ಯಾಕೆ ಬಂದಿದ್ದೀಯಾ? ನಿನ್ನ ನೋಡೋಕೆ! ಸಿದ್ದರಾಮಯ್ಯರ ಜೊತೆ ಪುಟಾಣಿ ಪೋರಿ ಮಾತುಕತೆ: ವಿಡಿಯೋ ನೋಡಿ

ತಮ್ಮ ಸುತ್ತಲೂ ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟರು. ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲೂಇದ್ದವರು ಜೋರಾಗಿ ನಗಾಡಿದರು.

ಮಗುವಿನ ಜೊತೆ ಸಿದ್ದರಾಮಯ್ಯ

ಮಗುವಿನ ಜೊತೆ ಸಿದ್ದರಾಮಯ್ಯ

  • Share this:
ವಿಧಾನ ಪರಿಷತ್ ಚುನಾವಣೆ (MLC Election Campaign) ಪ್ರಚಾರ, ಮುಖಂಡರು, ಕಾರ್ಯಕರ್ತರ ಭೇಟಿ, ರಾಜಕೀಯ ಜಂಜಾಟದ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaih) ಅವರು ಮಗುವಿನೊಂದಿಗೆ ಮಗುವಾಗಿದ್ದು ಗಮನ ಸೆಳೆದಿದೆ. ಮಗುವಿನೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Photo, Video Viral) ಆಗಿದೆ. ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಗರ ರಸ್ತೆಯ ಹರ್ಷಾ ಫರ್ನ್ ಹೊಟೇಲ್’ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ಅವರನ್ನು ತೋರಿಸಲು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಕ್ ಕುಮಾರ್ (Pushpak Kumar) ಅವರು ತಮ್ಮ ಮಗಳು ಸಾನ್ವಿಯನ್ನು ಹೊಟೇಲ್’ಗೆ ಕರೆದೊಯ್ದಿದ್ದರು.

ತಮ್ಮ ಸುತ್ತಲೂ ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟರು. ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲೂಇದ್ದವರು ಜೋರಾಗಿ ನಗಾಡಿದರು.

ಪುಟಾಣಿ ಜೊತೆ ಸಿದ್ದರಾಮಯ್ಯ ಮಾತುಕತೆ

ಆಗಾಗ ಬರುತ್ತಿದ್ದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತು ಮುಗಿಸಿ, ಸಾನ್ವಿ ಜೊತೆಗೆ ಸಿದ್ದರಾಮಯ್ಯ ಅವರು ಕೆಲವು ನಿಮಿಷ ಕಳೆದರು. ಆಕೆಯನ್ನು ಮಾತನಾಡಿಸಿ, ಚನ್ನಾಗಿ ಓದಬೇಕು ಎಂದು ತಿಳಿಸಿದರು. ಕೆನ್ನೆಗೊಂದು ಮುತ್ತು ಕೊಡಿಸಿಕೊಂಡು ಖುಷಿ ಪಟ್ಟರು.

ಇದನ್ನೂ ಓದಿ:  ಜಮೀರ್ ಕಾಲು ಹಿಡಿದು ಚಾಮರಾಜಪೇಟೆಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ: ಕೆ.ಎಸ್.ಈಶ್ವರಪ್ಪ


ಫೋಟೋ, ವಿಡಿಯೋ ವೈರಲ್

ರಾಜಕೀಯ ಒತ್ತಡದ ನಡುವೆಯು ಸಿದ್ದರಾಮಯ್ಯ ಅವರು ಮಗುವಿನೊಂದಿಗೆ ಮಗುವಾಗಿ, ಖುಷಿಪಟ್ಟ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಫೇಸ್’ಬುಕ್, ವಾಟ್ಸಪ್’ನಲ್ಲಿ ಈ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.ಈ ಹಿಂದೆ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಭೇಟಿ

ಹೃದಯ ಶಸ್ತ್ರ ಚಿಕಿತ್ಸೆಯಾಗಿ ಆಸ್ಪ್ರತ್ರೆ ಸೇರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ,  ಡಿಸ್ಚಾರ್ಜ್​ ಆಗಿ ಮನೆ ಸೇರಿದ ಬಳಿಕ ಪೀರಪ್ಪ ತಮ್ಮ ನೆಚ್ಚಿನ ನಾಯಕನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಆಗಮಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಕುಶಲೋಪರಿ ವಿಚಾರಿಸಿದ್ಧಾರೆ.

ಇನ್ನು, ತನ್ನ ಆರೋಗ್ಯ ವಿಚಾರಿಸಲು ಬಂದಿದ್ದ ಕಾಗವಾಡದ ಪೀರಪ್ಪ ಕಟ್ಟಿಮನಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದರು. ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯನವರು, ಪೀರಪ್ಪನನ್ನು ನಿಜವಾದ ಹುಲಿಯಾ ಎಂದು ಹೊಗಳಿದ್ದರು. "ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ‌ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ'," ಎಂದು ಶ್ಲಾಘಿಸಿದ್ದರು.

ಇದನ್ನೂ  ಓದಿ: Karnataka Politics: ಟಕ್ಕರ್ ಕೊಡುತ್ತಿದ್ದ ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK

ಸೋಶಿಯಲ್ ಮೀಡಿಯಾದಲ್ಲಿ ಹೌದು ಹುಲಿಯಾ ಡೈಲಾಗ್ ಫೇಮಸ್

'ಹೌದು ಹುಲಿಯಾ' ಎಂಬ ಡೈಲಾಗ್​​ (Houdu Hulia) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಕಾಗವಾಡದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವ ವೇಳೆ, ಫಕೀರಪ್ಪ 'ಹೌದು ಹುಲಿಯಾ' ಎಂದು ಹೇಳಿದ್ದರು. ಬಳಿಕ ಈ ಡೈಲಾಗ್​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿತ್ತು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಸಿದ್ದರಾಮಯ್ಯನವರು ರಾಜ್ಯದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪ್ರಚಾರ ನಡೆಸಿದರು.
Published by:Mahmadrafik K
First published: