ಬೆಂಗಳೂರು (ಡಿ.19): 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಗೆ (Assembly Election) ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ (Candidates List) ಬಿಡುಗಡೆ ಮಾಡಿದೆ. ಎಲೆಕ್ಷನ್ಗೆ ಭರ್ಜರಿ ತಯಾರಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (H.D Kumaraswamy) ಬೆಂಗಳೂರಿನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮುನಿಸಿಕೊಂಡಿದ್ದ ಜಿಟಿಡಿಗೆ ಬಂಪರ್ ಲಾಟರಿ ಹೊಡೆದಿದೆ. ಅಪ್ಪ-ಮಗ ಇಬ್ಬರಿಗೂ ಜೆಡಿಎಸ್ ಟಿಕೆಟ್ (JDS Ticket) ನೀಡಿದೆ. ಹುಣಸೂರಿಂದ ಹರೀಶ್ ಗೌಡ, ಚಾಮುಂಡೇಶ್ವ ಕ್ಷೇತ್ರದಿಂದ ಜಿಟಿ ದೇವೇಗೌಡಗೆ ಟಿಕೆಟ್ ನೀಡಲಾಗಿದೆ. ಮಗನಿಗೆ ಅಸೆಂಬ್ಲಿ ಎಲೆಕ್ಷನ್ ಟಿಕೆಟ್ ಕೊಡಿಸುವಲ್ಲಿ ಜಿಟಿಡಿ ಸಕ್ಸಸ್ ಆಗಿದ್ದಾರೆ.
ರಾಮನಗರದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್
ಮೊದಲ ಹಂತದಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ 8 ಕ್ಷೇತ್ರ ಗಳಿಗೆ ಮಾತ್ರ ಅಭ್ಯರ್ಥಿಗಳ ಪ್ರಕಟ ಮಾಡಲಾಗಿದೆ. ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಜಿಟಿಡಿ ಸಕ್ಸಸ್ ಆಗಿದ್ದಾರೆ. ಇತ್ತ ರಾಮನಗರದಲ್ಲಿ ಮಗನಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ರಾಮನಗರದ ಟಿಕೆಟ್ನಲ್ಲಿ ನಿಖಿಲ್ ಕುಮಾರಸ್ವಾಮಿಗೆ ನೀಡೋದಾಗಿ ಹಿಂದೆ ಅನಿತಾ ಕುಮಾರಸ್ವಾಮಿ ಘೋಷಿಸಿದ್ರು. ಇದೀಗ ಅಧಿಕೃತವಾಗಿ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.
ಅಸೆಂಬ್ಲಿ ಚುನಾವಣೆಗೆ JDS ಅಭ್ಯರ್ಥಿಗಳ ಪಟ್ಟಿ ರಿಲೀಸ್
ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರ- H.D.ಕುಮಾರಸ್ವಾಮಿ
ರಾಮನಗರ ಕ್ಷೇತ್ರ - ನಿಖಿಲ್ ಕುಮಾರಸ್ವಾಮಿ
ಹುಣಸೂರು ಕ್ಷೇತ್ರ- ಹರೀಶ್ ಗೌಡ
ಜಿ.ಟಿ.ದೇವೇಗೌಡ ಮಗ ಹರೀಶ್ ಗೌಡಗೆ ಟಿಕೆಟ್
ಚಾಮುಂಡೇಶ್ವರಿ ಕ್ಷೇತ್ರ- ಜಿ.ಟಿ.ದೇವೇಗೌಡ
ನಾಗಮಂಗಲ ಕ್ಷೇತ್ರ- ಸುರೇಶ್ ಗೌಡ
ಶೃಂಗೇರಿ ಕ್ಷೇತ್ರ- ಸುಧಾಕರ್ ಶೆಟ್ಟಿ
ವರುಣಾ ವಿಧಾನಸಭೆ ಕ್ಷೇತ್ರ- ಅಭಿಷೇಕ್
ಬೆಂಗಳೂರು ದಕ್ಷಿಣ- ಪ್ರಭಾಕರ್ ರೆಡ್ಡಿ
ದೇವನಹಳ್ಳಿ- ನಿಸರ್ಗ ನಾರಾಯಣಸ್ವಾಮಿ
ಖಾನಾಪುರ- ನಾಸಿರ್ ಬಾಪುಲ್ಸಾಬ ಭಗವಾನ
ಬೈಲಹೊಂಗಲ ಕ್ಷೇತ್ರ- ಶಂಕರ ಮಾಡಲಗಿ
ಕೃಷ್ಣರಾಜ ವಿಧಾನಸಭೆ ಕ್ಷೇತ್ರ- ಮಲ್ಲೇಶ್
ಹನೂರು ಅಸೆಂಬ್ಲಿ ಕ್ಷೇತ್ರ- ಮಂಜುನಾಥ್
ಬೀದರ್ ದಕ್ಷಿಣ ಕ್ಷೇತ್ರ- ಬಂಡೆಪ್ಪ ಕಾಶೆಂಪೂರ
ದೇವರಹಿಪ್ಪರಗಿ ಕ್ಷೇತ್ರ - ರಾಜುಗೌಡ ಪಾಟೀಲ್
ಮಾನ್ವಿ ಕ್ಷೇತ್ರ - ರಾಜಾವೆಂಕಟಪ್ಪ ನಾಯಕ
ಕೆ.ಆರ್.ನಗರ ಕ್ಷೇತ್ರ- ಸಾ.ರಾ.ಮಹೇಶ್
ಮದ್ದೂರು ಅಸೆಂಬ್ಲಿ ಕ್ಷೇತ್ರ- ಡಿ.ಸಿ.ತಮ್ಮಣ್ಣ
ಶ್ರೀರಂಗಪಟ್ಟಣ ಕ್ಷೇತ್ರ- ಡಾ.ರವೀಂದ್ರ ಶ್ರೀಕಂಠಯ್ಯ
ಮೇಲುಕೋಟೆ ಕ್ಷೇತ್ರ - ಸಿ.ಎಸ್.ಪುಟ್ಟರಾಜು
ಮಂಡ್ಯ ಅಸೆಂಬ್ಲಿ ಕ್ಷೇತ್ರ- ಎಂ.ಶ್ರೀನಿವಾಸ್
ರಾಜಾಜಿನಗರ ಕ್ಷೇತ್ರ- ಗಂಗಾಧರ್ ಮೂರ್ತಿ
ಮಳವಳ್ಳಿ ಕ್ಷೇತ್ರ- ಡಾ.ಕೆ.ಅನ್ನದಾನಿ
ಕೆ.ಆರ್.ಪೇಟೆ ಕ್ಷೇತ್ರ - ಹೆಚ್.ಟಿ.ಮಂಜುನಾಥ್
ಗಾಂಧಿನಗರ ಕ್ಷೇತ್ರ - ವಿ.ನಾರಾಯಣಸ್ವಾಮಿ
ಕೆಜಿಎಫ್ ಅಸೆಂಬ್ಲಿ ಕ್ಷೇತ್ರ- ರಮೇಶ್ಬಾಬು
ಮೂಡಿಗೆರೆ ಕ್ಷೇತ್ರ- ಬಿ.ಬಿ.ನಿಂಗಯ್ಯ
2023ನೇ ವಿಧಾನಸಭೆ ಚುನಾವಣೆಯ @JanataDal_S ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಪಕ್ಷದ ಸಂಸದೀಯ ಮಂಡಳಿ ಹಾಗೂ ರಾಷ್ಟೀಯ ಅಧ್ಯಕ್ಷರಾದ ಶ್ರೀ @H_D_Devegowda ಅವರ ಅನುಮೋದನೆ ಮೇರೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. pic.twitter.com/LC1JUel5JX
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 19, 2022
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಹೆಸರೇ ಮಾಯವಾಗಿದೆ. ಕಳೆದ ಬಾರಿ 7 ಕ್ಷೇತ್ರಗಳಲ್ಲಿ6 ಕ್ಷೇತ್ರ ಗೆದ್ದಿದ್ದ ಜೆಡಿಎಸ್, ಜಿಲ್ಲೆಯ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಹಿನ್ನೆಲೆ ಅಭ್ಯರ್ಥಿ ಹೆಸರನ್ನು ವರಿಷ್ಠರು ಗೌಪ್ಯವಾಗಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಹಾಸನ, ಅರಸೀಕೆರೆ, ಅರಕಲಗೂಡಿನಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಹಾಸನ ಟಿಕೆಟ್ಗಾಗಿ ಭವಾನಿ ರೇವಣ್ಣ ಮತ್ತು ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ಪುತ್ರ ಸ್ವರೂಪ್ ನಡುವೆ ಫೈಟ್ ನಡೆಯುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸ್ವರೂಪ್ ಪರ ಒಲವು ತೋರಿದ್ದಾರೆ. ಇತ್ತ ಟಿಕೆಟ್ಗಾಗಿ ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ.
ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೊನೆಯವರೆಗೂ ಕಸರತ್ತು ನಡೆಸಿ ಕಾದು ನೋಡುವ ತಂತ್ರಕ್ಕೆ ಜೆಡಿಎಸ್ ವರಿಷ್ಠರು ಮೊರೆ ಹೋಗಿದ್ದಾರೆ. ಇತ್ತ ಬೇಲೂರು, ಹೊಳೆನರಸೀಪುರ, ಚನ್ನರಾಯಪಟ್ಟಣ, ಸಕಲೇಶಪುರ ಕ್ಷೇತ್ರಕ್ಕೆ ಅಭ್ಯರ್ಥಿ ಬಹುತೇಕ ಫಿಕ್ಸ್ ಆಗಿದೆ. ಬೇಲೂರು-ಲಿಂಗೇಶ್, ಹೊಳೆನರಸೀಪುರ-ಹೆಚ್.ಡಿ ರೇವಣ್ಣ, ಚನ್ನರಾಯಪಟ್ಟಣ-ಸಿ.ಎನ್ ಬಾಲಕೃಷ್ಣ, ಸಕಲೇಶಪುರ-ಹೆಚ್.ಕೆ ಕುಮಾರಸ್ವಾಮಿ ಗೆ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ