ತುತ್ತಿನ ಬುತ್ತಿ ತುಂಬಿಸುವ ಸ್ವಾತಂತ್ರ್ಯ ದಿನದ ಧ್ವಜಗಳು!

73 independence Day: ಸ್ವಾತಂತ್ರ್ಯದಿನ ದೇಶಪ್ರೇಮ ಮೂಡಿಸುವ ಜೊತೆಗೆ ಕೆಲವು ವರ್ಗದವರಿಗೆ ಮೂರುದಿನಗಳ ಮಟ್ಟಿಗೆ ಉದ್ಯೋಗ ಕೊಡುವ ಹಬ್ಬ ಕೂಡ ಹೌದು. ಸ್ವಾತಂತ್ರ್ಯದಿನಕ್ಕೆ ಇನ್ನೇನು ನಾಲ್ಕು ಐದು ದಿನಗಳಿದೆ ಎನ್ನುವ ಸಂದರ್ಭದಲ್ಲಿ ರಸ್ತೆ ಬದಿ, ಸಿಗ್ನಲ್​ಗಳಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತ ಹೊಟ್ಟೆ ಹೊರೆದು ಕೊಳ್ಳುವ ಒಂದು ವರ್ಗ ಕೂಡ ಇದೆ.

Seema.R | news18-kannada
Updated:August 15, 2019, 7:48 AM IST
ತುತ್ತಿನ ಬುತ್ತಿ ತುಂಬಿಸುವ ಸ್ವಾತಂತ್ರ್ಯ ದಿನದ ಧ್ವಜಗಳು!
ಬಾವುಟ ಮಾರುತ್ತಿರುವ ಹುಡುಗ
  • Share this:
ಸೀಮಾ. ಆರ್​

ಬೆಂಗಳೂರು (ಆ.15): ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ಅಲ್ಲಿ ಒಂದು ಸಂಭ್ರಮ ಇರುತ್ತದೆ. ರಾಷ್ಟ್ರೀಯ ಹಬ್ಬವಾದ ಇಂದು ಅನೇಕರ ದೇಶ ಭಕ್ತಿಕೂಡ ಜಾಗೃತಗೊಳ್ಳುತ್ತದೆ. ಎಲ್ಲಿ ನೋಡಿದರಲ್ಲಿ ರಾಷ್ಟ್ರಧ್ವಜ, ಭಾರತದ ಭೂಪಟಗಳು ರಾರಾಜಿಸುತ್ತದೆ.

ಸ್ವಾತಂತ್ರ್ಯ ದಿನದಂದು ತ್ರಿವರ್ಣಧ್ವಜದ ರಾಷ್ಟ್ರಧ್ವಜವನ್ನು ಕೊಳ್ಳಲು ಮುಗಿಬೀಳುವವರ ಸಂಖ್ಯೆ ಕೂಡ ಹೆಚ್ಚು. ಒಂದು ದಿನದ ಮಟ್ಟಿನ ದೇಶ ಪ್ರೇಮ ಬಿಂಬಿಸುವ ಇವರು ಅನೇಕರ ಜೀವನೋಪಯಕ್ಕೆ ದಾರಿಯೂ ಆಗಿರುತ್ತಾರೆ.

ಸ್ವಾತಂತ್ರ್ಯದಿನ ದೇಶಪ್ರೇಮ ಮೂಡಿಸುವ ಜೊತೆಗೆ ಕೆಲವು ವರ್ಗದವರಿಗೆ ಮೂರುದಿನಗಳ ಮಟ್ಟಿಗೆ ಉದ್ಯೋಗ ಕೊಡುವ ಹಬ್ಬ ಕೂಡ ಹೌದು. ಸ್ವಾತಂತ್ರ್ಯದಿನಕ್ಕೆ ಇನ್ನೇನು ನಾಲ್ಕು ಐದು ದಿನಗಳಿದೆ ಎನ್ನುವ ಸಂದರ್ಭದಲ್ಲಿ ರಸ್ತೆ ಬದಿ, ಸಿಗ್ನಲ್​ಗಳಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತ ಹೊಟ್ಟೆ ಹೊರೆದು ಕೊಳ್ಳುವ ಒಂದು ವರ್ಗ ಕೂಡ ಇದೆ.

ದಿನವೀಡಿ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಪ್ರತಿ ವಾಹನದ ಮುಂದೆ ಹೋಗಿ ತ್ರಿವರ್ಣ ಧ್ವಜ ಮಾರಾಟ ಮಾಡುವ ಇವರಿಗೆ ಇದು ಸುಗ್ಗಿಯ ಕಾಲ. ದಿನವೀಡಿ ಬಿಸಿಲು, ಮಳೆ, ಧೂಳಿನಲ್ಲಿ ಅಲೆದು ಸಾವರರಿಂದ ಬೈಸಿಕೊಂಡು ಮಾರಾಟ ಮಾಡುವ ಇವರ ಬದು ನಿಂತಿರುವುದು ಇದೇ ನಮ್ಮ ತ್ರಿವರ್ಣ ಧ್ವಜದ ಮೇಲೆ.

ತುತ್ತಿನ ಚೀಲ ಹೊರೆಯುವ ಸಲುವಾಗಿ ಈ ಬಾರಿ ರಾಷ್ಟ್ರಧ್ವಜದ ಮಾರಾಟ ಮಾಡಲು ಬೆಂಗಳೂರಿನ ಮಾಣಿಕ್​ ಷಾ ಪರೇಡ್​ ಮೈದಾನದ ಮುಂದೆ ಅನೇಕರು ದೂರದೂರಿನಿಂದ ಬಂದಿದ್ದಾರೆ. ಇದರಲ್ಲೊಂದು ಚಿಂತಾಮಣಿ ಮೂಲಕ ಕುಟುಂಬ ಕೂಡ. ಅಲ್ಲಿ ಮಳೆಯಿಲ್ಲದೆ ಬರಗಾಲ ಆವರಿಸಿದೆ. ಯಾವುದೇ ಕೆಲಸವಿಲ್ಲ. ಇಲ್ಲಿ ಒಂದು ವಾರ ಉದ್ಯೋಗ ಸಿಗುತ್ತದೆ ಎಂದು ಬಂದಿದ್ದೇವೆ ಎನ್ನುತ್ತಾರೆ ಆ ಕುಟುಂಬ.

ಈ ಕುರಿತು ವಿವರ ನೀಡಿದ ಅವರು, ಮಾರುಕಟ್ಟೆಯಿಂದ ಧ್ವಜ ಪರಿಕರಗಳನ್ನು ತಂದು ದಿನವೀಡಿ ನಾವು  ರಸ್ತೆ ಸಿಗ್ನಲ್​ಗಳಲ್ಲಿ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ 200, 300 ರೂ ಲಾಭಾವಾಗುವ ಮಟ್ಟಿಗೆ ನಾವು ವ್ಯಾಪಾರ ಮಾಡುತ್ತೇವೆ ಎನ್ನುವ ಇವರು ರಸ್ತೆ ಬದಿಯಲ್ಲಿಯೇ ಮಲಗಿ ಕಾಲತಳ್ಳುತ್ತಾರಂತೆ.

ಪೊಲೀಸರ ಭಯದ ನಡುವೆ ಮಾತನಾಡಲು ಅಂಜಿದ ಇವರು, ಈ ಕುರಿತು ಭಯದಿಂದಲೇ ಉತ್ತರ ನೀಡಿದರು. ತನ್ನ ನಾಲ್ಕು ಮಕ್ಕಳನ್ನು ಹೊತ್ತುಕೊಂಡು ಮಾರಾಟದಲ್ಲಿ ತೊಡಗಿದ ಕೆ.ಆರ್​ ಪುರದ ಮುನಿಯಮ್ಮ ಎಂಬಾಕೆ  ಕೂಲಿ ಕೆಲಸಕ್ಕೆ ಹೋದರೆ ಮೈಮುರಿದು ದುಡಿಯುವ ನಮಗೆ ಅದೇ ಕೂಲಿಯ ದುಡ್ಡು ಈ ವ್ಯಾಪಾರದಿಂದ ಸಿಗುತ್ತದೆ. ನಾನು ಚಿಕ್ಕವಳಿಂದಾಗಿನಿಂದಲೂ ರಾಷ್ಟ್ರೀಯ ಹಬ್ಬದ ಸಮಯದಲ್ಲಿ ಇಲ್ಲಿ ಬಂದು ವ್ಯಾಪಾರ ಮಾಡುತ್ತಿದ್ದೇವೆ. ಇಲ್ಲಿ ಮಾರಿ ಉಳಿದ ಬಾವುಟಗಳನ್ನು ಜೋಪಾನವಾಗಿ ಎತ್ತಿಟ್ಟು ಮುಂದಿನ ವರ್ಷ ಮಾರಾಟ ಮಾಡುತ್ತೇವೆ.

ಒಂದು ಬಾವುಟಕ್ಕೆ 5ರೂ ಲಾಭಾ ಪಡೆದು ಮಾರುತ್ತೇವೆ. ದೊಡ್ಡ ಬಾವುಟ 30ರೂಗೆ ಮಾರಾಟ ಮಾಡಿದರೆ, ಚಿಕ್ಕ ಬಾವುಟ 10ರೂಗೆ ಮಾರಾಟ ಮಾಡುತ್ತೇವೆ. ಈಗ ಪ್ಲಾಸ್ಟಿಕ್​ ಬಾವುಟ ಮಾರುವುದಿಲ್ಲವಾದರಿಂದ ಇವುಗಳನ್ನು ಜೋಪಾನವಾಗಿ ಸುರಕ್ಷೆ ಮಾಡುತ್ತೇವೆ ಎನ್ನುತ್ತಾರೆ.

ಪೊಲೀಸರು ಕೆಲವೊಮ್ಮೆ ನಮಗೆ ಬೈಯುವುದುಂಟು. ಚಿಕ್ಕ ಮಕ್ಕಳು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಜೈಲಿಗೂ ಕೂಡ ಹಾಕಿದ್ದರು ಎಂದು ತಮ್ಮ ಬಗ್ಗೆ ಅಳುಕಿನಿಂದಲೇ ಬಾಯ್ಬಿಟ್ಟರು.

ಇನ್ನು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸಂಜೆ ಬಾವುಟ ಮಾರುತ್ತಿದ್ದ ಇಬ್ಬರು ಅಣ್ಣ ತಂಗಿಯರು ತಾವು ಶಾಲೆ ಮುಗಿಸಿ ಸಂಜೆ ಈ ಕಾರ್ಯದಲ್ಲಿ ತೊಡಗುತ್ತೇವೆ. ಪೋಷಕರು ನಮಗೆ ಇದನ್ನು ಮಾರಾಟ ಮಾಡಲು ಕಳುಹಿಸಿದ್ದಾರೆ. ಅವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಸಹಾಯವಾಗಲಿ ಎಂದು ನಾವು ಈ ಕೆಲಸಕ್ಕೆ ಬಂದಿದ್ದೇವೆ. ಇದರಿಂದ ನಮಗೆ ಓದಿಗೆ ತೊಂದರೆಯಾಗುವುದಿಲ್ಲ. ಕಾರಣ ನಾವು ಮೂರುದಿನ ಮಾತ್ರ ಈ ಉದ್ಯೋಗದಲ್ಲಿ ತೊಡಗುತ್ತೇವೆ ಎಂದರು

ಒಟ್ಟಿನಲ್ಲಿ ರಾಷ್ಟ್ರೀಯ ಹಬ್ಬವಾದ ಇಂದು ದೇಶದ ಜನರು ಸಂಭ್ರಮದಲ್ಲಿ ಮುಳುಗುತ್ತಿದ್ದಾರೆ. ಈ ವರ್ಗದ ಜನರಿಗೂ ಕೂಡ ಈ ದಿನಗಳು ದುಡಿಮೆಯ ಹಬ್ಬವಾಗಿ ಬದುಕು ಕಟ್ಟಿಕೊಟ್ಟಿದೆ.

https://youtu.be/ayBAqQknEZQ
First published:August 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ