ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡರನ್ನು ಮಣಿಸಲು ತಂತ್ರ ರೂಪಿಸಲಾಗುತ್ತಿದೆಯಾ?

ಬಿಜೆಪಿಯಲ್ಲೇ ಒಕ್ಕಲಿಗ ನಾಯಕನಿಗಾಗಿ ಕಿತ್ತಾಟಗಳು ನಡೆಯುತ್ತಿದ್ದು,  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಾ. ಚಂದ್ರಶೇಖರ್ ಅವರನ್ನು ಮುಂದೆ ಬಿಡಲು ತಂತ್ರ ಹೆಣೆಯಲಾಗುತ್ತಿದೆ.

ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

  • News18
  • Last Updated :
  • Share this:
ರಮೇಶ್​ ಹಿರೇಜಂಬೂರು

ಬೆಂಗಳೂರು (ಫೆ.10):  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೊಂದೇ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದ್ದು, ಬಿಜೆಪಿಯೊಳಗೇ ಟಿಕೆಟ್​ ಹಂಚಿಕೆ ವಿಷಯದಲ್ಲಿ ಹಲವಾರು ರೀತಿಯ ಅಸಮಾಧಾನಗಳು ಎದ್ದಿವೆ.

ಬಿಜೆಪಿಯಲ್ಲೇ ಒಕ್ಕಲಿಗ ನಾಯಕನಿಗಾಗಿ ಕಿತ್ತಾಟಗಳು ನಡೆಯುತ್ತಿದ್ದು,  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಾ. ಚಂದ್ರಶೇಖರ್ ಅವರನ್ನು ಮುಂದೆ ಬಿಡಲು ತಂತ್ರ ಹೆಣೆಯಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಚಂದ್ರಶೇಖರ್ ಚಿಂತಕರ ಸಭೆ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಚಿಂತಕರೆಲ್ಲ ಸೇರಿ ಚಂದ್ರಶೇಖರ್‌ಗೆ ಬೆಂಬಲ ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.

'ತಾಕತ್ತಿಲ್ಲದ ಸರ್ಕಾರದಿಂದ ಏನೂ ಪ್ರಯೋಜನವಿಲ್ಲ, ಇಂತಹ ಸಿಎಂ ನಾನೆಲ್ಲೂ ನೋಡಿಲ್ಲ'; ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮೋದಿ ವಾಗ್ದಾಳಿ

ಬೆಂಗಳೂರಿನ ಖಾಸಗಿ ಕ್ಲಬ್ ನಲ್ಲಿ ಭವಿಷ್ಯದ ಭಾರತ ಕಾರ್ಯಕ್ರಮದ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ನಾಯಕರು ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಒಕ್ಕಲಿಗರ ಸಂಘದ ಪದಾಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರ‌ನ್ನು ನಿರ್ಲಕ್ಷ್ಯ ಮಾಡಲಾಗಿದೆ. ಹೀಗಾಗಿ ಬೆಂಗಳೂರಿಗೆ ಪ್ರಬಲ ಒಕ್ಕಲಿಗ ನಾಯಕರು ಬೇಕು. ಬಿಜೆಪಿಯಲ್ಲಿ ಕಾಂಗ್ರೆಸ್ ನಂತೆ ಪ್ರಬಲ ಒಕ್ಕಲಿಗ ನಾಯಕರಿಲ್ಲ. ಹೀಗಾಗಿ ಡಾ. ಚಂದ್ರಶೇಖರ್ ಅವರನ್ನು ನಾಯಕನ್ನಾಗಿ ರೂಪಿಸಲು ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ.

ಮಾಜಿ ಕಾರ್ಪೊರೇಟರ್ ಮುನಿಕೃಷ್ಣ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಕೂಡ ಸಭೆಯಲ್ಲಿ ಭಾಗಿಯಾಗಿದ್ದು, ‌ಸದನದಲ್ಲಿ ಇವತ್ತು ನಮಗೆ ನಾವೇ ಕೆಸರು ಎರಚಿಕೊಳ್ಳುತ್ತಿದ್ದೇವೆ. ನಮಗೆ ಉತ್ತಮ ಜನನಾಯಕರ ಕೊರತೆ ಇದೆ. ಭವಿಷ್ಯದ ಭಾರತಕ್ಕೆ ಉತ್ತಮ ನಾಯಕ ಅಗತ್ಯ ಇದೆ ಎಂದು ಪ್ರೊ. ನಾಗರಾಜ್ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಿಯನ್ನು ಹೊಗಳಿದ ಎಸ್​.ಎಂ. ಕೃಷ್ಣ; ಇದೇ ಮೋದಿ ನಿಮ್ಮನ್ನು ಗೇಲಿ ಮಾಡಿದ್ದನ್ನು ಮರೆತಿರಾ ಎಂದು ಕೆಣಕಿದ ಕಾಂಗ್ರೆಸ್

ನಮಗೆ ಹೊಸ ನಾಯಕರು ಬೇಕು. ಭವಿಷ್ಯದ ಭಾರತಕ್ಕೆ ಬಿಸಿರಕ್ತ ಬೇಕು. ನಮ್ಮ ವಯಸ್ಸಿನ ನಾಯಕರೆಲ್ಲ ಇಂದು ಹಾಳಾಗಿದ್ದಾರೆ. ಡಾ. ಚಂದ್ರಶೇಖರ್ ಅವರಂತಹ ನಾಯರನ್ನು ಬೆಳೆಸಬೇಕು. ಹಳೆಯ ನಾಯಕರನ್ನು ಬಿಟ್ಟುಬಿಡಿ. ಪ್ರಾಮಾಣಿಕ, ಭ್ರಷ್ಟರಲ್ಲದ ಚಂದ್ರಶೇಖರ್ ಅವರಂತಹ ನಾಯಕರನ್ನು ಬೆಳೆಸಬೇಕು. ಹಳಬರನ್ನು ಕೈಬಿಟ್ಟು ಇಂತಹ ಹೊಸ ನಾಯಕರನ್ನು ಬೆಳೆಸಬೇಕು. ಆ ಮೂಲಕ ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಬೇಕು. ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಳ್ಳುವ ನಾಯಕರು ನಮಗೆ ಬೇಡ ಎಂದು ಬಹಿರಂಗವಾಗಿಯೇ ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ವಿರುದ್ಧ ಪ್ರೊ. ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.

ಕೊಟ್ಟ ಮಾತಿನಂತೆ ಯಡಿಯೂರಪ್ಪ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ ಆಗ್ರಹ

ಹಿಂದೆ ಒಬ್ಬ ಮಾಜಿ ಕಾರ್ಪೋರೇಟರ್, ಶಾಸಕ ಬಹಿರಂಗವಾಗಿ ಮತಚೀಟಿಗಳನ್ನು ಸೃಷ್ಟಿ ಮಾಡಿದ್ದರು. ಆದರೆ, ಅವರ ವಿರುದ್ಧ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಸರ್ಕಾರಗಳು ಇಂತಹ ಭ್ರಷ್ಟರಿಗೆ ಬೆಂಬಲವಾಗಿ ನಿಲ್ಲುತ್ತದೆ. ಇಂತಹ ಜನ ನಾಯಕರು ನಮ್ಮ ನಡುವೆ ಇದ್ದಾರೆ. ಈ ಕ್ಷೇತ್ರಕ್ಕೆ ಡಾ. ಚಂದ್ರಶೇಖರ್ ರಂತಹ ಜನ ನಾಯಕರು ಬೇಕು. ಇಂತಹ ವ್ಯಕ್ತಿಗಳಗೆ ನಾವು ಬೆಂಬಲ ನೀಡಬೇಕು. ಮತದಾರರು ಕೂಡ ಇಂತ ರಾಜಕಾರಣಿಗಳ ಪರ ನಿಲ್ಲಬೇಕು. ಡಾ. ಚಂದ್ರಶೇಖರ್ ಪರ ನೇರವಾಗಿ ಬ್ಯಾಟಿಂಗ್ ಮಾಡಿದ ಬಿಜೆಪಿ ಸಂಚಾಲಕ ಅಶ್ವತ್ಥ್ ಹೇಳಿಕೆ ನೀಡಿದ್ದಾರೆ.

ಡಾ.‌ ಚಂದ್ರಶೇಖರ್ ಪರ ಅಬ್ದುಲ್ ಅಜೀಂ ಕೂಡ ಬ್ಯಾಟಿಂಗ್ ಮಾಡಿದ್ದು, ಈಗಾಗಲೇ ನೀವು ಯೋಗಿ ಆದಿತ್ಯನಾಥ್ ಪುಸ್ತಕ ಬರೆದಿದ್ದೀರಿ. ನೇರವಾಗಿ ದೆಹಲಿ ಕಡೆ ನೋಡ್ತಾ ಇದ್ದೀರಿ. ನೀವು ಜನಕ್ಕೂ ಯಶಸ್ವಿ ಆಗುತ್ತೀರಿ. ನೀವು ಮೊದಲ ಬಾರಿಗೆ ಸಂಸತ್​ಗೆ ಹೋದರೆ ಭವಿಷ್ಯದ ಭಾರತ ವಿಷಯಗಳನ್ನು ನೀವು ಸದನದಲ್ಲಿ ಪ್ರಸ್ತಾಪ ಮಾಡಿ ಎಂದು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.

First published: