Basava Jayanti: ಅಮೆರಿಕಾ, ಉತ್ತರ ಪ್ರದೇಶ ನಿವಾಸಿಗಳಿಗೆ ಲಿಂಗ ದೀಕ್ಷೆ ನೀಡಿ ಬಸವ ಜಯಂತಿ ಆಚರಣೆ!

ಬಸವ ಜಯಂತಿ ನಿಮಿತ್ಯ ಕೂಡಲಸಂಗಮದಲ್ಲಿ ಹಸುಗೂಸಿಗೆ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು. ಬಸವ ಜಯಂತಿ ದಿನದಂದೇ ಜನಿಸಿದ ಹೆಣ್ಣು ಮಗುವಿಗೆ ಬಸವ ಸೌಹಾದ೯ ಎಂದು ನಾಮಕರಣ ಮಾಡಲಾಯಿತು.

ಲಿಂಗ ದೀಕ್ಷೆ ನೀಡುತ್ತಿರುವ ದೃಶ್ಯ

ಲಿಂಗ ದೀಕ್ಷೆ ನೀಡುತ್ತಿರುವ ದೃಶ್ಯ

  • Share this:
    ಬಾಗಲಕೋಟೆ:  ಜಗಜ್ಯೋತಿ ಬಸವೇಶ್ವರರ ಜನ್ಮದಿನ ಬಸವ ಜಯಂತಿಯನ್ನು (Basava Jayanti 2022)  ತ್ರಿವೇಣಿ ಸಂಗಮ ಹಾಗೂ ಧಾರ್ಮಿಕ ಕ್ಷೇತ್ರ ಕೂಡಲಸಂಗಮದಲ್ಲಿ (Koodala Sangama) ವಿನೂತನವಾಗಿ ಆಚರಿಸಲಾಗಿದೆ. ಬಸವ ಧಮ೯ ಪೀಠದಿಂದ ವಿದೇಶ ಮತ್ತು ಹೊರರಾಜ್ಯದಲ್ಲಿದ್ದ ಭಕ್ತರಿಗೆ  ಲಿಂಗದೀಕ್ಷೆ ನೀಡಲಾಯಿತು. ಅಮೇರಿಕಾದಲ್ಲಿದ್ದ (America) ತುಮಕೂರು ಮೂಲದ ಕನ್ನಡಿಗ ಸಂತೋಷಕುಮಾರ್ ಮತ್ತು ಉತ್ತರ ಪ್ರದೇಶದ ಮೌನೇಶ ಎಂಬುವರಿಗೆ ಲಿಂಗದೀಕ್ಷೆ (Linga Deekshe) ನೀಡಲಾಯಿತು. ಬಸವ ಧಮ೯ ಪೀಠದ ಮಾದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಿಂಗದೀಕ್ಷೆ ಕಾರ್ಯಕ್ರಮ ಜರುಗಿತು.  ಬಸವ ಧರ್ಮ ಪೀಠದ ಧ್ಯಾನ ಭವನದಲ್ಲಿ ಸಂತೋಷಕುಮಾರ್ ಮತ್ತು ಮೌನೇಶ ಅವರಿಗೆ ಮಹದೇಶ್ವರ ಸ್ವಾಮೀಜಿ ಲಿಂಗದೀಕ್ಷೆ ನೀಡಿ ಧಾರ್ಮಿಕ ಬೋಧನೆ ನೀಡಿ, ಲಿಂಗದೀಕ್ಷೆ ನೀಡಿದರು.

    ಬಳಿಕ ಬಸವ ಮೂತಿ೯ಯನ್ನ ತೊಟ್ಟಿಲಲ್ಲಿ ಹಾಕಿ  ಬಸವ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.  ಈ ಸಂದರ್ಭದಲ್ಲಿ ಭಕ್ತ ಸಮೂಹದಿಂದ ವಚನಗಳ ಪಠಣ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಲಾಯಿತು.

    ಇದೇ ಸಂದರ್ಭದಲ್ಲಿ ಮಾತನಾಡಿ ಸ್ವಾಮೀಜಿಗಳು,  ಮೂಲತಃ ತುಮಕೂರು ನಿವಾಸಿಯಾಗಿದ್ದು ಸದ್ಯ ಅಮೇರಿಕಾದಲ್ಲಿ ವಾಸಿಸುತ್ತಿರುವ ಕ್ರಿಶ್ಚಿಯನ್ ಸಮುದಾಯದವರಿಗೆ ಲಿಂಗದೀಕ್ಷೆ ನೀಡಲಾಗಿದೆ ಎಂದು ತಿಳಿಸಿದರು.

    ಬಸವ ಜಯಂತಿ ನಿಮಿತ್ಯ ಕೂಡಲಸಂಗಮದಲ್ಲಿ ಹಸುಗೂಸಿಗೆ ತೊಟ್ಟಿಲು ಕಾರ್ಯಕ್ರಮ!
    ಬಸವ ಜಯಂತಿ ನಿಮಿತ್ಯ ಕೂಡಲಸಂಗಮದಲ್ಲಿ ಹಸುಗೂಸಿಗೆ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು. ಬಸವ ಜಯಂತಿ ದಿನದಂದೇ ಜನಿಸಿದ ಹೆಣ್ಣು ಮಗುವಿಗೆ ಬಸವ ಸೌಹಾದ೯ ಎಂದು ನಾಮಕರಣ ಮಾಡಲಾಯಿತು.

    ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಜನಿಸಿದ ಮಗುವಿಗೆ ಪಾಲಕರ ಸಮ್ಮುಖದಲ್ಲಿ ಬಸವ ಸೌಹಾರ್ದ ಎಂದು ನಾಮಕರಣ ಮಾಡಿದರು.

    ಇದನ್ನೂ ಓದಿ: Puneeth Rajkumar Basavashree Award: ಪುನೀತ್​ ರಾಜ್​ಕುಮಾರ್​ ಪರವಾಗಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಭಾವುಕ

    ಮಗುವಿಗೆ ವಿಭೂತಿ ಹಚ್ಚಿ, ಕೊರಳಲ್ಲಿ ಲಿಂಗ ಹಾಕಿ,  ತೊಟ್ಟಿಲಿಗೆ ಮಗುವನ್ನು ಹಾಕಿ ನಾಮಕರಣ ಮಾಡಲಾಯಿತು. ಮೊದಲು ಸ್ವಾಮೀಜಿಯಿಂದ ಬಸವ ಸೌಹಾದ೯ ಎಂಬ ಹೆಸರು ಘೋಷಣೆ ಮಾಡಿ, ಬಳಿಕ ನೆರೆದಿದ್ದ ಮಹಿಳೆಯರಿಂದ ಮೂರು ಬಾರಿ ಮಗುವಿಗೆ ಹೆಸರು ಕರೆದು ನಾಮಕರಣ ಮಾಡಲಾಯಿತು. ಇನ್ನು ಪ್ರತಿವಷ೯ ಬಸವ ಜಯಂತಿ ದಿನದಂದೇ ಜನಿಸಿದ ಮಗುವಿಗೆ ನಾಮಕರಣ ಮಾಡಿಕೊಂಡು ಬರಲಾಗಿದೆ.

    ಮೀಸಲಾತಿ ವಿಚಾರದಲ್ಲಿ ಬಸವಣ್ಣ  ಸಿಎಂ ಬೊಮ್ಮಾಯಿ ಅವರಿಗೆ ಸದ್ಬುದ್ದಿ ನೀಡಲಿ!
    ಇನ್ನು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ  ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ರಾಜ್ಯದಲ್ಲಿ ನಮ್ಮ ಹೋರಾಟ ಈಗ ಮತ್ತೇ 14ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನವರು ಬೇಡಿಕೆ ಈಡೇರಿಸದೆ ಅಧಿಕಾರ ಕಳೆದುಕೊಂಡರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಸಹ ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸುತ್ತಾರೆ ಅನ್ನೋ ವಿಶ್ವಾಸ ನಮ್ಮಲ್ಲಿದೆ. ಒಂದೊಮ್ಮೆ ಬೇಡಿಕೆ ಈಡೇರಿಸದೇ ಹೋದರೆ ಬಸವಣ್ಣ ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಹೇಳಿದರು.

    ಇದನ್ನೂ ಓದಿ: Siddalinga Swamiji: ಉಕ್ರೇನ್‌ನಿಂದ ಬಂದ ರಾಜ್ಯದ ವಿದ್ಯಾರ್ಥಿಗಳ ನೆರವಿಗೆ ನಿಂತ ಸಿದ್ದಗಂಗಾ ಮಠ, ಎಲ್ಲರಿಗೂ ಉಚಿತ ಶಿಕ್ಷಣ ನೀಡಲು ಶ್ರೀಗಳ ನಿರ್ಧಾರ

    ಈಗ ಸಾಕಷ್ಟು ರಾಜಕೀಯ ಬದಲಾವಣೆ ಇದೆ ಅಂತ ಕೇಳಿದ್ದೀವಿ, ಆದರೆ ನಾವು ಎಲ್ಲರಿಗೂ ಒಳ್ಳೆಯದು ಬಯಸುತ್ತೇವೆ. ನಾವೀಗ ಬಸವಣ್ಣ ದೇವರ ಮೊರೆ ಹೋಗಿದ್ದೇವೆ.  ಬಸವಣ್ಣ ನಮ್ಮ ಬೇಡಿಕೆ ಈಡೇರಿಸುವಂತಾ ಸದ್ಬುದ್ಧಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಿ. ಇಲ್ಲದೆ ಹೋದರೆ ಬಸವಣ್ಣ ಯಾವ ರೀತಿ ಪರಿವರ್ತನೆ ಮಾಡುತ್ತಾನೆ ಅನ್ನೋದು ನಮಗೆ ಗೊತ್ತಿಲ್ಲ ಎಂದರು.

    ವರದಿ: ಮಂಜುನಾಥ್ ತಳವಾರ 
    Published by:guruganesh bhat
    First published: