ಬೆಂಗಳೂರುಲ: ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾಗಿ ಪರಾರಿಯಾಗಿರುವ ಪುಂಡರಿಗಾಗಿ ಸ್ಥಳೀಯ ಪೊಲೀಸರು ಬಲೆ ಬೀಸಿದ್ದಾರೆ. ಗಲಭೆ ಬಳಿಕ ಕೇಂದ್ರ ವಲಯ ಪೊಲೀಸರು ಎಚ್ಚೆತ್ತುಕೊಂಡಿದ್ದು, ತಮ್ಮ ವ್ಯಾಪ್ತಿಯ ಎಸ್ಪಿಗಳ ಜೊತೆ ಸಭೆ ನಡೆಸಿದ ಐಜಿ ಸೀಮಂತ್ ಕುಮಾರ್, ಗಲಭೆಕೋರರು ಎಲ್ಲೇ ಇದ್ದರೂ ಪತ್ತೆಹಚ್ಚುವಂತೆ ಸೂಚನೆ ನೀಡಿದ್ದಾರೆ.
ಐಜಿಪಿ ಸೀಮಂತ್ ಕುಮಾರ್ ಎಸ್ಪಿಗಳ ಜೊತೆ ಸಭೆ ನಡೆಸಿ, ಬೆಂಗಳೂರು ಬಿಟ್ಟ ಆರೋಪಿಗಳು ಹೊರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದಾರೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿರುವ ಪುಂಡರ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದಾರೆ. ಕೋಲಾರ, ಹೊಸಕೋಟೆ, ಆನೇಕಲ್, ಚನ್ನಪಟ್ಟಣ, ರಾಮನಗರ, ಚಿಂತಾಮಣಿ, ಚಿಕ್ಕಬಳ್ಳಾಪುರದಲ್ಲಿ ಇವರೆಲ್ಲಾ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ನಟ ನಟಿಯರು, ಮ್ಯೂಸಿಕ್ ಡೈರೆಕ್ಟರ್ಸ್ ಇವರ ಗ್ರಾಹಕರು
ಅರವತ್ತಕ್ಕೂ ಹೆಚ್ಚು ಪ್ರಮುಖ ಆರೋಪಿಗಳು ಹೊರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನುಮಾನಾಸ್ಪದವಾಗಿ ಓಡಾಡುವವರ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ. ಅಷ್ಟೇ ಅಲ್ಲದೇ ಮುಸ್ಲಿಂ ಜನಾಂಗ ಹೆಚ್ಚಿರುವ ಪ್ರದೇಶಗಳಲ್ಲಿ ಹುಡುಕಾಟಕ್ಕೆ ಐಜಿಪಿ ತಿಳಿಸಿದ್ದಾರೆ. ಹೊಸದಾಗಿ ಏರಿಯಾಗಳಲ್ಲಿ ಬಂದು ನೆಲೆಸಿರುವ ಬಗ್ಗೆ ಪಟ್ಟಿ ಕೊಡುವಂತೆ ಹೇಳಿದ್ದು, ಅದೇ ರೀತಿ ಎಲ್ಲಾ ಸ್ಥಳೀಯ ಠಾಣೆಯ ಇನ್ಸ್ ಪೆಕ್ಟರ್ಗಳಿಗೆ ಎಸ್ಪಿಗಳು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ. ಇನ್ನೆರಡು ದಿನದಲ್ಲಿ ಲಿಸ್ಟ್ ಕೊಟ್ಟು, ಅನುಮಾನಾಸ್ಪದವಾಗಿ ಕಂಡರೆ ವಶಕ್ಕೆ ಪಡೆಯುವಂತೆಯೂ ಹೇಳಲಾಗಿದೆ. ಅಷ್ಟೇ ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಹುಡುಕಾಟದ ಸಮಯದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಗೆ ಐಜಿಪಿ ತಿಳಿಸಿದ್ದಾರೆ. ಒಂದು ವೇಳೆ ಗಲಭೆಯಲ್ಲಿ ಭಾಗಿಯಾಗಿ, ತಲೆ ಮರೆಸಿಕೊಂಡವರ ಮಾಹಿತಿ ಸಿಕ್ಕರೆ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ. ಆರೋಪಿಗಳ ವಾಸ್ತವ್ಯಕ್ಕೆ ಜಾಗ ಕೊಟ್ಟವರ ಮೇಲೂ ಶಿಸ್ತುಕ್ರಮಕ್ಕೂ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ