ಸ್ಥಳೀಯ ಸಂಸ್ಥೆಗಳ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ; ಆ.31ಕ್ಕೆ ಮತದಾನ

news18
Updated:August 29, 2018, 12:32 PM IST
ಸ್ಥಳೀಯ ಸಂಸ್ಥೆಗಳ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ; ಆ.31ಕ್ಕೆ ಮತದಾನ
news18
Updated: August 29, 2018, 12:32 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಆ.29): ಮೈತ್ರಿ ಸರ್ಕಾರದ ಪಕ್ಷಗಳು ಸೇರಿದಂತೆ ಬಿಜೆಪಿಗೆ ಪ್ರತಿಷ್ಟೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನೆರಡು ದಿನ ಬಾಕಿ ಇದ್ದು, ಚುನಾವಣಾ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ.

ಇಂದು ಬೆಳಗ್ಗೆ 7ಗಂಟೆಗೆ ಚುನಾವಣಾ ಪ್ರಚಾರಕ್ಕೆ ಅಂತಿಮ ತೆರೆಬಿದಿದ್ದು, 31ರಂದು ಮತದಾನ ನಡೆಯಲಿದೆ. ಮೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 22 ಜಿಲ್ಲೆಗಳಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್​  ಚುನಾವಣೆ ನಡೆಯಲಿದೆ.

ಪ್ರಚಾರ ಬಹಿರಂಗವಾಗಿ ಅಂತ್ಯವಾಗಿದ್ದು, ರಾಜಕೀಯ ನಾಯಕರು ಗುಂಪು ಕಟ್ಟಿಕೊಂಡು ಯಾವುದೇ ಪ್ರಚಾರ ನಡೆಸುವಂತಿಲ್ಲ.ಮೂರಕ್ಕಿಂತ ಹೆಚ್ಚು ಜನರ ಸೇರದೆ  ಮನೆ ಮನೆಗೆ ಹೋಗಿ ಬೇಕಾದರೆ ಮತ ಕೇಳಬಹುದಾಗಿದೆ.

ಚುನಾವಣೆ ನಡೆಯುವ ನಗರ,  ಪಟ್ಟಣಗಳಲ್ಲಿ ನಾಳೆ ಸಂಜೆ 6ಗಂಟೆಯಿಂದ ಮತದಾನ ನಡೆಯುವ ಮುಂಜಾನೆ ಅಂದರೆ ಆ.31ರವರೆಗೆ ಮದ್ಯ ನಿಷೇಧಿಸಲಾಗಿದೆ. ಇನ್ನು ಚುನಾವಣೆ ದಿನ ಮತದಾನಕ್ಕೆ ಅನುಕೂಲವಾಗುವಂತೆ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡುವಂತೆ ಚುನಾವಣಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ