ಸಾಲ ಮಾಡಿದ ರೈತನಿಗೆ ಕಲ್ಕತ್ತಾ ಕೋರ್ಟ್‌ ಗೆ ಹಾಜರಾಗುವಂತೆ ವಾರಂಟ್..!

news18
Updated:August 13, 2018, 6:26 PM IST
ಸಾಲ ಮಾಡಿದ ರೈತನಿಗೆ ಕಲ್ಕತ್ತಾ ಕೋರ್ಟ್‌ ಗೆ ಹಾಜರಾಗುವಂತೆ ವಾರಂಟ್..!
news18
Updated: August 13, 2018, 6:26 PM IST
-ಲೋಹಿತ್ ಶಿರೋಳ, ನ್ಯೂಸ್ 18 ಕನ್ನಡ

ಚಿಕ್ಕೋಡಿ ( ಆಗಸ್ಟ್ 13) :  ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳುತ್ತಿದ್ದರೂ ಸಾಲ ಮನ್ನಾ ಎಂಬುವದು ಇನ್ನೂ ಗೊಂದಲವಾಗಿಯೇ ಉಳಿದಿದೆ. ಆದರೆ ಖಾಸಗಿ ಬ್ಯಾಂಕಿನ ಎಡವಟ್ಟಿನಿಂದ ಸಾಲ ಮಾಡಿದ ರೈತರು ಪಡಬಾರದ ಕಷ್ಟ ಪಡುವಂತಾಗಿದೆ.

ಎಕ್ಸಿಸ್ ಬ್ಯಾಂಕಿನ ಎಡವಟ್ಟಿನಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ 12 ಜನ ರೈತರು ಈಗ ದೂರದ ಕೋಲ್ಕತ್ತಾ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

2008 ರಲ್ಲಿ ಸಾಮೂಹಿಕವಾಗಿ ತಮ್ಮ ಜಮೀನುಗಳಿಗೆ ನೀರಿನ ಪೈಪ್ ಲೈನ್ ಮಾಡಿಕೊಳ್ಳಲು ಎಕ್ಸಿಸ್ ಬ್ಯಾಂಕಿನಿಂದ 86 ಜನ ಪ್ರತಿ ಎಕರೆಗೆ 3 ಲಕ್ಷ ಸಾಲ ಪಡೆದುಕೊಂಡಿದ್ದರು. ಅದರಲ್ಲಿ 63 ಜನ ಸಾಲ ಮರು ಪಾವತಿ ಮಾಡಿದ್ದಾರೆ. ಆದರೆ 12 ಜನ ರೈತರು ಆರ್ಥಿಕ ಸಂಕಷ್ಟ ದಿಂದ 2014 ರ ವರೆಗೆ ಬ್ಯಾಂಕಿನ ಕಂತು ಹಣವನ್ನ ಕಟ್ಟಿ ಬಿಟ್ಟು ಬಿಟ್ಟಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಡ್ಡಿಗೆ ಹೆದರಿ ರೈತರು ಸಾಲವನ್ನ ತುಂಬಿಲ್ಲ ಆದ್ರೆ ಈಗ ಎಕ್ಸಿಸ್ ಬ್ಯಾಂಕ ಈ ರೈತರ ವಿರುದ್ಧ ಕೋಲ್ಕತ್ತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಕಳಿಸಿದೆ.

ಇದರಿಂದ ಕಂಗೆಟ್ಟಿರುವ 12 ಜನ ರೈತರು ನಮಗೆ ಸರಿಯಾಗಿ ಬೆಳಗಾವಿ ನಗರದ ಬಗ್ಗೆನೇ ಗೊತ್ತಿಲ್ಲ ಇನ್ನೂ ಕೋಲ್ಕತ್ತಾ ಮಹಾ ನಗರಕ್ಕೆ ಹೇಗೆ ಹೋಗುವದು? ಅಲ್ಲಿ ಹೇಗೆ ನಮ್ಮ ವಕೀಲರನ್ನ ನೇಮಿಸುವದು ಎಂದು ಕಂಗಾಲಾಗಿದ್ದಾರೆ. ಮೊದಲೇ ನಮ್ಮ ಬಳಿ ಹಣ ಇಲ್ಲಾ ಸಂಪೂರ್ಣ ಸಾಲ ಮನ್ನಾ ಆಗುತ್ತೆ ಎಂದುಕೊಂಡಿದ್ದೇವೆ.

ಆದರೆ ಈಗ ನಮ್ಮ ಪರಿಸ್ಥಿತಿ ದುಸ್ಥರವಾಗಿದೆ. ಸಾಲದ ನೋಟೀಸ್ ನೀಡಬೇಡಿ ಎಂದರೂ ಖಾಸಗಿ ಬ್ಯಾಂಕಿನವರು ನೋಟೀಸ್ ನೀಡುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ನಮಗೆ ರಕ್ಷಣೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

 
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...