liveLIVE NOW

LIVE: Sindagi, Hanagal By Election Result Today: ಸಿಂದಗಿಯಲ್ಲಿ ಬಿಜೆಪಿ & ಹಾನಗಲ್​​ನಲ್ಲಿ ಕಾಂಗ್ರೆಸ್​​ ಜಯಭೇರಿ; JDSಗೆ ಭಾರೀ ಮುಖಭಂಗ

Sindagi, Hanagal By Election Result: ಸಿಂದಗಿ(Sindagi) ಹಾಗೂ ಹಾನಗಲ್(Hanagal)​​ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ (By Election Result) ಇಂದು ಹೊರ ಬಿದ್ದಿದೆ. ಹಾನಗಲ್​ನಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದರೆ, ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾನಗಲ್​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಗೆದ್ದಿದ್ದರೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ವಿಜಯ ಪತಾಕೆ ಹಾರಿಸಿದ್ದಾರೆ.

 • News18 Kannada
 • | November 02, 2021, 15:39 IST
  facebookTwitterLinkedin
  LAST UPDATED A YEAR AGO

  AUTO-REFRESH

  ಹೈಲೈಟ್ಸ್

  15:28 (IST)

  ಹಾನಗಲ್ : 

  ಅಂತಿಮ ಫಲಿತಾಂಶ..

  ಕಾಂಗ್ರೆಸ್:- 87490

  ಬಿಜೆಪಿ:- 80117

  ಜೆಡಿಎಸ್: 927

  ಕಾಂಗ್ರೆಸ್ ಗೆಲುವಿನ

  ಅಂತರ:-7373

  14:56 (IST)

  ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲವು ವಿಚಾರ.
  ಬೆಳಗಾವಿಯಲ್ಲಿ ‌ಶಾಸಕಿ ಲಕ್ಷ್ಮೀ ‌ಹೆಬ್ಬಾಳ್ಕರ್ ಹೇಳಿಕೆ.
  ಹಾನಗಲ್ ಚುನಾವಣೆ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು.
  ಪ್ರಬುದ್ಧ ಮತದಾರರು ಹೃದಯವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.
  ಬೊಮ್ಮಾಯಿ ಸಿಎಂ ಆಗಿ ಎರಡು ತಿಂಗಳು ಕಳೆದಿದೆ.
  ಸಿಎಂಗೆ ಮುಖಭಂಗ ಆಗಿದೆ ಎಂದು ಹೇಳಲ್ಲ.
  ಯಾರು ಕಷ್ಟ ಕಾಲದಲ್ಲಿ ಜನರಿಗೆ ಸ್ಪಂದನೆ ಮಾಡುತ್ತಾರೆ.
  ಅವರಿಗೆ ಜನ ಕೈ ಹಿಡಿಯುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ.
  ಶ್ರೀನಿವಾಸ ಮಾನೆ ಅವರು ಮರಾಠ ಸಮುದಾಯ ವ್ಯಕ್ತಿ.
  ಮರಾಠ ಸಮುದಾಯದ ಜನ ಕೇವಲ 500, ಸಾವಿರ ಇದ್ದಾರೆ‌
  ಲಿಂಗಾಯತ ಪ್ರಾಭಲ್ಯ ಇರೋ ಕ್ಷೇತ್ರದಲ್ಲಿ ಮಾನೆ ಗೆಲುವು.
  ಶ್ರೀನಿವಾಸ ಮಾನೆ ಪ್ರಬುದ್ಧ ಮತದಾರರು ಜಾತಿ ರಾಜಕೀಯ ಮಾಡಿಲ್ಲ.
  ಕಷ್ಟ ಕಾಲದಲ್ಲಿ ಸ್ಪಂದನೆ ಮಾಡಿದ ವ್ಯಕ್ತಿಗೆ ಮಣೆ ಹಾಕಿದ್ದಾರೆ.
  ಹಾನಗಲ್ ಕ್ಷೇತ್ರದ ಚುನಾವಣೆ ಎಲ್ಲರಿಗೂ ಪಾಠ.
  ಜನರ ಹತ್ತಿರ ಇರೋವರಿಗೆ ಮನ್ನಣೆ ಸಿಗುತ್ತೆ ಎನ್ನುವುದಕ್ಕೆ ಸಾಕ್ಷಿ.
  ಚುನಾವಣೆ ಫಲಿತಾಂಶ ಬಳಿಕ ಅನೇಕ ವಿಶ್ಲೇಷಣೆ.
  ಎಲ್ಲಾ ರಾಜಕಾರಣಿಗಳಿಗೆ ಇದೊಂದು ಪಾಠ.
  ಬೆಲೆ ಏರಿಕೆ ಬಿಸಿ ಬಗ್ಗೆ ಕಣ್ಣಾರೆ ನೋಡಿದ್ದೇನೆ.
  ಬೆಲೆ ಎರಿಕೆಯಿಂದ ಬಡವರಿಗೆ ಶಾಕ್ ಆಗಿದೆ.
  ಸಿಂದಗಿ ಸೋಲಿನ ಬಗ್ಗೆ ನನಗೆ ಮಾಹಿತಿ ಇಲ್ಲ.
  ನಾನು ಪ್ರಚಾರ ಮಾಡಿಲ್ಲ, ವಾತಾವರಣ ಗೊತ್ತಿಲ್ಲ.
  ಬೆಲೆ ಏರಿಕೆ ಬಿಸಿ ಹಾನಗಲ್ ನಲ್ಲಿ ಬಿಜೆಪಿಗೆ ತಟ್ಟಿದೆ.

  14:55 (IST)

  ಸಿಂದಗಿಯಲ್ಲಿ ಕಾಂಗ್ರೆಸ್ ಗೆ ಸೋಲು ಹಿನ್ನೆಲೆ

  ನ್ಯೂಸ್ ೧೮ ಕನ್ನಡಕ್ಕೆ
  ಕಾಂಗ್ರೆಸ ಪರಾಜಿತ ಅಭ್ಯರ್ಥಿ ಅಶೋಕ್ ಮನಗೂಳಿ ಹೇಳಿಕೆ.

  ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ದುಡ್ಡು ಹರಿಸಿ ಚುನಾವಣೆ ಗೆದ್ದಿದ್ದಾರೆ, ಇದರಿಂದ ನನಗೆ ಸೋಲಾಗಿದೆ.

  ಕಾಂಗ್ರೆಸ್ ಪಕ್ಷಕ್ಕೆ ನಾನೇ ಹೋಗಿದ್ದು.

  ಕಾಂಗ್ರೆಸ್ ನಾಯಕರು ನನ್ನ ಏನು ಕರೆದುಕೊಂಡು ಹೋಗಿಲ್ಲ

  ತಂದೆಯವ ಆಶಯದಂತೆ ನಾನು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದೆ.

  ಆದರೆ ನನಗೆ ಸೋಲಾಗಿದೆ, 
  ಸೋಲು ಗೆಲುವಿನ ಸೋಪಾನ ಅಂದುಕೊಂಡು ಮುಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ..

  ಎಲ್ಲಾ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಇರೋದು ಸಹಜ

  ಆದರೂ ನಮ್ಮ ಕ್ಷೇತ್ರದಲ್ಲಿ  ನಮ್ಮ ಮುಖಂಡರು ಎಲ್ಲರು ಒಟ್ಟಾಗಿ ಕೆಲಸ ಮಾಡಿದ್ರು.

  ನಾನು ಇರೋವರೆಗೂ ಕಾಂಗ್ರೆಸ್ ನಲ್ಲೇ ಇರ್ತೇನೆ, ಮುಂದಿನ ಚುನಾವಣೆ ಯಲ್ಲಿ ಗೆಲ್ಲಲು ಕೆಲಸ ಮಾಡುತ್ತೇನೆ.

  14:32 (IST)

  ಸಿಂದಗಿ ಹಾನಗಲ್ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆ

  ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

  ಸಿಂದಗಿಯಲ್ಲಿ ಬಿಜೆಪಿ ಗೆ ಅಭೂತಪೂರ್ವಗೆಲುವಾಗಿದೆ

  ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ

  ಇದು ಸಂಘಟಿತ ಪ್ರಯತ್ನದ ಫಲ

  ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ

  ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ

  ಮುಂದಿನ ಚುನಾವಣೆಗೆ ಇನ್ನಷ್ಟು ಹೋರಾಟ ಮಾಡುತ್ತೇವೆ

  ಮತದಾರ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ

  ಹಾನಗಲ್ ಕ್ಷೇತ್ರ ದ ಸೋಲು ಮುಖ್ಯಮಂತ್ರಿ ಗೆ ಹಿನ್ನಡೆಯಲ್ಲ

  ಅವರ ಕ್ಷೇತ್ರ ಅಂತಾನೂ ಇಲ್ಲ

  ಅಲ್ಲಿನ ಮತದಾರ ಆಮಿಷಕ್ಕೆ ಒಳಗಾಗಿದ್ದಾನೆ

  ಈ ಹಿನ್ನಲೆಯಲ್ಲಿ ನಮಗೆ ಹಿನ್ನಡೆಯಾಗಿದೆ

  ಈ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ

  ಹಾನಗಲ್ ನಲ್ಲಿ ಸೂಟ್ ಕೇಸ್ ಕೆಲಸ ಮಾಡಿಲ್ಲ ಎಂಬ ಡಿಕೆಶಿ ಆರೋಪ ವಿಚಾರ

  ಹಾಗಾದರೆ ಕನಕಪುರ ದಲ್ಲಿ ಡಿಕೆಶಿ ಗೆಲುವಿಗೆ ಸೂಟ್ ಕೇಸ್ ಕೆಲಸ ಮಾಡಿದ್ಯಾ

  ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

  14:31 (IST)

  ಹಾವೇರಿ - ಜಿದ್ದಾಜಿದ್ದಿ ಅಖಾಡವಾಗಿದ್ದ ಹಾನಗಲ್ ನಲ್ಲಿ ಬಿಜೆಪಿಗೆ ಸೋಲು 
  ಮತ ಎಣಿಕೆ ಕೇಂದ್ರದಿಂದ ಹೊರ ಬಂದ ಶಿವರಾಜ್ ಸಜ್ಜನ್ 
  ಶಿವರಾಜ ಸಜ್ಜನ್ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 
  ಈ ಉಪಚುನಾವಣೆ ಸೋಲಿಗೆ ನಾನೇ ಹೊಣೆ ಹೊರುತ್ತೇನೆ 
  ಮುಖ್ಯಮಂತ್ರಿ ಮತ್ತು ಹಲವಾರು ಸಚಿವರು ಇಲ್ಲಿ ಬಂದು ಪ್ರಚಾರ ಮಾಡಿದರು 
  ಆದರೂ ಸಹ ಸೋಲಾಗಿದೆ 
  ನನಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಗಳಿಸಲಾಗಿಲ್ಲ 
  ಚುನಾವಣೆ ಸಂದರ್ಭದಲ್ಲಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಚಾರಕ್ಕೆ ಬಳಸಿದರು 
  ಕಾಂಗ್ರೆಸ್ ನವರು ಸುಳ್ಳು ಆರೋಪಗಳನ್ನು ಮಾಡಲು ಯತ್ನಿಸಿದರು 
  ಇದೆಲ್ಲದರ ನಡುವೆ ನನಗೆ ಸೋಲಾಗಿದೆ 
  ಈ ಸೋಲಿನಿಂದ ನಾನು ಧೃತಿಗೆಡುವುದಿಲ್ಲ 
  ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇನೆ 
  ಪಕ್ಷ ಬಯಸಿದಲ್ಲಿ ಹಾನಗಲ್ ಕ್ಷೇತ್ರದಿಂದಲೇ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ 
  ನ್ಯೂಸ್ 18 ಕನ್ನಡಕ್ಕೆ ಶಿವರಾಜ್ ಸಜ್ಜನ್ ಹೇಳಿಕೆ.

  14:20 (IST)

  ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ

  ಸಿಂದಗಿಯಲ್ಲಿ ನಿರೀಕ್ಷೆ ಮೀರಿ ಗೆಲುವು ಆಗಿದೆ

  30ಸಾವಿರ ಅಂತರದಲ್ಲಿ ಗೆದ್ದಿದ್ದಾರೆ

  ರಮೇಶ್ ಭೂಸನೂರು ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ

  14:17 (IST)

  ಹಾನಗಲ್ : 

  ಹಾನಗಲ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ.. 

  7598 ಮತಗಳ ಅಂತರದಿಂದ ಶ್ರೀನಿವಾಸ ಮನೆ ಗೆಲುವು..

  ಬಿಜೆಪಿ ಸೋಲಿನಿಂದ ಬಿಜೆಪಿಗೆ ತೀವ್ರ ಮುಖಭಂಗ.. 

  ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ..

  14:17 (IST)

  ಹಾನಗಲ್:

  #)ಮತ ಎಣಿಕೆ ಸುತ್ತು: 19

  7598-ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು..

  ಪಡೆದ ಮತಗಳು

  #)ಬಿಜೆಪಿ: 79515

  #)ಕಾಂಗ್ರೆಸ್: 87113

  #)ಜೆಡಿಎಸ್:-921

  14:01 (IST)

  ಹಾನಗಲ್: 

  ಹಾನಗಲ್ ಉಪ ಚುನಾವಣೆ 

  ಕಾಂಗ್ರೆಸ್ ಅಭ್ಯರ್ಥಿ  ಬಹುತೇಕ ಗೆಲುವು..

  18ನೇ ಸುತ್ತಿನಲ್ಲಿ 7325 ಮತಗಳ ಮುನ್ನಡೆ ಕಾಯ್ದುಕೊಂಡ ಶ್ರೀನಿವಾಸ ಮಾನೆ..

  ಇನ್ನು ಒಂದೇ ಸುತ್ತಿನ ಮತ ಎಣಿಕೆ ಬಾಕಿ..

  13:58 (IST)

  ಹಾನಗಲ್:

  #)ಮತ ಎಣಿಕೆ ಸುತ್ತು: 18

  7325-ಮತಗಳಿಂದ  ಕಾಂಗ್ರೆಸ್ ಮುನ್ನಡೆ 

  ಪಡೆದ ಮತಗಳು

  #)ಬಿಜೆಪಿ: 75999

  #)ಕಾಂಗ್ರೆಸ್: 83324

  #)ಜೆಡಿಎಸ್:-866

  Sindagi, Hanagal By Election Result: ಸಿಂದಗಿ(Sindagi) ಹಾಗೂ ಹಾನಗಲ್(Hanagal)​​ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ (By Election Result) ಇಂದು ಹೊರ ಬಿದ್ದಿದೆ. ಹಾನಗಲ್​ನಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದರೆ, ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಜೆಡಿಎಸ್​​ಗೆ ಎರಡೂ ಕ್ಷೇತ್ರಗಳಲ್ಲೂ ಮುಖಭಂಗ ಆಗಿದೆ. ಹಾನಗಲ್​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಗೆದ್ದಿದ್ದರೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ವಿಜಯ ಪತಾಕೆ ಹಾರಿಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ(Vote Counting) ಕಾರ್ಯ ಶುರುವಾಗಿತ್ತು. ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿತ್ತು. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಸಿಕ್ಕಿತ್ತು.  ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭೂಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದರು. ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್ ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದರು. ಮೂರು ಪಕ್ಷಗಳ ನಾಯಕರೂ ಸಹ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಮತದಾರ ಹಾನಗಲ್​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ಕೈ ಹಿಡಿದರೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಹಾರ ಹಾಕಿದ್ದಾರೆ. ಅ.30ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.