ಬೆಂಗಳೂರು: ಟ್ರಾನ್ಸ್ಫಾರ್ಮರ್ (Electrical Power Transformer) ದುರಸ್ಥಿ ವೇಳೆ ವಿದ್ಯುತ್ ಶಾಕ್ಗೆ (Electric shock) ಒಳಗಾಗಿ ಲೈನ್ಮ್ಯಾನ್ (KEB Lineman) ಸಾವನ್ನಪ್ಪಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣಾ (Magadi Road Police Station) ವ್ಯಾಪ್ತಿಯ ಗೋಪಾಲಪುರದಲ್ಲಿ (Gopalapura ) ನಡೆದಿದೆ. ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ 32 ವರ್ಷದ ಲೈನ್ಮ್ಯಾನ್ ಗೌತಮ್ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಟ್ರಾನ್ಸ್ಫಾರ್ಮರ್ ದುರಸ್ಥಿ ವೇಳೆ ಕರೆಂಟ್ ಶಾಕ್ಗೆ ಒಳಗಾಗಿ ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಣೆಗೆ ಬಂದು, ಆತನನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗೌತಮ್ ಕೊನೆಯುಸಿರೆಳೆದಿದ್ದಾರೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಮರಣೋತ್ತರ ಪರೀಕ್ಷೆಗಾಗಿ ಗೌತಮ್ ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆ ಶಿಫ್ಟ್ ಮಾಡಲಾಗಿದೆ. ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಮೃತ ಗೌತಮ್ ತಂದೆ ರಂಗಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮಗನ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಅಧಿಕಾರಿಗಳೇ ನನ್ನ ಮಗನನ್ನ ಕೊಲೆ ಮಾಡಿದ್ದಾರೆ. ಹೀಗಾಗಿ ಮಗನ ಸಾವಿಗೆ ಕಾರಣರಾದವರ ಮೇಲೆ ಕ್ರಮಗೊಳ್ಳಬೇಕು ಎಂದು ಕೆ.ಇ.ಬಿ ಇಂಜಿನಿಯರ್ ಹಾಗೂ ಎಇ ವಿರುದ್ದ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: PM Modi Metro Ride: ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಯುವತಿಗೆ ಪ್ರಧಾನಿ ಮೋದಿ ಪ್ರಯಾಣಿಸಿದ ಮೆಟ್ರೋ ಚಲಾಯಿಸೋ ಭಾಗ್ಯ!
ಮಗನಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು
ಇಂದು ಬೆಳಗ್ಗೆ ಕೆಲಸಕ್ಕೆ ಬಂದಿದ್ದ ಮಗ ಸಾವನ್ನಪ್ಪಿದ್ದಾನೆ. ಗೌತಮ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ ಎಂದು ಮಗನ ಮೃತದೇಹವನ್ನು ತಬ್ಬಿ ಗೌತಮ್ ತಾಯಿ ಕಣ್ಣೀರಿಟ್ಟಿದ್ದಾರೆ.
ಮಗನಿಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದೇವು. ಹುಡುಗಿಯನ್ನು ಕೂಡ ನೋಡಿ ನಿಶ್ಚಿತಾಥ್ ಮಾಡಿಕೊಳ್ಳಬೇಕಿತ್ತು. ಆದರೆ ಇನ್ನು ದಿನಾಂಕ ನಿಗದಿ ಆಗಿರಲಿಲ್ಲ. ಈಗ ಮಗನೆ ನಮ್ಮೊಂದಿಗೆ ಇಲ್ಲ ಎಂದು ತಾಯಿ ಕಣ್ಣೀರಿಟ್ಟಿದ್ದು, ನೋಡುಗರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತ್ತು.
ಬೆಂಗಳೂರಲ್ಲಿ ಮುಂದುವರಿದ ಮೆಟ್ರೋ ಅದ್ವಾನ!
ಬೆಂಗಳೂರಲ್ಲಿ ಯಾವುದೇ ಕಾಮಗಾರಿ ಕೂಡ ನೋ ಗ್ಯಾರಂಟಿ, ನೋ ವಾರಂಟಿ, ನೋ ಕ್ವಾಲಿಟಿ ಶ್ಯೂರಿಟಿ ಎಂಬಂತಾಗಿದೆ. ಕಳೆದ ವಾರವಷ್ಟೇ ಬೆಂಗಳೂರಿನ ಹೆಚ್ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗ ಸಾವನ್ನಪ್ಪಿದ್ದರು. ಪಿಲ್ಲರ್ ಹೇಗೆ ಬಿತ್ತು ಅನ್ನೋದನ್ನು ತಿಳಿಯೋಕೆ ದೆಹಲಿ, ಹೈದ್ರಾಬಾದ್ನಿಂದ ತಜ್ಞರು ಬಂದಿದ್ದರು.
ಈಗ ರಾಜಧಾನಿಯಲ್ಲಿ (Bengaluru) ಇನ್ನೊಂದು ಮೆಟ್ರೋ (Namma Metro) ಅವಘಡ ನಡೆದಿದ್ದು, ದೊಡ್ಡನೆಕ್ಕುಂದಿಯಿಂದ (Doddanekundi) ಮಹದೇವಪುರದ ಕಡೆಗೆ ಹೋಗುವ ರಸ್ತೆಯಲ್ಲಿ ಕಾರಿನ ಮೇಲೆ ಇದ್ದಕ್ಕಿದ್ದಂತೆ ಮೆಟ್ರೋ ಕಾಮಗಾರಿ (Metro Work) ಭದ್ರತೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್ (Metro Barricade) ಬಿದ್ದಿದೆ.
ಬ್ಯಾರಿಕೇಡ್ ಬಿದ್ದ ರಭಸಕ್ಕೆ ಐ-10 ಕಾರು ಜಖಂಗೊಂಡಿದ್ದು, ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ಗಾಜು ಪುಡಿಪುಡಿಯಾಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಕಾರಿನ ಮಾಲೀಕರು ನೀಡಿದ ದೂರಿನ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ