HOME » NEWS » State » LIST OF PROBABLE PORTFOLIOS FOR 7 NEW MINISTERS IN BSY CABINET SNVS

BSY Cabinet - ನೂತನ ಸಚಿವರಿಗೆ ಯಾವ ಖಾತೆ ಸಿಗುತ್ತದೆ? ಇಲ್ಲಿದೆ ಸಂಭವನೀಯ ಪಟ್ಟಿ

ಯಡಿಯೂರಪ್ಪ ಬಳಿ ಇರುವ 8 ಖಾತೆಗಳ ಪೈಕಿ ಏಳು ಖಾತೆಗಳನ್ನ ನೂತನ ಸಚಿವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ಖಾತೆ ಹಂಚಿಕೆ ಮಾಡಲು ಸಿಎಂ ತಯಾರಾಗಿದ್ದಾರೆ. ನೂತನ ಸಚಿವರ ಸಂಭವನೀಯ ಖಾತೆಗಳು ಇಲ್ಲಿವೆ.

news18-kannada
Updated:January 14, 2021, 8:25 AM IST
BSY Cabinet - ನೂತನ ಸಚಿವರಿಗೆ ಯಾವ ಖಾತೆ ಸಿಗುತ್ತದೆ? ಇಲ್ಲಿದೆ ಸಂಭವನೀಯ ಪಟ್ಟಿ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಜ. 14): ನಿನ್ನೆ ಅಂತೂ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಅಬಕಾರಿ ಸಚಿವರಾಗಿದ್ದ ಎಸ್ ನಾಗೇಶ್ ಅವರಿಂದ ರಾಜೀನಾಮೆ ಪಡೆದು ಏಳು ಮಂದಿ ನೂತನ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್ ಅಂಗಾರ ಮತ್ತು ಸಿ ಪಿ ಯೋಗೇಶ್ವರ್ ಅವರು ನೂತನ ಸಚಿವರಾಗಿದ್ದಾರೆ. ಇವರಿಗೆ ಖಾತೆ ಹಂಚಿಕೆಯ ಕಾರ್ಯ ನಡೆಯಬೇಕಿದೆ. ಬಿಜೆಪಿ ವಲಯದಲ್ಲಿ ಚಾಲನೆಯಲ್ಲಿರುವ ಮಾಹಿತಿ ಪ್ರಕಾರ ನೂತನ ಸಚಿವರಿಗೆ ಸಂಭನೀಯ ಖಾತೆ ವಿವರ ಇಲ್ಲಿದೆ:

ನೂತನ ಸಚಿವರಿಗೆ ಸಂಭವನೀಯ ಖಾತೆ:

1) ಎಸ್ ಅಂಗಾರ: ಕನ್ನಡ ಮತ್ತು ಸಂಸ್ಕೃತಿ
2) ಅರವಿಂದ್ ಲಿಂಬಾವಳಿ: ಬೆಂಗಳೂರು ಅಭಿವೃದ್ಧಿ
3) ಸಿ.ಪಿ. ಯೋಗೇಶ್ವರ್: ಯುವಜನ ಮತ್ತು ಕ್ರೀಡೆ
4) ಮುರುಗೇಶ್ ನಿರಾಣಿ: ಇಂಧನ
5) ಉಮೇಶ್ ಕತ್ತಿ: ಪ್ರವಾಸೋದ್ಯಮ6) ಆರ್ ಶಂಕರ್: ಅಬಕಾರಿ
7) ಎಂಟಿಬಿ ನಾಗರಾಜ್: ಹಿಂದುಳಿದ ವರ್ಗಗಳ ಕಲ್ಯಾಣ

ಇದನ್ನೂ ಓದಿ: ಯಡಿಯೂರಪ್ಪ ಕ್ಯಾಬಿನೆಟ್​ ಸೇರಿದ ಸಪ್ತ ಸಚಿವರು; ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

ಯಡಿಯೂರಪ್ಪ ಬಳಿ ಸದ್ಯ ಎಂಟು ಖಾತೆಗಳಿವೆ. ಇವುಗಳನ್ನೇ ಹಂಚಿಕೆ ಮಾಡಲಾಗುತ್ತದೆ. ಎಸ್ ನಾಗೇಶ್ ಅವರ ಬಳಿ ಇದ್ದ ಅಬಕಾರಿ ಖಾತೆ ಆರ್ ಶಂಕರ್ ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಶಂಕರ್ ಕೂಡ ಇದೇ ಖಾತೆಯ ನಿರೀಕ್ಷೆಯಲ್ಲಿದ್ದರೆನ್ನಲಾಗಿದೆ. ಕುರುಬ ಸಮುದಾಯದ ಮುಖಂಡ ಎಂಟಿಬಿ ನಾಗರಾಜ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಸ್ಥಾನ ಸಿಗಲಿದೆ. ಮುರುಗೇಶ್ ನಿರಾಣಿ ಅವರಿಗೆ ಇಂಧನ ಖಾತೆ ಸಿಗಬಹುದು. ನಿರಾಣಿ ಈ ಹಿಂದೆ ಬೃಹತ್ ಕೈಗಾರಿಕೆ ಸಚಿವರಾಗಿದ್ದರು. ಈಗ ಇಂಧನ ಕೂಡ ಪ್ರಬಲ ಖಾತೆಯಾಗಿದೆ.

ಉಮೇಶ್ ಕತ್ತಿ ಅವರಿಗೆ ಪ್ರವಾಸೋದ್ಯಮ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರಾಣಿ ಅವರಿಗೆ ಪ್ರಬಲ ಖಾತೆ ಸಿಕ್ಕಿರುವ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಅವರು ಪ್ರವಾಸೋದ್ಯಮ ಖಾತೆಗೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು.

ಬಹಳ ಮಂದಿ ಕಣ್ಣಿಟ್ಟಿರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಅರವಿಂದ್ ಲಿಂಬಾವಳಿ ಪಡೆಯಲಿದ್ದಾರೆ ಎನ್ನುತ್ತವೆ ಮೂಲಗಳು. ಎಸ್ ಅಂಗಾರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ, ಹಾಗೂ ಸಿ ಪಿ ಯೋಗೇಶ್ವರ್ ಅವರಿಗೆ ಯುವಜನ ಮತ್ತು ಕ್ರೀಡೆ ಖಾತೆ ಸಿಗುವ ನಿರೀಕ್ಷೆ ಇದೆ.
Published by: Vijayasarthy SN
First published: January 14, 2021, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories