ಸಚಿವ ಕೆಎಸ್​ ಈಶ್ವರಪ್ಪಗೆ ಜೀವ ಬೆದರಿಕೆ ಕರೆ; ಭದ್ರತೆ ಹೆಚ್ಚಳ

ತಮಗೆ ಜೀವ ಬೆದರಿಕೆ ಕರೆ ಬಂದಿರುವುದು ಸತ್ಯ. ನನ್ನ ಆಪ್ತ ಸಹಾಯಕ ಸಂತೋಷ್​ಗೆ ಕರೆ ಮಾಡಿ ಕೆಲವು ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ. ಆಗಂತುಕ ಹಿಂದಿ, ಉರ್ದು, ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದಾರೆ- ಕೆಎಸ್​ ಈಶ್ವರಪ್ಪ

news18-kannada
Updated:January 6, 2020, 11:36 AM IST
ಸಚಿವ ಕೆಎಸ್​ ಈಶ್ವರಪ್ಪಗೆ ಜೀವ ಬೆದರಿಕೆ ಕರೆ; ಭದ್ರತೆ ಹೆಚ್ಚಳ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಬೆಳಗಾವಿ (ಜ.6): ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪಗೆ ದುಷ್ಕರ್ಮಿಗಳು ಫೋನಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವರು ಯಾವುದೇ ಬೆದರಿಕೆಗೆ ಜಗ್ಗುವವನು ನಾನಲ್ಲ ಎಂದು ಉತ್ತರಿಸಿದ್ದಾರೆ. 

ಈ ಕುರಿತು ಮಾತನಾಡಿದ ಅವರು, ತಮಗೆ ಜೀವ ಬೆದರಿಕೆ ಕರೆ ಬಂದಿರುವುದು ಸತ್ಯ. ನನ್ನ ಆಪ್ತ ಸಹಾಯಕ ಸಂತೋಷ್​ಗೆ ಕರೆ ಮಾಡಿ ಕೆಲವು ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ. ಆಗಂತುಕ ಹಿಂದಿ, ಉರ್ದು, ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದಾರೆ. ಈ ಸಂಖ್ಯೆ ಮೂಲ ತಮಿಳುನಾಡಿನದು ಎಂದು ತಿಳಿದು ಬಂದಿದೆ. ಸಿಎಎ ಹಾಗೂ ಎನ್​ಆರ್​ಸಿ ಪರ ಮಾತನಾಡಿದರೆ 48 ಗಂಟೆಗಳಲ್ಲಿ ನಿಮ್ಮನ್ನು ಮುಗಿಸುತ್ತೇವೆ ಎಂದು ಎಚ್ಚರಿಸಿದರು.  ಆದರೆ, ನಾನು ಯಾವ ಬೆದರಿಕೆಗೂ ಹೆದರಲ್ಲ ಎಂದರು.

ದೇಶದ್ರೋಹಿ ಸಂಘಟನೆಗೆ ಬೆಂಬಲ ನೀಡುವುದು ತಪ್ಪು.  ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಅನ್ಯಾಯ. ಇದು ಈಶ್ವರಪ್ಪ ಧ್ವನಿ ಅಲ್ಲ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ಇದನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ. ಇಟಲಿಯಿಂದಾದರೂ ಬರಲು ಎಲ್ಲಿಂದ ಬಂದರೂ ನಾನು ಯೋಚಿಸುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ.  ಈ ಹಿಂದೆ ಕೂಡ ದುಬೈನಿಂದ ಜೀವ ಬೆದರಿಕೆ ಬಂದಿತು. ಆಗಲೂ ದೂರು ನೀಡಿದ್ದೆ ಎಂದರು.

ಇದನ್ನು ಓದಿ: ಮನೆ ಮನೆಗೆ ತೆರಳಿ ಸಿಎಎ ಕುರಿತು ಜಾಗೃತಿ ಅಭಿಯಾನಕ್ಕೆ ಮುಂದಾದ ಸೋಮಶೇಖರ್​ ರೆಡ್ಡಿ

ಬೆದರಿಕೆ ಕರೆ ಬಂದ ಕುರಿತು ಈಗಾಗಲೇ ಶಿವಮೊಗ್ಗ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಡ ಆಗ್ರಹಿಸಿದ್ದೇನೆ ಎಂದು ತಿಳಿಸಿದರು.

ಭದ್ರತೆ ಹೆಚ್ಚಳ: 

ಸಚಿವರಿಗೆ ಬೆದರಿಕೆ ಕರೆ ಬಂದ ದೂರು ದಾಖಲಾಗುತ್ತಿದ್ದಂತೆ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಸ್ಕಾರ್ಟ್​, ಗನ್​ಮ್ಯಾನ್​ ಜೊತೆಗೆ ಅಂಗರಕ್ಷಕ ಹಾಗೂ ಎಕ್ಸ್​ ಕಾಲಿಬರ್​ ಮೆಷಿನ್​ಗಳನ್ನು ಹೆಚ್ಚಿಸಲಾಗಿದೆ.
First published: January 6, 2020, 11:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading