New Year Celebration: ಹೊಸ ವರ್ಷವನ್ನು ಅತ್ಯಂತ ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ (COVID 19) ಆತಂಕದ ಹಿನ್ನೆಲೆ ಬೆಂಗಳೂರಿನ ರಸ್ತೆಗಳು (Bengaluru) ಖಾಲಿ ಖಾಲಿಯಾಗಿದ್ದವು. ಆದರೆ ಈ ವರ್ಷ ಬೆಂಗಳೂರಿನಲ್ಲಿ (Bengaluru New Year Celebration) ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಬ್ರಿಗೇಡ್ ರೋಡ್ (Brigade Road), ಎಂಜಿ ರೋಡ್ (MG Road), ಚರ್ಚ್ ಸ್ಟ್ರೀಟ್ (Church Street), ಕೋರಮಂಗಲ ಸೇರಿದಂತೆ ಹಲವು ಕಡೆ ಲಕ್ಷಾಂತರ ಜನರು ಒಂದೆಡೆ ಸೇರಿ ಹೊಸ ವರ್ಷವನ್ನು ಬರಮಾಡಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
ಇನ್ನು ಹೊಸ ವರ್ಷ ಅಂದ್ರೆ ಮದ್ಯ ಇರಲೇಬೇಕು. ಕಳೆದ ನಾಲ್ಕು ದಿನಗಳಿಂದಲೇ ಜನರು ಮದ್ಯವನ್ನ ಸ್ಟಾಕ್ ಮಾಡಿಕೊಂಡಿದ್ದರು. 2022ರ ಅಂತ್ಯದ ಕೊನೆ ವಾರದಲ್ಲಿ ಮದ್ಯದ ಖರೀದಿ (Liquor Sale) ಹೊಸ ದಾಖಲೆಯನ್ನು ಬರೆದಿದೆ.
ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ (Excise Department ಮಾಹಿತಿ ನೀಡಿದೆ. ಒಂಬತ್ತು ದಿನಗಳಲ್ಲಿ ಒಟ್ಟು 657 ಕೋಟಿ ರೂಪಾಯಿ ಅಬಕಾರಿ ಇಲಾಖೆಯ ಬೊಕ್ಕಸ ಸೇರಿದೆ.
ಎಷ್ಟು ಮದ್ಯ ಮಾರಾಟ?
ದಿನಾಂಕ | ಮದ್ಯ (IML-Indian Made Liquor) | ಬಿಯರ್ |
ಡಿಸೆಂಬರ್ 27 | 3.57 ಲಕ್ಷ ಲೀಟರ್ | 2.41 ಲಕ್ಷ ಲೀಟರ್ |
ಡಿಸೆಂಬರ್ 28 | 2.31 ಲಕ್ಷ ಲೀಟರ್ | 1.67 ಲಕ್ಷ ಲೀಟರ್ |
ಡಿಸೆಂಬರ್ 29 | 2.31 ಲಕ್ಷ ಲೀಟರ್ | 1.93 ಲಕ್ಷ ಲೀಟರ್ |
ಡಿಸೆಂಬರ್ 30 | 2.93 ಲಕ್ಷ ಲೀಟರ್ | 2.59 ಲಕ್ಷ ಲೀಟರ್ |
ಡಿಸೆಂಬರ್ 31 | 3 ಲಕ್ಷ ಲೀಟರ್ | 2.41 ಲಕ್ಷ ಲೀಟರ್ |
ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ಅಬಕಾರಿ ಇಲಾಖೆಗೆ 657 ಕೋಟಿ ಆದಾಯ ಹರಿದು ಬಂದಿದೆ.
ಪೊಲೀಸರ ಕಣ್ಗಾವಲಿನಲ್ಲಿಯೇ ಹೊಸ ವರ್ಷ ಆಚರಣೆ
ಬೆಂಗಳೂರಿನಲ್ಲಿ (Bengaluru) ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿದ್ರೆ ರಾಜಧಾನಿಯಲ್ಲಿ ಪೊಲೀಸ್(Bengaluru Police) ಕಣ್ಗಾವಲಿನಲ್ಲಿಯೇ ಹೊಸ ವರ್ಷ ಆಚರಣೆ ಮಾಡಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಿಂದ ರಾತ್ರಿ ಮನೆಗಳಿಗೆ ತೆರಳಲು ಪರದಾಡುವಂತಾಯ್ತು. ಬ್ರಿಗೇಡ್ ರೋಡ್ (Brigade Road), ಎಂಜಿ ರೋಡ್ (MG Road), ಚರ್ಚ್ ಸ್ಟ್ರೀಟ್ (Church Street) ಸೇರಿದಂತೆ ಹಲವು ರಸ್ತೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿತ್ತು.
ಯುವತಿಯ ಜಡೆ ಎಳೆದ ಪುಂಡ
12 ಗಂಟೆ ಆಗುತ್ತಿದ್ದಂತೆ ಪೊಲೀಸರು ಜನರನ್ನು ಕಳುಹಿಸಲು ಮುಂದಾದರು. ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ದುಷ್ಕರ್ಮಿಯೋರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬಗ್ಗೆ ವರದಿಯಾಗಿದೆ. ಇದರಿಂದ ಯುವತಿ ಜೊತೆಯಲ್ಲಿದ್ದ ಆಕೆಯ ಗೆಳೆಯ ಕೋಪಗೊಂಡು ಜಗಳ ಮಾಡಿದ್ದಾನೆ. ನಂತರ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: New Year New Films: ಹೊಸವರ್ಷದ ಮೊದಲ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಿನಿಮಾಗಳು
ಗಾಂಜಾ ಸೇವಿಸಿ ಗಲಾಟೆ
ಬ್ರಿಗೇಡ್ ರೋಡ್ನಲ್ಲಿ ಕೆಲವರು ಗಾಂಜಾ ಸೇವನೆ ಮಾಡಿ, ಅದೇ ಮತ್ತಿನಲ್ಲಿ ಜನರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಕಬ್ಬನ್ ಪಾರ್ಕ್ ಪೊಲೀಸರು ಗಾಂಜಾ ವ್ಯಸನಿಗಳಿಗೆ ಲಾಠಿ ಏಟು ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ರಾತ್ರಿ 1 ಗಂಟೆ ನಂತರ ಜನರು ಮನೆಯತ್ತ ಹೊರಟಿದ್ದರಿಂದ ನಗರದ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ