ವೀರಪ್ಪನ್​​​ನಿಂದ ಹುತಾತ್ಮರಾದ ಪೊಲೀಸರ ಸ್ಮರಣಾರ್ಥ ರಾಮಾಪುರ ಠಾಣೆಯನ್ನು ಸ್ಮಾರಕವನ್ನಾಗಿಸಲು ಡಿಜಿಪಿಗೆ ಪತ್ರ

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಹುತಾತ್ಮ ಪೊಲೀಸರ ಬಗ್ಗೆ ಭಾವನಾತ್ಮಕ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್ , ವೀರಪ್ಪನ್ ವಿರುದ್ದ ಹೋರಾಡಿ ಬಲಿದಾನಗೈದ ಐದು ಮಂದಿ ಪೊಲೀಸರ ಸ್ಮಾರಕ ನಿರ್ಮಾಣ ಕಾರ್ಯವನ್ಮು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ

ಶೀಥಿಲಗೊಂಡಿರುವ
ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಅರ್

ಶೀಥಿಲಗೊಂಡಿರುವ ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಅರ್

  • Share this:
ಚಾಮರಾಜನಗರ (ಫೆ.14) : ಜಿಲ್ಲೆಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ದ ಹೋರಾಡಿ ಮಡಿದ ಐವರು ಪೊಲೀಸರ ಸ್ಮಾರಕ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜ್ಯ ಪೊಲೀಸ್​​ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನೆ ಹತ್ಯೆಗೈದ ಕಾಡುಗಳ್ಳ ವೀರಪನ್ ನ ಅಟ್ಟಹಾಸಕ್ಕೆ ಈಗಲು ಸಾಕ್ಷಿಯಾಗಿ ನಿಂತಿದೆ. ರಾಮಾಪುರ ಪೊಲೀಸ್ ಠಾಣೆ. 1992 ರ ಮೇ 21 ರ ಮಧ್ಯರಾತ್ರಿ ತನ್ನ ಸಹಚರರೊಂದಿಗೆ ನುಗ್ಗಿದ್ದ ನರಹಂತಕ ವೀರಪ್ಪನ್. ಕರ್ತವ್ಯ ನಿರತ ಪೊಲೀಸರ ಮೇಲೆ ಗುಂಡಿನ ಮಳೆಗೆರೆದು ಶಸ್ತ್ರಾಸ್ತ್ರ ಹೊತ್ತೊಯ್ದಿದ್ದ. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಇಳಂಗೋವನ್, ಗೋವಿಂದರಾಜು, ಸಿದ್ದರಾಜು, ರಾಚಪ್ ಹಾಗೂ ಪ್ರೇಮ್ ಕುಮಾರ್ ಎಂಬ ಐವರು ಪೊಲೀಸರು ಕಾಡುಗಳ್ಳನ ಅಟ್ಟಹಾಸಕ್ಕೆ ಬಲಿಯಾಗಿದ್ದರು.

ರಾಮಾಪುರದ ಈ ಪೊಲೀಸ್ ಠಾಣೆಯ ಶಿಥಿಲ ಕಟ್ಟಡ ವೀರಪ್ಪನ್ ನ ಕ್ರೌರ್ಯ ನೆನಪಿಸುತ್ತಿದೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವರೂ ಆದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹತ್ಯೆಗೈದ ಪೊಲೀಸರನ್ನು ನೆನೆದು ಮಮ್ಮಲ ಮರುಗಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಚಿವರು ಬರೆದ ಪತ್ರ


ವೀರಪ್ಪನ್ ನ ಕ್ರೌರ್ಯದ ವಿರುದ್ದ ಹೋರಾಡಿ ಮಡಿದ ಆ ಪೊಲೀಸರ ನೆನಪು ಜೀವಂತವಾಗಿರಬೇಕು, ಮುಂದಿನ ಪೀಳಿಗೆಯು ಅವರ ಬಲಿದಾನವನ್ನು ಸ್ಮರಿಸಬೇಕು ಎಂಬುದು ಸಚಿವರ ಆಶಯವಾಗಿದೆ. ಈ ಹಿನ್ನಲೆಯಲ್ಲಿ ರಾಮಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಆ ಐದು ಮಂದಿ ಪೊಲೀಸರ ನೆನಪಿನ ಸ್ಮಾರಕ ನಿರ್ಮಿಸಲು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ

ಇದನ್ನೂ ಓದಿ :  ಓದಿದ್ದು ಇಂಜಿನಿಯರಿಂಗ್ - ಮಾಡೋದು ಸೋಡಾ ಮಾರುವ ಕೆಲಸ - ಈತನ ದಿನದ ಗಳಿಕೆ ಎಷ್ಟು ಗೊತ್ತಾ..?

ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಹುತಾತ್ಮ ಪೊಲೀಸರ ಬಗ್ಗೆ ಭಾವನಾತ್ಮಕ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್ , ವೀರಪ್ಪನ್ ವಿರುದ್ದ ಹೋರಾಡಿ ಬಲಿದಾನಗೈದ ಐದು ಮಂದಿ ಪೊಲೀಸರ ಸ್ಮಾರಕ ನಿರ್ಮಾಣ ಕಾರ್ಯವನ್ಮು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ

ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ನೆನಪಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಈ ಕಾರಣದಿಂದ ಅವರ ನೆನಪುಗಳು ಇಂದಿಗೂ ಭಾವನಾತ್ಮಕ ವಾದ ಸಾಮಾಜಿಕ ಮನಸ್ಥಿತಿಯನ್ನು ಜೀವಂತವಾಗಿಟ್ಟಿವೆ. ಅದೇ ರೀತಿಯಲ್ಲಿ ಈ ಐದು ಮಂದಿ ಪೊಲೀಸರ ನೆನಪಿನ ಸ್ಮಾರಕವನ್ಮು ನಿರ್ಮಿಸಿದರೆ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಬಹುದು ಅದಾಗಲೇ ನಾವು ಸಾಮಾಜಿಕವಾಗಿ ಅವರ ಋಣವನ್ನು ಒಂದಷ್ಟಾದರು ತೀರಿಸಲು ಸಾಧ್ಯ ಎಂದಿದ್ದಾರೆ.

(ವರದಿ: ಎಸ್.ಎಂ. ನಂದೀಶ್)
First published: