ಬೆಂಗಳೂರು (ಫೆ.28): ಉಕ್ರೇನ್ (Ukraine) ಹಾಗೂ ರಷ್ಯಾ (Russia) ನಡುವೆ ಯುದ್ಧ(War) ಮುಂದುವರಿದಿದೆ. ಉಕ್ರೇನ್ನಲ್ಲಿ ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ದೇಶದಿಂದ ಉಕ್ರೇನ್ಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಮರಳಿ ತವರಿಗೆ ಬರಲಾಗದೆ ಪರದಾಡುತ್ತಿದ್ದಾರೆ. ಡಾಕ್ಟರ್ ಆಗುವ ಕನಸು ಕಂಡು ಉಕ್ರೇನ್ಗೆ ಹೋಗಿದ್ದವರು ಜೀವ ಉಳಿಸಿಕೊಂಡು ನಮ್ಮ ದೇಶಕ್ಕೆ ವಾಪಸ್ ಆದ್ರೆ ಸಾಕು ಅಂತಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಆಪರೇಷನ್ ಗಂಗಾ (Operation Ganga) ಹೆಸರಲ್ಲಿನಲ್ಲಿ ಕಾರ್ಯಾಚರಣೆಗಿಳಿದಿದ್ದು, ಹಲವು ಭಾರತೀಯ ವಿದ್ಯಾರ್ಥಿಗಳನ್ನ ಏರ್ಲಿಫ್ಟ್ (Airlift) ಮಾಡಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (H.D Devegowda) ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿಗೆ ದೇವೇಗೌಡರಿಂದ ಪತ್ರ
ರಷ್ಯಾದ ಆಕ್ರಮಣದ ನಂತರ ಉಕ್ರೇನ್ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ ಬರೆದಿದ್ದಾರೆ. ರಾಜ್ಯದ ನೂರಾರು ವಿದ್ಯಾರ್ಥಿಗಳು MBBS ಓದಲು ಉಕ್ರೇನ್ಗೆ ತೆರಳಿದ್ರು, ಅವರಲ್ಲಿ ಕೆಲವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇನ್ನು ಕೆಲವರು ಅಲ್ಲೇ ಸಿಲುಕಿ ಪರದಾಡುತ್ತಿದ್ದಾರೆ. ಇತ್ತ ಪೋಷಕರು ಕೂಡ ಕಂಗಾಲಾಗಿದ್ದಾರೆ.
ಉಕ್ರೇನ್ನಲ್ಲಿ ವ್ಯಾಸಂಗ ಮಾಡಲು ತೆರಳಿದ್ದ ವಿದ್ಯಾರ್ಥಿಗಳು
ಉಕ್ರೇನ್ನಲ್ಲಿ ಒಟ್ಟು 406 ಕನ್ನಡಿಗ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬೆಂಗಳೂರು ನಗರ 135, ಮೈಸೂರು 28, ಬಾಗಲಕೋಟೆ 24, ದಕ್ಷಿಣ ಕನ್ನಡ 18, ವಿಜಯಪುರ 18, ತುಮಕೂರಿನವರು 17, ಬೆಂಗಳೂರು ಗ್ರಾಮಾಂತರ 18, ಹಾಸನ ಜಿಲ್ಲೆಯವರು 13, ರಾಯಚೂರು 15, ಕೊಡಗು ಜಿಲ್ಲೆಯ 12 ವಿದ್ಯಾರ್ಥಿಗಳು, ಬೆಳಗಾವಿ 12, ಹಾವೇರಿ 10, ಕೋಲಾರದ 9 ವಿದ್ಯಾರ್ಥಿಗಳು, ದಾವಣಗೆರೆ 9, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 8, ಉಡುಪಿ 7, ಬೀದರ್ 6, ಬಳ್ಳಾರಿ 6, ಚಿತ್ರದುರ್ಗದ ಐವರು
ಇದನ್ನೂ ಓದಿ: Ukraineನಲ್ಲಿ ಪರದಾಡುತ್ತಿದ್ದಾರೆ ರಾಜ್ಯದ ವಿದ್ಯಾರ್ಥಿಗಳು! "Please Help Me..." ಅಂದ್ರೆ ಕೇಳೋರಾರು?
ಶಿವಮೊಗ್ಗ 4, ಕಲಬುರಗಿ 4, ಧಾರವಾಡ 4, ಮಂಡ್ಯ 3, ಚಾಮರಾಜನಗರ 4, ಕೊಪ್ಪಳ 3, ರಾಮನಗರ 2, ಗದಗ 2, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ 406 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿ ಕನ್ನಡಿಗರ ಪರದಾಟ
ಇನ್ನು ಉಕ್ರೇನ್ನಲ್ಲಿ ಸಿಲುಕಿದ್ದ 30 ಕನ್ನಡಿಗರ ಏರ್ಲಿಫ್ಟ್ ಮಾಡಲಾಗಿದ್ದು ರಾತ್ರಿ 8 ಗಂಟೆಯವರೆಗೆ 30 ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳಿಗೆ ನೆರವಾಗಲು ದೆಹಲಿ, ಮುಂಬೈ ಏರ್ಪೋರ್ಟ್ಗಳಲ್ಲಿ ಫೆಸಿಲಿಟೇಷನ್ ಸೆಂಟರ್ ತೆರೆಯುವಂತೆ ಸಿಎಂರಿಂದ ಸೂಚನೆ ನೀಡಲಾಗಿದೆ. ದೆಹಲಿ, ಮುಂಬೈ ನಿಲ್ದಾಣಗಳಲ್ಲಿ ನೋಡಲ್ ಆಫೀಸರ್ಸ್ ನೇಮಕ ಮಾಡಲಾಗಿದೆ. ದೆಹಲಿ ಏರ್ಪೋರ್ಟ್ನ ನೋಡಲ್ ಅಧಿಕಾರಿಗಳಾಗಿ ದೆಹಲಿಯ ಕರ್ನಾಟಕ ಭವನದ ಸ್ಥಾನೀಯ ಆಯುಕ್ತರ ಕಚೇರಿಯ ಮೂವರು ಮ್ಯಾನೇಜರ್ನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: Russia-Ukraine War: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?
ಅನಂತ, ವೆಂಕಟೇಶ್, ಜಗದೀಶ್ರನ್ನು ಸರ್ಕಾರ ನೇಮಿಸಿದೆ. ಮುಂಬೈ ಏರ್ಪೋರ್ಟ್ನಲ್ಲಿ ನೋಡಲ್ ಅಧಿಕಾರಿಗಳಾಗಿ ನಾಲ್ವರನ್ನು ನೇಮಿಸಿದ್ದು ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಎಂಡಿ ಪ್ರವೀಣ್ ಬಾಗೇವಾಡಿ, ಕುಮಾರಕೃಪಾ ಅತಿಥಿ ಗೃಹ ಮ್ಯಾನೇಜರ್ ಪ್ರೇಮ್ ಕುಮಾರ್, ಡಿಪಿಎಆರ್ ಅಧೀನ ಕಾರ್ಯದರ್ಶಿ ವಿರೂಪಾಕ್ಷಿ ಹಾಗೂ ಬೆಳಗಾವಿ ಎಸಿ ರವಿ ಕರಿಲಿಂಗಣ್ಣವರ್ ನೇಮಿಸಲಾಗಿದೆ.
ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಸಚಿವ ಆರ್. ಅಶೋಕ್
ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಒಂದೇ ವಿಮಾನದಲ್ಲಿ ಬೆಂಗಳೂರು ಏರ್ ಪೋರ್ಟ್ಗೆ ಬಂದಿಳಿದರು, ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್.ಅಶೋಕ್ ಸ್ವಾಗತಿಸಿದರು. ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ, ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ಬಳಿಕ ಏರ್ಪೋರ್ಟ್ ಲಾಂಜ್ನಲ್ಲೇ ವಿದ್ಯಾರ್ಥಿಗಳಿಗೆ ತಿಂಡಿ, ಕಾಫಿ, ಟೀ ವ್ಯವಸ್ಥೆ ಮಾಡಲಾಗಿತ್ತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ