ನಗರ ಸ್ಥಳೀಯ ಸಂಸ್ಥೆ ಚುನಾವಣೆ - ಜಿಲ್ಲೆಯಲ್ಲಿ ಶೇ.64.38 ರಷ್ಟು ಮತದಾನ

news18
Updated:August 31, 2018, 11:23 PM IST
ನಗರ ಸ್ಥಳೀಯ ಸಂಸ್ಥೆ ಚುನಾವಣೆ - ಜಿಲ್ಲೆಯಲ್ಲಿ ಶೇ.64.38 ರಷ್ಟು ಮತದಾನ
news18
Updated: August 31, 2018, 11:23 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆಗಸ್ಟ್ 310 : ಕಲಬುರ್ಗಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ. 168 ವಾರ್ಡ್ ಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ನಲ್ಲಿ ಭದ್ರಗೊಂಡಿದೆ.

ಲೋಕಸಭೆಗೆ ಪೂರ್ವದಲ್ಲಿ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಏಳು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಶೇ. 64.38ರಷ್ಟು ಮತದಾನವಾಗಿದೆ. ಜಿಲ್ಲೆಯ ಶಹಾಬಾದ್ ನಗರಸಭೆಯ 27 ವಾರ್ಡ್, ಆಳಂದ ಪುರಸಭೆಯ 27, ಅಫಜಲಪುರ ಪುರಸಭೆಯ 21, ಜೇವರ್ಗಿ ಪುರಸಭೆಯ 23, ಸೇಡಂ ಪುರಸಭೆಯ 24, ಚಿತ್ತಾಪುರ ಪುರಸಭೆಯ 23, ಚಿಂಚೋಳಿ ಪುರಸಭೆಯ 23 ವಾರ್ಡ್ ಗಳಿಗೆ ಮತದಾನ ನಡೆಯಿತು.

ಅಫಜಲಪುರದ 5ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಮತ್ತೊಂದು ವಾರ್ಡ್ ನಲ್ಲಿ ಚುನಾವಣೆ ನಡೆದಿಲ್ಲ. ಉಳಿದಂತೆ 168 ವಾರ್ಡ್ ಗಳಿಗೆ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ ಶೇ.64.38 ರಷ್ಟು ಮತದಾನವಾಗಿದೆ.ಶಹಾಬಾದ್ ನಗರಸಭೆ - ಶೇ 53.22, ಸೇಡಂ ಪುರಸಭೆ – ಶೇ.67.51, ಚಿತ್ತಾಪೂರ ಪುರಸಭೆ – ಶೇ.67.42, ಆಳಂದ ಪುರಸಭೆ – ಶೇ.62.52, ಜೇವರ್ಗಿ ಪುರಸಭೆ – ಶೇ.71.44, ಚಿಂಚೋಳಿ ಪುರಸಭೆ – ಶೇ.70.44, ಅಫಜಲಪೂರ ಪುರಸಭೆ – ಶೇ.72.03 ರಷ್ಟು ಮತದಾನವಾಗಿದೆ. ಮತದಾರರ ಬೆಳಿಗ್ಗೆಯಿಂದಲೇ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

ತಮ್ಮ ಪಟ್ಟಣಗಳ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆಯಾಗಲಿ ಎಂಬ ಆಶಯದೊಂದಿಗೆ ಮತ ಹಾಕಿದ್ದೇವೆ. ಗೆದ್ದು ಬಂದವರು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕೆಂದು ಮತದಾರರು ಅಭಿಪ್ರಾಯಪಟ್ಟಿದ್ದಾರೆ.
Loading...

ತಾಂತ್ರಿಕವಾಗಿ ಎಲ್ಲಿಯೂ ಮತಯಂತ್ರಗಳಲ್ಲಿ ದೋಷ ಕಂಡುಬಂದಿಲ್ಲದಿದ್ದರಿಂದ ಜಿಲ್ಲೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ. ಆದರೆ ಕೆಲವೆಡೆ ವೀಲ್ ಚೇರ್ ವ್ಯವಸ್ಥೆ ಮಾಡದ ಪರಿಣಾಮ ವೃದ್ಧೆಯರು ಮತದಾನ ಹಾಕಲು ಪರದಾಡುವಂತಾಯಿತು. ಚಿತ್ತಾಪುರದಲ್ಲಿ 85 ವರ್ಷದ ವೃದ್ಧೆ ತಳ್ಳು ಗಾಡಿಯಲ್ಲಿ ಬಂದು ಮತದಾನ ಮಾಡಿದರೆ, ಅಫಜಲಪುರದಲ್ಲಿ ವೀಲ್ ಚೇರ್ ಇಲ್ಲದೆ ಹರಸಾಹಸಪಟ್ಟು ಮತಗಟ್ಟೆಗೆ ಬಂದು 75 ವರ್ಷದ ವೃದ್ಧೆ ತಮ್ಮ ಹಕ್ಕು ಚಲಾಯಿಸಿದರು.

ಒಟ್ಟಾರೆ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ಸೇರಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...