HOME » NEWS » State » LIQUOR AND GANJA SEIZED IN VIJAYPURA 51 PEOPLE GET ARRESTED SCT

ವಿಜಯಪುರದಲ್ಲಿ ಭಾರೀ ಪ್ರಮಾಣದ ಗಾಂಜಾ, ಅಕ್ರಮ ಮದ್ಯ ವಶ; 51 ಜನರ ಬಂಧನ

ವಿಜಯಪುರ ಜಿಲ್ಲೆಯ 138 ನಾನಾ ಸ್ಥಳಗಳಲ್ಲಿ ದಾಳಿ ನಡೆಸಿರುವ ನಾನಾ ಪೊಲೀಸ್ ಠಾಣೆಗಳ ಪೊಲೀಸರು ಅಕ್ರಮ ಮದ್ಯ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ.  ನಾನಾ ಡಾಬಾಗಳು, ಹೋಟೆಲ್​ಗಳು ಮತ್ತು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದಾರೆ. 

news18-kannada
Updated:September 7, 2020, 10:34 AM IST
ವಿಜಯಪುರದಲ್ಲಿ ಭಾರೀ ಪ್ರಮಾಣದ ಗಾಂಜಾ, ಅಕ್ರಮ ಮದ್ಯ ವಶ; 51 ಜನರ ಬಂಧನ
ವಿಜಯಪುರದಲ್ಲಿ ಗಾಂಜಾ ವಶ
  • Share this:
ವಿಜಯಪುರ (ಸೆ. 7): ರಾಜ್ಯಾದ್ಯಂತ ಈಗ ಡ್ರಗ್ಸ್ ದಂಧೆ ಸದ್ದು ಮಾಡುತ್ತಿರುವ ಮಧ್ಯೆಯೇ ವಿಜಯಪುರ ಜಿಲ್ಲೆಯಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳ ವಿರುದ್ಧ ಭರ್ಜರಿ ಧಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಗಾಂಜಾ ಮತ್ತು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ಬಬಲೇಶ್ವರ ನಾಕಾ ಹತ್ತಿರದ ಹೊಲವೊಂದರ ಮೇಲೆ ಧಾಳಿ ನಡೆಸಿರುವ ವಿಜಯಪುರ ನಗರದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಸಿಇಎನ್‌ ಇನ್ಸಪೆಕ್ಟರ್ ಸುನಿಲ ಕಾಂಬಳೆ ನೇತೃತ್ವದ ತಂಡ ಗಾಂಜಾ ಬೆಳೆಯುತ್ತಿರುವುದನ್ನು ಪತ್ತೆ ಮಾಡಿದೆ.  ಕರಭಂಟನಾಳ ಗ್ರಾಮದ ಕಾಂತು ನೀಲು ನಾಯಕ ಎಂಬಾತ ಹೊಲದ ಮಧ್ಯದಲ್ಲಿ ಬೆಳೆಯಲಾಗಿದ್ದ 15 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ವಿಜಯಪುರ ತಹಸೀಲ್ದಾರ ಮೋಹನ ಕುಮಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ ನಿಡಗುಂದಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹೊಲವೊಂದರಲ್ಲಿ ಬೆಳೆಗಳ ಮಧ್ಯೆ ಬೆಳೆಯಲಾಗಿದ್ದ 72 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆರೋಪಿ ರವಿ ಬಸಪ್ಪ ವಾಲಿಕಾರ ಎಂಬಾತನನ್ನು ಬಂಧಿಸಿದ್ದಾರೆ.  ಬಸವನ ಬಾಗೇವಾಡಿ ಡಿವೈಎಸ್​ಪಿ ಈ. ಶಾಂತವೀರ ಮತ್ತು ನಿಡಗುಂದಿ ಪಿಎಸ್‌ಐ ಸಿ.ಬಿ. ಚಿಕ್ಕೋಡಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ಇನ್ನೊಂದೆಡೆ ವಿಜಯಪುರ ಜಿಲ್ಲೆಯ 138 ನಾನಾ ಸ್ಥಳಗಳಲ್ಲಿ ದಾಳಿ ನಡೆಸಿರುವ ನಾನಾ ಪೊಲೀಸ್ ಠಾಣೆಗಳ ಪೊಲೀಸರು ಅಕ್ರಮ ಮದ್ಯ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ.  ನಾನಾ ಡಾಬಾಗಳು, ಹೋಟೆಲ್​ಗಳು ಮತ್ತು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ, ವಿಜಯಪುರ ಜಿಲ್ಲೆಯ 138 ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.  38 ಡಾಬಾ, 5 ಹೋಟೇಲ್, 6 ಗ್ರಾಮಗಳ ಅಂಗಡಿ ಮತ್ತಿತರ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಒಟ್ಟು 49 ಪ್ರಕರಣ ದಾಖಲು ಮಾಡಲಾಗಿದೆ.  ಅಲ್ಲದೆ, 51 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Youtube Video

ಅಷ್ಟೇ ಅಲ್ಲ, ಈ ದಾಳಿಯ ಸಂದರ್ಭದಲ್ಲಿ 128.74 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆ, ವಿಜಯಪುರ ಜಿಲ್ಲೆಯಲ್ಲಿ ಎಸ್​ಪಿ ಅನುಪಮ ಅಗರ್​ವಾಲ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧ ಮಾರ್ಗದರ್ಶನದಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳೆಗೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯವಾಗಿದೆ.
Published by: Sushma Chakre
First published: September 7, 2020, 10:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories