ಚುನಾವಣಾ ಪ್ರಚಾರದಲ್ಲಿ ಮುಖಾಮುಖಿಯಾದ ಬದ್ಧ ವೈರಿಗಳು : ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಬಿಜೆಪಿ

news18
Updated:August 29, 2018, 10:28 PM IST
ಚುನಾವಣಾ ಪ್ರಚಾರದಲ್ಲಿ ಮುಖಾಮುಖಿಯಾದ ಬದ್ಧ ವೈರಿಗಳು : ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಬಿಜೆಪಿ
news18
Updated: August 29, 2018, 10:28 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಆಗಸ್ಟ್ 29) :  ಸ್ಥಳೀಯ ಸಂಸ್ಥೆ ಚುನಾವಣೆಗೆ ದಿನಾಂಕ ಹತ್ತಿರ ಬರುತ್ತಿರುವಂತೆಯೇ ಕಲಬುರ್ಗಿ ಜಿಲ್ಲೆಯಲ್ಲಿ ಪ್ರಚಾರ ಭರಾಟೆ ಬಿರುಸುಗೊಂಡಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಮುಖಂಡರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಅದರಲ್ಲಿಯೂ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಅಫಜಲಪುರದಲ್ಲಿ ಪ್ರಚಾರ ಮತ್ತಷ್ಟು ರಂಗೇರಿದೆ. ಬಹಿರಂಗ ಪ್ರಚಾರದ ನಂತರ ಮನೆ ಮನೆ ಪ್ರಚಾರದ ವೇಳೆ ರಾಜಕೀಯ ಬದ್ಧವೈರಿಗಳು ಮುಖಾಮುಖಿಯಾದ ಘಟನೆ ಅಫಜಲಪುರದ 11ನೇ ವಾರ್ಡ್ ನಲ್ಲಿ ನಡೆದಿದೆ.

ಅಫಜಲಪುರ ಪುರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಚಾರ ಭರಾಟೆ ಜೋರಾಗಿತ್ತು. ಬದ್ಧ ವೈರಿಗಳೆನಿಸಿದ ಎಂ.ವೈ.ಪಾಟೀಲ ಮತ್ತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಹೋದರ ನಿತಿನ್ ಗುತ್ತೇದಾರ ಪ್ರಚಾರದ ವೇಳೆ ಮುಖಾಮುಖಿಯಾದರು. ಅಫಜಲಪುರದ ವಾರ್ಡ್ ಸಂಖ್ಯೆ 11 ರಲ್ಲಿ ಬೆಂಬಲಿಗರ ಜಯಘೋಷಗಳ ಮಧ್ಯೆ ಮುಖಂಡರು ಮುಖಾಮುಖಿಯಾದರು. ಗೊಂದಲ ಸೃಷ್ಟಿಯಾಗಬಾರದೆಂದು ಕಾರ್ಯಕರ್ತರು ಆ ಕಡೆ ಹೋಗೋಣವೆಂದು ಸಲಹೆ ನೀಡಿದಾಗ, ಯಾಕೆ ಹೀಗೆ ಹೋಗಬಾರದಾ ಎಂದು ಶಾಸಕ ಎಂ.ವೈ.ಪಾಟೀಲ ಪ್ರಶ್ನಿಸಿದರು. ಪಟ್ಟು ಹಿಡಿದು ಅದೇ ಮಾರ್ಗದಲ್ಲಿ ಮುಂದೆ ಸಾಗಿದರು.

ಅದೇ ಮಾರ್ಗದಲ್ಲಿ ಮುನ್ನಡೆದಾಗ ಎದುರುಬದರಾಗಿ ಎಂ.ವೈ.ಪಾಟೀಲ ಮತ್ತು ಜಿ.ಪಂ. ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಪರಸ್ಪರ ನಮಸ್ಕಾರಿಸುತ್ತಾ ಮುಂದೆ ಸಾಗಿದರು. ಆದರೆ ಅವರವರ ಬೆಂಬಲಿಗರು ಮಾತ್ರ ಸುಮ್ಮನಿರದೆ ಅವರ ಮುಖಂಡರ ಪರವಾಗಿ ಜಯಘೋಷ ಹಾಕಿ ತಮ್ಮ ನಿಷ್ಟೆಯನ್ನು ತೋರಿಸಿ ಗಮನ ಸೆಳೆದರು.

ಇದೇ ವೇಳೆ ಪುರಸಭೆ ಚುನಾವಣೆಯ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಂಡದ್ದು ಬೆಳಕಿಗೆ ಬಂದಿದೆ. ಬಿಜೆಪಿ ಅಭ್ಯರ್ಥಿಗಳು ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ. ಮೋದಿ ಮುಖವಾಡ ಹಾಕಿಕೊಂಡು, ಕೈಯಲ್ಲಿ ಬಿಜೆಪಿ ಧ್ವಜ ಹಿಡಿದಿ ಓಣಿ ಓಣಿ ಸುತ್ತುತ್ತಾ ಮಕ್ಕಳು ಬಿಜೆಪಿ ಪರ ಮತ ಹಾಕುವಂತೆ ಮನವಿ ಮಾಡಿದರು. ಒಟ್ಟಾರೆ ಪುರಸಭೆ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಸಿದ್ದು, ಬಿರುಸಿನ ಪ್ರಚಾರದಲ್ಲಿ ನಿರತವಾಗಿವೆ.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ