liveLIVE NOW

LIVE Karnataka ULB Elections: ರಾಜ್ಯದೆಲ್ಲೆಡೆ ಶಾಂತಿಯುತ ಮತ ಚಲಾವಣೆ; ಮತದಾನ ಮುಕ್ತಾಯ

9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ.

 • News18 Kannada
 • | December 27, 2021, 17:08 IST
  facebookTwitterLinkedin
  LAST UPDATED 6 MONTHS AGO

  AUTO-REFRESH

  ಹೈಲೈಟ್ಸ್

  17:25 (IST)

  ಮತದಾನದ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ

  ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಗೆ ಫೈಟ್ ಇದೆ

  ಆದರೆ ಈ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಆಗಲಿದೆ 

  ನಮ್ಮ ತಂದೆಯವರನ್ನ ಇಲ್ಲಿನ‌ ಜನರು ಹೆಚ್ಚಾಗಿ ಪ್ರೀತಿಸುತ್ತಾರೆ 

  ಕಾಂಗ್ರೆಸ್ ನವರು ಏನೇ ಮಾಡಲಿ ಜೆಡಿಎಸ್ ಗೆ ಬಹುಮತ ಬರಲಿದೆ 

  ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಲಿದೆ 


  17:25 (IST)

  ಮತದಾನದ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ

  ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಗೆ ಫೈಟ್ ಇದೆ

  ಆದರೆ ಈ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಆಗಲಿದೆ 

  ನಮ್ಮ ತಂದೆಯವರನ್ನ ಇಲ್ಲಿನ‌ ಜನರು ಹೆಚ್ಚಾಗಿ ಪ್ರೀತಿಸುತ್ತಾರೆ 

  ಕಾಂಗ್ರೆಸ್ ನವರು ಏನೇ ಮಾಡಲಿ ಜೆಡಿಎಸ್ ಗೆ ಬಹುಮತ ಬರಲಿದೆ 

  ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಲಿದೆ 


  17:22 (IST)

  ನಟ ನಿಖಿಲ್ ಕುಮಾರಸ್ವಾಮಿ ಮತದಾನ 

  ಬಿಡದಿ ಪುರಸಭೆ ಚುನಾವಣೆಗೆ ಮತದಾನ 

  ಮತಗಟ್ಟೆ ಸಂಖ್ಯೆ 07 ರಲ್ಲಿ ಮತದಾನ 

  ಬಿಡದಿಯ ಕೇತಗಾನಹಳ್ಳಿಯಲ್ಲಿ ಮತದಾನ 

  ರಾಮನಗರ ಜಿಲ್ಲೆಯ ಬಿಡದಿ ಪುರಸಭೆ

  17:08 (IST)

  ನಿಯಮ ಉಲ್ಲಂಘಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಮತಗಟ್ಟೆ ಕೇಂದ್ರಕ್ಕೆ ಎಂಟ್ರಿ...!
  ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಮತಗಟ್ಟೆ ಕೇಂದ್ರಕ್ಕೆ ಎಂಟ್ರಿ,
  ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಜಿಲ್ಲಾಧ್ಯಕ್ಷ,
  ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನದ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷ,
  ಕೆಂಭಾವಿ ಪುರಸಭೆಯ ವಾರ್ಡ್ 12 ರ ಮತಗಟ್ಟೆ ಕೇಂದ್ರದಲ್ಲಿ ಜಿಲ್ಲಾಧ್ಯಕ್ಷನ ದರ್ಬಾರ್.

  17:01 (IST)

  ನಕಲಿ ಮತದಾನ ಮಾಡಲು ಬಂದವರಿಗೆ ಗೂಸಾ.

  ಬಿಜೆಪಿ ಕಾರ್ಯಕರ್ತರಿಂದ ಗೂಸಾ.

  ಆನೇಕಲ್ ತಾಲೂಕಿನ ಚಂದಾಪುರ ಪುರಸಭೆ ವಾರ್ಡ್ 20ರಲ್ಲಿ ಗಲಾಟೆ.

  ನಕಲಿ ಮತದಾನ ಮಾಡಲು ಬಂದ ಮೂವರು ಪೊಲೀಸರ ವಶಕ್ಕೆ.

  ಬೇರೆಯವರ ಹೆಸರಿನಲ್ಲಿ ಮತದಾನ ಮಾಡಲು ಬಂದ ಮಹಿಳೆ ಮತ್ತು ಪುರುಷರು

  ಸಂಜೆಯಾಗುತ್ತಿದ್ದಂತೆ ನಕಲಿ ಮತದಾನ ಮಾಡಲು ಮುಂದಾಗುತ್ತಿರುವ ಮತದಾರರು.

  16:17 (IST)

  ಯಾದಗಿರಿಯ ಕಕ್ಕೇರಾ ಪುರಸಭೆ ಚುನಾವಣೆ  

  ಮತಗಟ್ಟೆ ಕೇಂದ್ರಕ್ಕೆ  ನುಗ್ಗುತ್ತಿರುವ ಕಾಂಗ್ರೆಸ್-ಬಿಜೆಪಿ ನಾಯಕರು

  ಕಾಂಗ್ರೆಸ್-ಬಿಜೆಪಿ ನಾಯಕರು ದುರ್ವತನೆ ಎದುರು ಅಸಹಾಯಕರಾದ ಪೊಲೀಸರು

  ಕಾಂಗ್ರೆಸ್ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಹೋದರ ಮಗನ ದಬ್ಬಾಳಿಕೆ,

  ರೂಪ ನಾಯಕ ಹಾಗೂ ಬೆಂಬಲಿಗರಿಂದ  ದರ್ಪ

   ಪಿಎಸ್ಐಗೆ ಅವಾಜ್ ಹಾಕಿ ಮತಗಟ್ಟೆ ಪ್ರವೇಶ

  ಇಷ್ಟೇಲ್ಲಾವಾದರು ಕೈ ಕಟ್ಟಿ ನಿಂತ ಪೊಲೀಸರು

  15:39 (IST)

  ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮತದಾನಕ್ಕೆ ಬಹಿಷ್ಕಾರ

  ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ

  ಕುಟಕನಕೇರಿ ಗ್ರಾಮದಲ್ಲಿ ಬೆಳಿಗ್ಗೆಯಿಂದ ಒಂದೇ ಒಂದು ಮತ ಚಲಾವಣೆ ಆಗಿಲ್ಲ.

  ಖಾಲಿಯಾಗಿ ಕೂತಿರುವ ಚುನಾವಣಾ ಸಿಬ್ಬಂದಿ

  ಒಬ್ಬ ಮತದಾರರೂ ಇಲ್ಲದೆ ಮತಗಟ್ಟೆ ಬಿಕೋ ಎನ್ನುತ್ತಿದೆ

  15:22 (IST)

  ಗದಗ: ಮತಗಟ್ಟೆ ಆವರಣದಲ್ಲಿ ಕುಡುಕನ ರಂಪಾಟ

  ಇದು ನಮ್ಮ ಏರಿಯಾ ಅಂತ ಪೊಲೀಸ್ ಗೆ ಅವಾಜ್

  ನಾನು ಎಲ್ಲಿಯಾದರೂ ಕೂಡುತ್ತೇನೆ ನೀವೇನು ಕೇಳ್ತಿರಾ.

  ಮತಗಟ್ಟೆ ಬಳಿ ಕುಳಿತಿದ್ದ ಕುಡುಕನನ್ನ ಹೊರ ಕಳಿಸುವಲ್ಲಿ ಪೊಲೀಸ್ ಸುಸ್ತೋಸುಸ್ತು

  ವಾರ್ಡ್ ನಂಬರ್‌ 16‌ ರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 66 ಬಳಿ ಘಟನೆ.

  15:10 (IST)

  ಶಿರಾದಲ್ಲಿ ಬಿರುಸುಗೊಂಡ ಮತಚಲಾವಣೆ; ಬೇಟಗೆರೆಯಲ್ಲಿ 31.15 % ಮತದಾನ

  14:30 (IST)

  ಗದಗ ಬೆಟಗೇರಿ ನಗರಸಭೆ ಚುನಾವಣೆ..

  ಮಧ್ಯಾಹ್ನ 2 ಗಂಟೆವರೆಗೆ 31.15 % ಮತದಾನ

  ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ  ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್​ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ (City Municipality Council), 19 ಪುರಸಭೆ (Town Municipal Council) ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ (Town Panchayat). ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್​ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ. ಈ ಕುರಿತ ಕ್ಷಣ-ಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡ ಲೈವ್​ ಬ್ಲಾಗ್​​ನಲ್ಲಿ..