್
Loading...

3. ಮಾಗಿ‌ ಸದಾಶಿವಪ್ಪಾ-ಬಿಜೆಪಿ
4. ಬಸವರಾಜ ಮುರಾಳ- ಬಿಜೆಪಿ
5. ಯಲ್ಲಪ್ಪ ನಾಯಕ ಮಕ್ಕಳ ಪಕ್ಷೇತರ
6. ಪ್ರೀತಿ ದೇಗಿನಾಳ- ಕಾಂಗ್ರೆಸ್
7. ದೇವರಹಳ್ಳಿ ಸಂಗಮ್ಮ‌- ಬಿಜೆಪಿ
8. ಅಶೋಕ ವನಹಳ್ಳಿ-ಬಿಜೆಪಿ
9. ವಿರೇಶ ಹಡಲಗಿ-ಪಕ್ಷೇತರ
10. ಸೋನಾಬಾಯಿ ನಾಯಕ- ಕಾಂಗ್ರೆಸ್
11- ಮುಲಿಮನಿ ಶರೀಫ- ಪಕ್ಷೇತರ
12- ದ್ರಾಕ್ಷಿ ರಫಿಕ್ ಅಹ್ಮದ್ ಬಾಲೇಚಂದ್- ಕಾಂಗ್ರೆಸ್
13. ಶಿವಪ್ಪ ಹರಿಜನ-ಕಾಂಗ್ರೆಸ್
14. ಹನುಮಂತ ಸಾಬಣ್ಣ ಬೋವಿ-ಕಾಂಗ್ರೆಸ್
15. ಅಂಗಡಗೇರಿ ಪ್ರತಿಭಾ ರುದ್ರಗೌಡರ-ಜೆಡಿಎಸ್
16. ಚಾಂದಬಿ ಮಕಾನದಾರ- ಜೆಡಿಎಸ್
17. ಚನ್ನಪ್ಪ ಸಿದ್ದಪ್ಪ ಕಂಠಿ- ಬಿಜೆಪಿ
18. ಅಲ್ಲಾಭಕ್ಷ ಡವಳಗಿ- ಕಾಂಗ್ರೆಸ್
19. ಹುಣಚಗಿ ಶಹಾಜದಬಿ- ಪಕ್ಷೇತರ
20. ಮಹಿಬೂಬ್ ಲಾಲಸಾಬ್ ಗೊಳಸಂಗಿ- ಕಾಂಗ್ರೆಸ್
21. ರಿಯಾಜ ಅಹ್ಮದ್ ಡಬಳಗಿ- ಪಕ್ಷೇತರ
22. ಬಸಪ್ಪ ದ್ಯಾಮಣ್ಣ ತಟ್ಟಿ- ಬಿಜೆಪಿ
23. ಶಾಂತಾಬಾಯಿ ರಾಮಣ್ಣ ಪೂಜಾರಿ- ಬಿಜೆಪಿ

ಈ ಮಧ್ಯೆ ಮುದ್ದೇಬಿಹಾಳದಲ್ಲಿ ಚುನಾವಣೋತ್ತರ ಗಲಭೆ ಸಂಭವಿಸಿದ್ದು, ಗೆದ್ದ ಪಕ್ಶೇತರ ಅಭ್ಯರ್ಥಿ ಮೇಲೆ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ವಾರ್ಡ್ ಸಂಖ್ಯೆ 5ರ ವಿಜೇತ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಹನುಮಂತ ನಾಯಕಮಕ್ಕಳ ಮೇಲೆ ಬಿಜೆಪಿಯಿಂದ ಸೋತ ಅಭ್ಯರ್ಥಿ ಹುಲಗಪ್ಪ ಮಲಕಣ್ಣ ನಾಯಕಮಕ್ಕಳ ಮತ್ತು ಬೆಂಬಲಿಗರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮುದ್ದೇಬಿಹಾಳ ಪೊಲೀಸರಿಗೆ ದೂರು ನೀಡಲಾಗಿದೆ.

ಇದೇ ವೇಳೆ, ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಈ ಬಾರಿ 12 ರಿಂದ 14 ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಆದರೂ, ಕಾಂಗ್ರೆಸ್ಸನ್ನು ಅಧಿಕಾರದಿಂದ ಹೊರಗಿಡಲು ಜೆಡಿಎಸ್ ಹಾಗೂ ಪಕ್ಶೇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಬಿಟ್ಟುಕೊಡಲು ಸಿದ್ಧ ಎಂದು ಘೋಷಿಸಿದ್ದಾರೆ.

ಇನ್ನು, ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ 20ನೇ ವಾರ್ಡಿನ ಮೆಹಬೂಬ್ ಗೊಳಸಂಗಿ ನಮಾಜ್ ಮಾಡಿ ಅಲ್ಲಾಹುವಿಗೆ ಕೃತಜ್ಞತೆ ಸಲ್ಲಿಸಿದರು. ಇತ್ತ ವಿಜೇತ ಅಭ್ಯರ್ಥಿಗಳು ಸಂಭ್ರಮಾಚರಣೆ ನಡೆಸಿದರು.

ಜಿಲ್ಲಾವಾರು ಫಲಿತಾಂಶದ ಪೂರ್ಣ ವಿವರಕ್ಕೆ ಕ್ಲಿಕ್ ಮಾಡಿ
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ