HOME » NEWS » State » LITERATURE LOVING PEOPLE RUSHED LIKE A KANNADA SAHITYA SAMMELANA BIG RESPONSE TO BOOK STALLS HK

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ; ಈ ಬಾರಿ ಪುಸ್ತಕ ಮಾರಾಟ ಸೂಪರ್…!

ಮೊದಲ ದಿನ ಮಧ್ಯಾಹ್ನದವರೆಗೆ ಜನಸಂದಣಿಯಿತ್ತು. ಆದರೆ, ಆನಂತರ ಪುಸ್ತಕ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ವಿರಳತೆ ಕಂಡುಬಂದಿತು. ಆದರೆ ಎರಡನೇ ದಿನ ಯಾವ ಪುಸ್ತಕ ಮಳಿಗೆ ನೋಡಿದರೆ ಜನರಿಂದ ತುಂಬಿ ತುಳುಕುತಿದ್ದವು.

news18-kannada
Updated:February 6, 2020, 8:07 PM IST
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ; ಈ ಬಾರಿ ಪುಸ್ತಕ ಮಾರಾಟ ಸೂಪರ್…!
ಪುಸ್ತಕ ಖರೀದಿಯಲ್ಲಿ ತೊಡಗಿರುವ ಜನರು (ಚಿತ್ರ ಕೃಪೆ ಶ್ರೀಧರ್ ಬಿ ಎನ್​​)
  • Share this:
ಕಲಬುರ್ಗಿ(ಫೆ.06) : ಈ ಬಾರಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯಲ್ಲಿ ಎರಡನೇ ದಿನ ಜನಸಾಗರವೇ ಹರಿದುಬಂದಿತು.ಇದು ಪುಸ್ತಕ ಮಾರಾಟಗಾರರಿಗೆ ವರವಾಗಿ ಪರಿಣಮಿಸಿದ್ರೆ, ಪೊಲೀಸರಿಗೆ ಹರಸಾಹಸ ಪಡುತ್ತಿದ್ದರು. ಅಚ್ಚುಕಟ್ಟಾಗಿ ನಿರ್ಮಿಸಿದ್ದ ಪುಸ್ತಕ ಮಳಿಗೆಗಳಿಂದಾಗಿ ಲಕ್ಷಾಂತರ ಜನರು ಬಂದರೂ ಅಕ್ಕರೆಯ ಅಕ್ಷರ ಜಾತ್ರೆಗೆ ತೊಂದರೆಯೇನು ಆಗಲಿಲ್ಲ. ಸಮ್ಮೇಳನದಲ್ಲಿ ಭರ್ಜರಿಯಾಗಿ ಪುಸ್ತಕಗಳು ಮಾರಾಟವಾಗಿದೆ. 

ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಸಣ್ಣಪುಟ್ಟ ಸಮಸ್ಯೆಗಳ ಮಧ್ಯೆ ಈ ಬಾರಿ ಅಕ್ಷರ ಜಾತ್ರೆ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಮ್ಮೇಳನದ ಉದ್ಘಾಟನೆಯ ಮೊದಲ ದಿನಕ್ಕಿಂತ ಎರಡನೇ ದಿನ ಜನಸಾಗರವೇ ಹರಿದುಬಂದಿತು. ಮೊದಲ ದಿನ ಮಧ್ಯಾಹ್ನದವರೆಗೆ ಜನಸಂದಣಿಯಿತ್ತು. ಆದರೆ, ಆನಂತರ ಪುಸ್ತಕ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ವಿರಳತೆ ಕಂಡುಬಂದಿತು. ಆದರೆ ಎರಡನೇ ದಿನ ಯಾವ ಪುಸ್ತಕ ಮಳಿಗೆ ನೋಡಿದರೆ ಜನರಿಂದ ಫುಲ್ ಹೌಸ್ ಆಗಿದ್ದವು.  ಇದರಲ್ಲಿ ಎಲ್ಲರೂ ಪುಸ್ತಕ ಕೊಂಡುಕೊಳ್ಳದೆ ಹೋದರೂ ಪುಸ್ತಕವನ್ನು ನೋಡುವ, ಪುಸ್ತಕದ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಇಷ್ಟವಾದ್ರೆ ಪುಸ್ತಕ ಕೊಂಡುಕೊಳ್ಳುವ ದೃಶ್ಯ ಕಂಡುಬಂದಿತು.

ಇನ್ನು ಕಳೆದ ಬಾರಿ ಧಾರವಾಡ ಸಮ್ಮೇಳನಕ್ಕೆ ಹೋಲಿಸಿದರೆ ಈ ಬಾರಿ ಪುಸ್ತಕ ಮಳಿಗೆ ವ್ಯವಸ್ಥೆ ಚೆನ್ನಾಗಿದೆ. ಅಲ್ಲಿಗಿಂತ ಈ ಬಾರಿ ಪುಸ್ತಕ ಮಾರಾಟದಲ್ಲಿಯೂ ಹೆಚ್ಚಳ ಕಂಡುಬಂದಿದೆ ಎಂದು ಛಂದ ಪುಸ್ತಕದ ಪ್ರಕಾಶಕ, ಖ್ಯಾತ ಲೇಖಕ ವಸುದೇಂದ್ರ ಹೇಳಿದರು.

ಬೇರೆಯವರು ಇಲ್ಲಿ ಬಂದು ನೆಲೆಸಿದರೂ ಕನ್ನಡವೇ ವ್ಯವಹಾರ ಭಾಷೆಯಾಗಬೇಕು ; ಎಚ್.ಎಸ್.ವೆಂಕಟೇಶಮೂರ್ತಿ

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ವೇದಿಕೆಯ ಬಲಭಾಗದಲ್ಲಿಯೇ ಪುಸ್ತಕ ಮಳಿಗೆಗಾಗಿ ಐದು ಅತ್ಯಾಧುನಿಕ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕ ಮಾರಾಟ ಮಳಿಗೆಗಳಿದ್ದು, ಇದರಲ್ಲಿ ವಿರಳವಾಗಿ ಅಲ್ಲಲ್ಲಿ ವ್ಯಾಪಾರಿ ಮಳಿಗೆಗಳು ಕಂಡುಬಂದವು. ಕಾಂಪಿಟೇಟಿವ್ ಪುಸ್ತಕ ಮಳಿಗೆಯಲ್ಲಂತೂ ಶಾಲಾಕಾಲೇಜು ವಿದ್ಯಾರ್ಥಿಗಳು ನಿಲ್ಲಲು ಸಹ ಜಾಗವಿದ್ದಿದ್ದಿಲ್ಲ. ಇನ್ನೂ ಸಾಹಿತ್ಯಿಕ ಪುಸ್ತಕಗಳ ಅಭಿರುಚಿಗೆ ತಕ್ಕಂತೆ ತಮಗಿಷ್ಟವಾದ ಪುಸ್ತಕ ಕೊಂಡುಕೊಳ್ಳುತ್ತಿದ್ದರು.

kannada sahithyasammelana in kalburgi
ಪುಸ್ತಕ ಮಳಿಗೆಗಳಿಗೆ ಹರಿದು ಬಂದ ಜನಸಾಗರ


ಪುಸ್ತಕ ಮಳಿಗೆಯಲ್ಲಿ ಪುಸ್ತಕ ಕೊಂಡು ವಸುಧೇಂದ್ರ, ಜೋಗಿ ಅವರಂಥ ಲೇಖಕರಿಂದ ಫೋಟೋಗೆ ಫೋಸು ಕೊಡುತ್ತಿದ್ದ ದೃಶ್ಯ ಕಂಡುಬಂದಿತು. ಕಳೆದ ವರುಷ ಧಾರವಾಡ, ಎರಡು ವರುಷದ ಹಿಂದೆ ಜರುಗಿದ ರಾಯಚೂರಿಗಿಂತ ಈ ಬಾರಿ ಪುಸ್ತಕ ಮಾರಾಟ ಚೆನ್ನಾಗಿದೆ ಎಂದು ಬಹುತೇಕ ಪುಸ್ತಕ ಮಾರಾಟಗಾರರು ಹೇಳಿದರು.ಆದರೆ ಸಮ್ಮೇಳನಕ್ಕೆ ಬಂದ ಜನರಿಗೆ ಹೋಲಿಸಿದರೆ ಪುಸ್ತಕ ಮಾರಾಟ ಕಡಿಮೆಯೇ ಎಂಬ ಅಭಿಪ್ರಾಯ ಮಾರಾಟಗಾರರಿಂದ ಬರುತ್ತಿತ್ತು. ಮೊಬೈಲ್, ವಾಟ್ಸ್ ಅಪ್ ನಲ್ಲಿಯೇ ಮಗ್ನರಾಗುವ ಈಗಿನ ಕಾಲದಲ್ಲಿ ತಮಗಿಷ್ಟವಾದ ಪುಸ್ತಕ ಕೊಂಡುಕೊಂಡು ಓದುವ ಸಂಸ್ಕೃತಿ ಇನ್ನೂ ಇದೆ. ಅದು ಕಲಬುರ್ಗಿ ಸಮ್ಮೇಳನದಲ್ಲಿ ಹೆಚ್ಚಾಗಿದೆ ಎಂದು ಸಮ್ಮೇಳನಕ್ಕೆ ಬಂದ ಮಹಿಳೆ ಪ್ರತಿಕ್ರಿಯೆ ನೀಡಿದರು.

ಕಲಬುರ್ಗಿಯಲ್ಲಿ ಅದ್ಧೂರಿ ಕನ್ನಡಮ್ಮನ ಜಾತ್ರೆ; ಕಳೆಗಟ್ಟಿದ ಕಲಾತಂಡಗಳ ಮೆರವಣಿಗೆ, ಕನ್ನಡಪ್ರೀತಿ

ಉರ್ದು ಪ್ರಭಾವ ಹೆಚ್ಚಿರುವ ಕಲಬುರ್ಗಿಯಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುತ್ತೋ ಇಲ್ಲವೆ ಎಂಬ ಆತಂಕದ ನಡುವೆ ಕನ್ನಡ ಪುಸ್ತಕ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳ ಕಂಡುಬಂದಿದೆ. ಈ ಹಿಂದಿನ ಸಮ್ಮೇಳನಗಳಿಗೆ ಹೋಲಿಸಿದಲ್ಲಿ ಈ ಬಾರಿ ಸೂಕ್ತ ವ್ಯವಸ್ಥೆಯನ್ನು ಮಾಡಿ ಅದೆಷ್ಟೇ ಜನ ಬಂದರೂ ಯಾವುದೇ ತೊಂದರೆಯಾಗದ ರೀತಿ ಸಮ್ಮೇಳನವನ್ನು ನೋಡಿಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖವಾಗಿ ಧೂಳು ಇಲ್ಲದೆ ನಡೆಯುತ್ತಿರುವ ಕಲಬುರ್ಗಿ ಸಮ್ಮೇಳನದಿಂದಾಗಿ ಜನರು ನೆಮ್ಮದಿಯಾಗಿ ಪುಸ್ತಕ ನೋಡಿ, ಓದಿ ಕೊಂಡು ಹೋಗಲು ಮನಸು ಮಾಡುತ್ತಿದ್ದಾರೆ ಎಂದನಿಸುತ್ತದೆ. ಕನ್ನಡ ಪುಸ್ತಕ ಓದುವ ಸಂಸ್ಕೃತಿ ಇಂಥ ಸಮ್ಮೇಳನಗಳ ಮೂಲಕ ಇನ್ನಷ್ಟು ಹೆಚ್ಚಾಗಲಿ ಎಂಬುದು ಕನ್ನಡ ಮನಸುಗಳ ಆಶಯ
Youtube Video
First published: February 6, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories