ಮದ್ಯ ಪ್ರಿಯರಿಗೆ ಕಹಿ ಸುದ್ದಿ: ಬೆಂಗಳೂರು ಸೇರಿದಂತೆ ಹಲವೆಡೆ ಇನ್ಮೂರು ದಿನ ಸಿಗೋದಿಲ್ಲ ಲಿಕ್ಕರ್​​

ಉಪಚುನಾವಣೆ ಹಿನ್ನೆಲೆ ಮಂಗಳವಾರ ಸಂಜೆಯಿಂದ ಇನ್ನು ಎರಡು ದಿನ ಮದ್ಯ ನಿಷೇಧಿಸಿದ ಚುನಾವಣಾ ಆಯೋಗ ಸೂಚನೆ ನೀಡಿದೆ.

Seema.R | news18-kannada
Updated:December 3, 2019, 8:39 PM IST
ಮದ್ಯ ಪ್ರಿಯರಿಗೆ ಕಹಿ ಸುದ್ದಿ: ಬೆಂಗಳೂರು ಸೇರಿದಂತೆ ಹಲವೆಡೆ ಇನ್ಮೂರು ದಿನ ಸಿಗೋದಿಲ್ಲ ಲಿಕ್ಕರ್​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ.3): ಉಪಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಈಗಾಗಲೇ ಅಂತಿಮ ಪ್ರಚಾರಕ್ಕೆ ತೆರೆಬಿದ್ದಿದೆ. 15 ಕ್ಷೇತ್ರಗಳಲ್ಲಿ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಮದ್ಯ, ಹಣ ಬಾಡೂಟಗಳ ಮೇಲೆ ಕಣ್ಣಿಟ್ಟಿದೆ. ಇದರ ಜೊತೆಗೆ ಕ್ಷೇತ್ರಗಳಲ್ಲಿ ಇಂದಿನಿಂದ ಇನ್ನೆರಡು ದಿನ ಲಿಕ್ಕರ್​ ಶಾಪ್​ ಹಾಗೂ ಬಾರ್​ಗಳಲ್ಲಿ ಮದ್ಯ ಸರಬರಾಜು ಮಾಡದಂತೆ ನಿಷೇಧ ಹೇರಿದ್ದಾರೆ.

ಉಪಚುನಾವಣೆ ಹಿನ್ನೆಲೆ ಮಂಗಳವಾರ ಸಂಜೆಯಿಂದ ಇನ್ನು ಎರಡು ದಿನ ಮದ್ಯ ನಿಷೇಧಿಸಿದ ಚುನಾವಣಾ ಆಯೋಗ ಸೂಚನೆ ನೀಡಿದೆ.

ಗೋಕಾಕ್​, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್​ ಪೇಟೆ, ಮಹಾಲಕ್ಷ್ಮೀ ಲೇಔಟ್​ , ಕೆ.ಆರ್​ ಪುರಂ ಹಾಗೂ ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆಯುತ್ತಿದೆ.

ಈ ಹಿನ್ನಲೆ ಈ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಡ್ರೈ ಡೇ ನಿಯಮ ಜಾರಿಗೆ ಬರಲಿದೆ. ಮಂಗಳವಾರ ಸಂಜೆ ಯಿಂದ ಡಿ. 5ರವರೆಗೆ ಮದ್ಯ ನಿಷೇಧ ಇರಲಿದೆ.

ಇದನ್ನು ಓದಿ: ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆ ಮನೆಮನೆ ಪ್ರಚಾರ; ಮತದಾನಕ್ಕೆ ಒಂದೂವರೆ ದಿನ ಬಾಕಿ

ನ.11ರಿಂದ ಈ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸೆ.144 ಸಿಆರ್​ಪಿಸಿ ಅಡಿ ಈ ನಿಷೇದ ಹೇರಲಾಗಿದೆ.
First published: December 3, 2019, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading