HOME » NEWS » State » LIFE SCIENCE PARK TO BUILD IN BENGALURU GNR

ಬೆಂಗಳೂರಿನಲ್ಲಿ ಲೈಫ್​​ ಸೈನ್ಸ್ ಪಾರ್ಕ್​​​​​ ನಿರ್ಮಾಣ; 50 ಸಾವಿರ ಜನರಿಗೆ ಉದ್ಯೋಗ ಅವಕಾಶ - ಸಿಎಂ ಬಿಎಸ್​​ ಯಡಿಯೂರಪ್ಪ

ಲೈಫ್ ಸೈನ್ಸ್ ಪಾರ್ಕ್ ನಿರ್ಮಾಣವಾದರೆ ನಮ್ಮ ರಾಜ್ಯದ 300ಕ್ಕೂ ಹೆಚ್ಚು ಬಯೋ ಟೆಕ್ನಾಲಜಿ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ. ಅಲ್ಲದೇ ನಮ್ಮ ಬೆಂಗಳೂರು ಜೈವಿಕ ತಂತ್ರಜ್ಞಾನದಲ್ಲಿ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

news18-kannada
Updated:July 29, 2020, 9:19 PM IST
ಬೆಂಗಳೂರಿನಲ್ಲಿ ಲೈಫ್​​ ಸೈನ್ಸ್ ಪಾರ್ಕ್​​​​​ ನಿರ್ಮಾಣ; 50 ಸಾವಿರ ಜನರಿಗೆ ಉದ್ಯೋಗ ಅವಕಾಶ - ಸಿಎಂ ಬಿಎಸ್​​ ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ.
  • Share this:
ಆನೇಕಲ್(ಜು.29): ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಹಾಗೂ ನವ ಉದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂದು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಂಗಳೂರು ಲೈಫ್ ಸೈನ್ಸ್ ಪಾರ್ಕ್ ಭೂಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು.  ಸಿಎಂ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಭೂಮಿ ಪೂಜೆಗೆ ಚಾಲನೆ ನೀಡಿದ್ದಾರೆ. 

ಸುಮಾರು 80 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಲೈಫ್ ಸೈನ್ಸ್ ಪಾರ್ಕ್ ಒಟ್ಟು 5 ಸಾವಿರ ಕೋಟಿ ಮೊತ್ತದ ಪ್ರಾಜೆಕ್ಟ್ ಆಗಿದೆ. ಸರ್ಕಾರದಿಂದ 150 ಕೋಟಿ ಅನುಧಾನ ನೀಡಲಾಗಿದೆ. ಇದರಲ್ಲಿ 10 ಎಕರೆ ಜಾಗವನ್ನ ನವ ಉದ್ಯಮಗಳಿಗೆ ಮೀಸಲಿಡಲಾಗಿದೆ. 20 ಎಕರೆಯಲ್ಲಿ ಜೈವಿಕ ತಂತ್ರಜ್ಞಾನದ ಸಂಶೋಧನೆ ಹಾಗೂ ಅಭಿವೃದ್ದಿಗೆ ಬಳಸಿಕೊಳ್ಳಲಾಗುವುದು ಎಂದರು ಸಿಎಂ ಬಿ.ಎಸ್​​ ಯಡಿಯೂರಪ್ಪ.

ಇನ್ನೂ 52 ಎಕರೆ ಜಾಗದಲ್ಲಿ ಕೈಗಾರಿಕಾ ಕ್ಲಸ್ಟರ್ ನಿರ್ಮಾಣ ಮಾಡುವ ಮೂಲಕ ಬಯೋ ಟೆಕ್ನಾಲಜಿಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನವನ್ನ ಅಭಿವೃದ್ದಿಪಡಿಸಲಾಗುವುದು. ಈ ಲೈಫ್ ಸೈನ್ಸ್ ಪಾರ್ಕ್ ನಿರ್ಮಾಣವಾದರೆ ಸುಮಾರು 50 ಸಾವಿರ ಜನರಿಗೆ ಇದರಿಂದ ಉದ್ಯಾಗ ಅವಕಾಶ ಕಲ್ಪಿಸಬಹುದಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಲೈಫ್ ಸೈನ್ಸ್ ಪಾರ್ಕ್ ನಿರ್ಮಾಣವಾದರೆ ನಮ್ಮ ರಾಜ್ಯದ 300ಕ್ಕೂ ಹೆಚ್ಚು ಬಯೋ ಟೆಕ್ನಾಲಜಿ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ. ಅಲ್ಲದೇ ನಮ್ಮ ಬೆಂಗಳೂರು ಜೈವಿಕ ತಂತ್ರಜ್ಞಾನದಲ್ಲಿ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ಕೊರೋನಾ ಕೇರ್ ವಿಷಯ ಕುರಿತಾಗಿ ಈಗಾಗಲೇ 10000 ಬೆಡ್​ಗಳ ವ್ಯವಸ್ಥೆ ಕಲ್ಪಿಸಿದ್ದೇವೆ. ಮುಂದೆ ಸುಮಾರು‌ 30000 ಬೆಡ್​ಗಳ ವ್ಯವಸ್ಥೆ ಮಾಡುವಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಕೊರೋನಾ ಟೆಸ್ಟ್ ಸಹ ಹೆಚ್ಚಿಸಲಾಗುತ್ತಿದೆ. ಜೊತೆಗೆ ಆಸ್ಪತ್ರೆ ಅವಶ್ಯಕತೆ ಕಡಿಮೆ ಮಾಡುವಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19​: ಒಂದೇ ದಿನ 5503 ಕೇಸ್​​, 1.12 ಲಕ್ಷ ದಾಟಿದ ಸೋಂಕಿತರ ಸಂಖ್ಯೆಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಹೋರಾಟ ವಿಚಾರವಾಗಿ ಮಾತನಾಡಿದ ಅಶ್ವಥ್ ನಾರಾಯಣ್ ಜೆಡಿಎಸ್ ಗೆ ಜನರ ಮೇಲೆ ಕಾಳಜಿ ಇಲ್ಲ. ಕಾಳಜಿ ಇದ್ದಿದ್ರೆ ಹೋರಾಟ ಮಾಡ್ತೀವಿ ಅಂತಿರಲಿಲ್ಲ. ಸರ್ಕಾರ ದಿಟ್ಟತನದ ನಿರ್ಧಾರ ಕೈಗೊಂಡಿದೆ. ಇದುವರೆಗೆ ರಾಜ್ಯದ ಜನ ಭ್ರಷ್ಟಾಚಾರ ನೋಡಿದ್ದಾರೆ. ನಾವು ಬಂದ ಮೇಲೆ ಈ ಕಾಯ್ದೆಯಲ್ಲಿ ಸುಧಾರಣೆ ತಂದಿದ್ದೇವೆ. ನಮ್ ಸರ್ಕಾರ ಬಂಡವಾಳ ಹೂಡೋರಿಗೆ ನೆರವು ಕೊಡುತ್ತೆ. ಕಿರುಕುಳ ಕೊಟ್ಟು ಕಳಿಸಲ್ಲ.ಇಂಥ ರಾಜಕೀಯ ಪ್ರೇರಿತ ಹೇಳಿಕೆ ಸರಿಯಲ್ಲ. ಜೆಡಿಎಸ್ ರಾಜಕೀಯ ಪ್ರೇರಿತ ರಾಜಕಾರಣ ಮಾಡಿತ್ತಿದೆ. ಜನಕ್ಕೆ ಇವರ ರಾಜಕಾರಣ ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ಇದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
Published by: Ganesh Nachikethu
First published: July 29, 2020, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories