HOME » NEWS » State » LIQUOR WORTH RS 16 LAKH BEING DESTROYED IN YADAGIRI ZP

16 ಲಕ್ಷ ರೂ. ಮೌಲ್ಯದ ಮದ್ಯ ನಾಶ: ಕಾಲುವೆಯಂತೆ ಹರಿದ ಬಿಯರ್..!

ಈ ಬಗ್ಗೆ ಮಾತನಾಡಿದ ಅಬಕಾರಿ ಅಧಿಕಾರಿ ಶ್ರೀರಾಮ ರಾಠೋಡ್ ,ಅವಧಿ ಮುಗಿದ ಮದ್ಯವನ್ನು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ,ಪರಿಸರಕ್ಕೆ ಧಕ್ಕೆಯಾಗದಂತೆ ಇಲಾಖೆಯು ಅಗತ್ಯ ಎಚ್ಚರಿಕೆ ವಹಿಸಿ ನಾಶ ಮಾಡಲಾಗಿದೆ ಎಂದರು.

news18-kannada
Updated:September 18, 2020, 8:36 PM IST
16 ಲಕ್ಷ ರೂ. ಮೌಲ್ಯದ ಮದ್ಯ ನಾಶ: ಕಾಲುವೆಯಂತೆ ಹರಿದ ಬಿಯರ್..!
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ (ಸೆ.18) : ಮದ್ಯದ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಾ ಹೋಗುತ್ತಿದೆ ಎಂಬುದು ಮದ್ಯಪ್ರಿಯರ ದೂರು. ಆದರೆ ಅದೇ ಮದ್ಯ ಕಾಲುವೆಯಲ್ಲಿ ನೀರಿನಂತೆ ಹರಿದರೆ? ಮದ್ಯಪಾನಿಗಳಿಗೆ ಏನಾಗಬೇಡ ಹೇಳಿ. ಇಂತಹದೊಂದು ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯಲ್ಲಿ. ಆದರೆ ಹೀಗೆ ಮದ್ಯ ಹರಿಯಲು ಒಂದು ಪ್ರಮುಖ ಕಾರಣ ಕೂಡ ಇದೆ.  ಹೌದು, ಅವಧಿ ಮುಗಿದ ಮದ್ಯದ ಬಾಟಲ್ ಗಳಿಗೆ ಅಬಕಾರಿ ಅಧಿಕಾರಿಗಳು ಮುಕ್ತಿ ಕಲ್ಪಿಸಿದ ಪರಿಣಾಮ ಕಾಲುವೆಯಂತೆ ಮದ್ಯ ಹರಿಯಿತು.  ನಗರದ ಹೊರಭಾಗದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಉಳಿದಿದ್ದ ಅವಧಿ ಮುಗಿದ ಮದ್ಯವನ್ನು ಅಬಕಾರಿ ನಿರೀಕ್ಷಕರಾದ ಪ್ರಕಾಶ ರಾಠೋಡ್,ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡವು ಪರಿಸರ ಹಾಗೂ ಜನರಿಗೆ ತೊಂದರೆಯಾಗದಂತೆ ಮದ್ಯವನ್ನು ನಾಶ ಪಡಿಸಿದ್ದಾರೆ.

ಅವಧಿ ಮುಗಿದ ಮದ್ಯವನ್ನು ನಾಶ ಮಾಡಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ಕರ್ನಾಟಕ ರಾಜ್ಯ ಪಾನೀಯ ನಿಗಮದ ನಿಯಮಿತ ಮದ್ಯ ಸಂಗ್ರಹದ ಗೋದಾಮಿನ ಆವರಣದಲ್ಲಿ  ಗುಂಡಿ ತೊಡಿ , ಮಾರಾಟವಾಗದೆ ಅವಧಿ ಮುಗಿದ ಪೋಸ್ಟ್ ರ ಗೋಲ್ಡ್ 399 ಪೆಟ್ಟಿಗೆ, ಪೊಸ್ಟರ್ ಲಾಗರ್ 98 ಬಾಕ್ಸ್,ನಾಕೌಟ್ ಬಿಯರ್ 531  ಸೇರಿ 1028 ಮದ್ಯದ ಬಾಕ್ಸ್ ಗಳ ನಾಶ ಮಾಡಿದರು. ಹೀಗೆ ಅವಧಿ ಮುಗಿದ ಒಟ್ಟು 16 ಲಕ್ಷ ರೂ ಮೌಲ್ಯದ ಮದ್ಯ ನಾಶ ಮಾಡಲಾಗಿದೆ.

ಪಕ್ಕದಲ್ಲಿ ರಸ್ತೆ ಇರುವದರಿಂದ ಯಾವುದೇ ಸಮಸ್ಯೆಯಾಗದಂತೆ ಗುಂಡಿ ತೊಡಿ ಮದ್ಯವನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳು ನಾಶ ಮಾಡಿದರು. ಈ ವೇಳೆ ಗುಂಡಿಯಲ್ಲಿ ಮದ್ಯವನ್ನು ಚಲ್ಲುವ ದೃಶ್ಯವು ಕಾಲುವೆಯಲ್ಲಿ ನೀರು ಹರಿದಂತೆ ಕಂಡಿತ್ತು. ನಂತರ ಅಧಿಕಾರಿಗಳು ಜೆಸಿಬಿ ಮೂಲಕ ನಾಶ ಮಾಡಿದ ಮದ್ಯವನ್ನು ಮಣ್ಣು ಮುಚ್ಚಿ ಸುರಕ್ಷತೆ ನಿಯಮ ಪಾಲನೆ ಮಾಡಲಾಗಿದೆ.

ಈ ಬಗ್ಗೆ  ಅಧಿಕಾರಿ ಶ್ರೀರಾಮ ರಾಠೋಡ್ ಮಾತನಾಡಿ,ಅವಧಿ ಮುಗಿದ ಮದ್ಯವನ್ನು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ,ಪರಿಸರಕ್ಕೆ ಧಕ್ಕೆಯಾಗದಂತೆ ಇಲಾಖೆಯು ಅಗತ್ಯ ಎಚ್ಚರಿಕೆ ವಹಿಸಿ ನಾಶ ಮಾಡಲಾಗಿದೆ ಎಂದರು. ಅವಧಿ ಮುಗಿದು ಎರಡು ವರ್ಷ ಕಳೆದರು ಕೆಲ ತಾಂತ್ರಿಕ ಕಾರಣದಿಂದ ನಾಶ ಮಾಡದೆ ಗೋದಾಮಿನಲ್ಲಿ ಕೊಳೆಯುತ್ತಿದ್ದ ಮದ್ಯಕ್ಕೆ ಕೊನೆಗೂ ಅಧಿಕಾರಿಗಳು ಮುಕ್ತಿ ಕಲ್ಪಿಸಿದ್ದಾರೆ.
Published by: zahir
First published: September 18, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories