ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆಂದು ಭೂಮಿ ಪಡೆದು ಕಬಳಿಕೆಗೆ ಮುಂದಾದ ಲಯನ್ಸ್​ ಕ್ಲಬ್​!

25 ವರ್ಷ ಕಳೆದರೂ ಆಸ್ಪತ್ರೆ ಮಾತ್ರ ನಿರ್ಮಾಣವಾಗಿಲ್ಲ. ಬದಲಿಗೆ ಸಂಸ್ಥೆ ಈ ಜಾಗ ತನ್ನದು ಎಂದು ಭೂಕಬಳಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ

 25 ವರ್ಷ ಕಳೆದರೂ ಆಸ್ಪತ್ರೆ ಮಾತ್ರ ನಿರ್ಮಾಣವಾಗಿಲ್ಲ. ಬದಲಿಗೆ ಸಂಸ್ಥೆ ಈ ಜಾಗ ತನ್ನದು ಎಂದು ಭೂಕಬಳಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ

25 ವರ್ಷ ಕಳೆದರೂ ಆಸ್ಪತ್ರೆ ಮಾತ್ರ ನಿರ್ಮಾಣವಾಗಿಲ್ಲ. ಬದಲಿಗೆ ಸಂಸ್ಥೆ ಈ ಜಾಗ ತನ್ನದು ಎಂದು ಭೂಕಬಳಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ

  • Share this:
ಕೊಡಗು (ಅ.5): ಮೂರು ವರ್ಷಗಳೊಳಗೆ ಕಣ್ಣಿನ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿ ಸರ್ಕಾರದಿಂದ ಬೆಲೆಬಾಳುವ ಭೂಮಿ ಪಡೆದ ಲಯನ್ಸ್​ ಕ್ಲಬ್​​ 25 ವರ್ಷ ಕಳೆದರೂ ಈ ಭರವಸೆ ಈಡೇರಿಸಿಲ್ಲ. ಬದಲಾಗಿ ​  ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು ಕಬಳಿಕೆಗೆ ಮುಂದಾಗಿದೆ.  ಈ ಬಗ್ಗೆ ಇಲ್ಲಿನ ಜನರು ಹಾಗೂ ಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ.  ಇಲ್ಲಿನ ಕುಶಾಲನಗರದ ಮುಳ್ಳುಸೋಗೆಯ ಸರ್ವೆ ನಂಬರ್ 68 ರಲ್ಲಿ ಒಂದು ಎಕರೆ ಜಾಗವನ್ನು 1993 ರಲ್ಲಿ ಲಯನ್ಸ್ ಸಂಸ್ಥೆ ಪಡೆದುಕೊಂಡಿತ್ತು. ಷರತ್ತಿನ ಆಧಾರದ ಮೇಲೆ ಜಿಲ್ಲಾಡಳಿಕ 1 ಎಕರೆ ಜಮೀನು ನೀಡಿದೆ. ಲಯನ್ಸ್​ ಕ್ಲಬ್​​​ ಮೂರು ವರ್ಷದೊಳಗೆ ಆಸ್ಪತ್ರೆ ನಿರ್ಮಿಸದಿದ್ದರೆ, ಜಾಗ ವಾಪಸ್​ ನೀಡಬೇಕು ಎಂಬ ಕರಾರನ್ನು ವಿಧಿಸಿ, ಕೇವಲ 15 ಸಾವಿರಕ್ಕೆ ಜಾಗ ನೀಡಲಾಗಿತ್ತು. ಈ ಘಟನೆ ನಡೆದು ಬರೋಬ್ಬರಿ 25 ವರ್ಷ ಕಳೆದರೂ ಆಸ್ಪತ್ರೆ ಮಾತ್ರ ನಿರ್ಮಾಣವಾಗಿಲ್ಲ. ಬದಲಿಗೆ ಸಂಸ್ಥೆ ಈ ಜಾಗ ತನ್ನದು ಎಂದು ಭೂಕಬಳಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.  

ಇದನ್ನು ಅರಿತ ಇಲ್ಲಿನ ಜಿಲ್ಲಾ ಪಂಚಾಯತಿ ಅಧಿಕಾರಿಗಳು 16 ವರ್ಷದ ಹಿಂದೆ ಅಂದರೆ  1997 ರಲ್ಲಿ ಜಾಗವನ್ನು ವಾಪಸ್ ಪಡೆಯಲು ನಿರ್ಣಯಿಸಿತು. ಯಾವಾಗ ಭೂಮಿ ಕೈ ಬಿಟ್ಟು ಹೋಗುತ್ತದೆ ಎಂಬ ವಿಷಯ ತಿಳಿಯಿತೋ ಆ ತಕ್ಷಣ 2009ರಲ್ಲಿ ಲಯನ್ಸ್ ಕ್ಲಬ್ ಅಕ್ರಮವಾಗಿ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಜಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ 2010 ರಿಂದಲೂ 2017 ರವರೆಗೆ ನಿರಂತರ ಪತ್ರ ಬರೆದಿದ್ದರು.

ಬಳಿಕ ಜಿಲ್ಲಾ ಪಂಚಾಯಿತಿ ಸಿಇಓ ಆದೇಶದ ಮೇರೆಗೆ ಸೋಮವಾರಪೇಟೆ ತಹಶೀಲ್ದಾರ್ 2017 ರಲ್ಲಿ ಜಾಗದ ಗೇಟಿಗೆ ಬೀಗ ಹಾಕಿದರು. ಈ ವಿಷಯ ತಿಳಿಯುತ್ತಿದ್ದಂತೆ  ತಹಶೀಲ್ದಾರ್ ಅವರು ಹಾಕಿದ್ದ ಬೀಗವನ್ನು ಅಕ್ರಮವಾಗಿ ಒಡೆದುಹಾಕಿ ನಾಮಕಾವಸ್ತೆಗೆ ನಾಲ್ಕು ಪಿಲ್ಲರ್ ಗಳನ್ನು ಹಾಕಿ ಆಸ್ಪತ್ರೆ ನಿರ್ಮಿಸುವುದಾಗಿ ನಾಟಕವಾಡಿದೆ.

ಇದನ್ನು ಓದಿ: ದಸರಾದಿಂದ ನಿವೃತ್ತನಾದರೂ ಅರ್ಜುನ ಆನೆಗೆ ಈಗ ಪುಂಡಾನೆ ಹಿಡಿಯುವ ಕಾಯಕ

ಇದಾದ ಬಳಿಕ ಕೂಡ ಆಸ್ಪತ್ರೆ ನಿರ್ಮಾಣವಾಗದ ಹಿನ್ನಲೆ ಕಳೆದ ತಿಂಗಳು ಸೆಪ್ಟೆಂಬರ್​ ರಂದು ಈ ಘಟನೆ ಕುರಿತು ಇಲ್ಲಿನ ಶಾಸಕ ಅಪಚ್ಚು ರಂಜನ್​ ಅವರಿಗೆ ತಹಶೀಲ್ದಾರ್ ವಿವರವಾದ ಪತ್ರ ಬರೆದಿದ್ದಾರೆ.

ಈ ಪತ್ರದ ಬಳಿಕ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದು, , ಜಾಗವನ್ನು ವಾಪಸ್ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಲಯನ್ಸ್​ ಕ್ಲಬ್​ ಸಂಸ್ಥೆ ಅಧ್ಯಕ್ಷ ಮೋಹನ್​,  ಇದು ನಾವು ಕೊಂಡುಕೊಂಡಿರುವ ಜಾಗವಾಗಿದೆ. ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ. ಅಲ್ಲದೇ ನಾವು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದಾಗಲೆಲ್ಲಾ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
Published by:Seema R
First published: