• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Basavaraj Bommai: ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಘಟನೆ; ಸಿಎಂ

Basavaraj Bommai: ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಘಟನೆ; ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

CM Bommai: ಕಾಂಗ್ರೆಸ್​​ನವರ ಮೊದಲೇ ರೈಡ್ ಆಗುತ್ತೆ ಎಂದು ಹೇಳುತ್ತಾರೆ. ಮೊದಲೇ ಐಟಿ ದಾಳಿ ಆಗುತ್ತೆ ಅಂತ ಹೇಳೋದು ಕಾಂಗ್ರೆಸ್​ನವರ ತಂತ್ರಗಾರಿಕೆ. ಮೊದಲು ತಪ್ಪು ಮಾಡೋದನ್ನ ಕಾಂಗ್ರೆಸ್ ಬಿಡಲಿ ಎಂದು ವಾಗ್ದಾಳಿ ನಡೆಸಿದರು.

  • Share this:

ಹುಬ್ಬಳ್ಳಿ: ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ (Open Election Campaign) ನಡೆಯುತ್ತಿದೆ‌. ಎಲ್ಲಾ ನಾಯಕರು ಬಹಿರಂಗ ಸಭೆ ಮತ್ತು ರೋಡ್​ಶೋ (Roadshow) ಮಾಡುತ್ತಿದ್ದಾರೆ. 224 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ದಾಖಲೆ‌ ಕೊಡಿ ಎಂದು ಚುನಾವಣಾ ಆಯೋಗಕ್ಕೆ‌ (Election Commission) ಕೇಳಿದ್ದೆ, ಅವರಿಗೆ ಕೊಡಲು ಆಗಿಲ್ಲ. ನಮ್ಮ ವಿರುದ್ಧ ಯಾವುದೇ ಕೇಸ್ ಇಲ್ಲ, ಸಾಕ್ಷಿನೂ ಇಲ್ಲ. ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್​​ನವರ (Congress) ಮೇಲೆಯೇ ಭ್ರಷ್ಟಾಚಾರದ ಕೇಸ್​ಗಳಿವೆ. ತಮ್ಮ ಮೇಲೆ‌ ಕೇಸ್ ಇದ್ದು ಕೋರ್ಟ್​​ಗೆ ಅಲೆದಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ  ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ವಾಗ್ದಾಳಿ ನಡೆಸಿದರು.


ವೀರಶೈವ ಸಮಾಜ ದೊಡ್ಡದಿದ್ದು ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ನಾವು ಗೌರವ ಕೊಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆ ಹೆಸರು ಬಳಸುವುದು ಸರಿಯಲ್ಲ. ಲಿಂಗಾಯತ ವೇದಿಕೆ ಅನ್ನೋದು ಎಲ್ಲಿಯೂ ಇಲ್ಲ. ಅದೊಂದು ಕಾಲ್ಪನಿಕ ಸಂಘಟನೆ. ನಾಲ್ಕು ಜನ ಸೇರಿ ಏನೋ ಹೇಳಿದ್ರೆ ಅದು ಲಿಂಗಾಯತರ ಧ್ವನಿ ಆಗುತ್ತಾ ಎಂದು ಪ್ರಶ್ನೆ ಮಾಡಿದರು.


ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು


ಲಿಂಗಾಯತ ಸಮಾಜ ಅನ್ನೋದು ಸಮುದ್ರ ಇದ್ದಂತೆ. ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭಗಳಲ್ಲಿ ಹುಟ್ಟಿಕೊಂಡ ಸಂಘಟನೆ. ಐಟಿಯವರು ಎಲ್ಲಾ ಜಿಲ್ಲೆಯಲ್ಲಿದ್ದಾರೆ. ಎಲ್ಲಿ ತಪ್ಪು‌ ನಡೆಯುತ್ತೋ ಅವರಿಗೆ ಮಾಹಿತಿ ಇರುತ್ತೆ. ಕಾಂಗ್ರೆಸ್​ನವರು ತಪ್ಪು ಮಾಡಿದ್ರೆ ನಾವು ಏನ್ ಮಾಡೋಕಾಗುತ್ತೆ ಎಂದು ಕೈ ನಾಯಕರ ಆರೋಪಕ್ಕೆ ಸಿಎಂ ತಿರುಗೇಟು ನೀಡಿದರು.




ಪ್ರಚಾರ ಪಕ್ಷಕ್ಕೆ ಬೂಸ್ಟರ್ ಡೋಸ್ ಸಿಗಲಿದೆ


ಕಾಂಗ್ರೆಸ್​​ನವರ ಮೊದಲೇ ರೈಡ್ ಆಗುತ್ತೆ ಎಂದು ಹೇಳುತ್ತಾರೆ. ಮೊದಲೇ ಐಟಿ ದಾಳಿ ಆಗುತ್ತೆ ಅಂತ ಹೇಳೋದು ಕಾಂಗ್ರೆಸ್​ನವರ ತಂತ್ರಗಾರಿಕೆ. ಮೊದಲು ತಪ್ಪು ಮಾಡೋದನ್ನ ಕಾಂಗ್ರೆಸ್ ಬಿಡಲಿ.




ಇದನ್ನೂ ಓದಿ:  Karnataka Election Day Rain: ಚುನಾವಣೆಯ ದಿನ ಮಳೆಯಾಗುತ್ತಾ ಇಲ್ವಾ?


ನಮ್ಮ ರಾಷ್ಟ್ರೀಯ ನಾಯಕರು ಎಲ್ಲಾ  ಚುನಾವಣೆಯಲ್ಲಿ ರಾಜ್ಯಕ್ಕೆ‌ ಬಂದಿದ್ದಾರೆ. ರಾಷ್ಟ್ರೀಯ ನಾಯಕರದ್ದು ಹಾಗೂ ಕರ್ನಾಟಕದ ಜನರದ್ದು ಭಾವನಾತ್ಮಕ ಸಂಬಂಧ. ಇದೊಂದು ದೊಡ್ಡ ಮಟ್ಟದಲ್ಲಿ ಬೂಸ್ಟರ್ ಡೋಸ್ ಸಿಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

top videos
    First published: