• Home
  • »
  • News
  • »
  • state
  • »
  • Chamarajanagar: 'ದೇವರೇ ನನ್ನ ಮೂರ್ತಿ ಬಿಟ್ಟು ಬೇರೆ ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು'; ದೇವರ ಹುಂಡಿಯಲ್ಲಿ ಪತ್ರ ಪತ್ತೆ

Chamarajanagar: 'ದೇವರೇ ನನ್ನ ಮೂರ್ತಿ ಬಿಟ್ಟು ಬೇರೆ ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು'; ದೇವರ ಹುಂಡಿಯಲ್ಲಿ ಪತ್ರ ಪತ್ತೆ

ವೈರಲ್ ಪತ್ರ

ವೈರಲ್ ಪತ್ರ

ಹುಂಡಿ ಎಣಿಕೆ ಕಾರ್ಯ ಮಾಡುವ ಸಂದರ್ಭದಲ್ಲಿ ಪತ್ರ ಸಿಕ್ಕಿದ್ದು, ಯುವತಿ ತಾನು ಪ್ರೀತಿ ಮಾಡಿದ ಯುವಕನೊಂದಿಗೆ ಮದುವೆಯಾಗುವ ಆಸೆಯೊಂದಿಗೆ ದೇವರಿಗೆ ಪ್ರಾರ್ಥನೆ ಮಾಡಿ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ ಎನ್ನಲಾಗಿದೆ.

  • Share this:

ಚಾಮರಾಜನಗರ: ದೇವರೇ ನನ್ನ "ಮೂರ್ತಿ" ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರುವ ಅಪರೂಪದ ಪತ್ರ ಸಖತ್​ ವೈರಲ್​ ಆಗುತ್ತಿದೆ. ಹೌದು, 'ದೇವರೇ ನನ್ನ ಮೂರ್ತಿ ಬಿಟ್ಟು ಬೇರೆ ಯಾರು ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು' ಎಂದು ಪತ್ರದಲ್ಲಿ ಬರೆದು ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಗೆ ಹಾಕಿ ದೇವರ ಮೊರೆ ಹೋಗಿದ್ದಾರೆ. ಹುಂಡಿ ಎಣಿಕೆ ಕಾರ್ಯ ಮಾಡುವ ಸಂದರ್ಭದಲ್ಲಿ ಪತ್ರ ಸಿಕ್ಕಿದ್ದು, ಯುವತಿ ತಾನು ಪ್ರೀತಿ ಮಾಡಿದ ಯುವಕನೊಂದಿಗೆ ಮದುವೆಯಾಗುವ ಆಸೆಯೊಂದಿಗೆ ದೇವರಿಗೆ ಪ್ರಾರ್ಥನೆ ಮಾಡಿ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ ಎನ್ನಲಾಗಿದೆ.


ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಸ್ಥಾನದ ದೇವತೆಗೆ ಪ್ರೇಮಿಯೊಬ್ಬರು ಹರಕೆ ಕಟ್ಟಿಕೊಂಡು ಚೀಟಿಯೊಂದರಲ್ಲಿ ತನ್ನ ಹರಕೆಯನ್ನು ಬರೆದು ಹುಂಡಿಗೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ, ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಸಿಕ್ಕಿತ್ತು. ಇದರ ಬೆನ್ನಲ್ಲೇ ಸದ್ಯ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ಪತ್ತೆಯಾಗಿದೆ.


ಇದನ್ನೂ ಓದಿ: Nanjanagudu: ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಹುಂಡಿ ಎಣಿಕೆ, 2.40 ಕೋಟಿ ರೂ. ಸಂಗ್ರಹ


ಇಷ್ಟೇ ಅಲ್ಲದೇ, ಈ ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಪತ್ರವನ್ನೂ ವ್ಯಕ್ತಿಯೊಬ್ಬ ಹುಂಡಿಗೆ ಹಾಕಿದ್ದ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಅಲ್ಲದೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆಯಲ್ಲಿ ಒಟ್ಟು 7,61,641 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಕಾಣಿಕೆ ಜೊತೆ ಸಿಕ್ಕ ಕೆಲವು ಪತ್ರಗಳು ಭಾರೀ ಸಂಚಲನ ಸೃಷ್ಟಿಸಿದ್ದವು.


ಹಿಂದೂ ಪರ ಸಂಘಟನೆಗಳ ಪ್ರತಿಭಟನೆ


ದೇವಾಲಯ ತೆರವಿಗೆ ಹಿಂದೂ ಪರ ಸಂಘಟನೆಗಳ ವಿರೋಧ


ಕಲಬುರಗಿ ‌ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿರುವ ಬಾಲ ಹನುಮಾನ್ ದೇವಸ್ಥಾನ ತೆರವಿಗೆ ಮುಂದಾದ ಕಲಬುರಗಿ ರೈಲ್ವೆ ಇಲಾಖೆ ಮುಂದಾಗಿದ್ದು, ಸುಮಾರು ಕಳೆದ 60 ವರ್ಷದ ಹಿಂದೆ ಆರ್‌ಪಿಎಫ್ ಕಚೇರಿ ಬಳಿ ಸ್ಥಾಪಿತವಾಗಿರುವ ದೇವಸ್ಥಾನ ತೆರವು ಮಾಡುವುದನ್ನು ಹಿಂದೂ ಪರ ಸಂಘಟನೆಗಳು ವಿರೋಧ ಮಾಡಿವೆ. ದೇವಸ್ಥಾನ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲೇ ಮಂಟಪ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಂಟಪ ತೆರವಿಗೆ ರೈಲ್ವೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.


ಅಧಿಕಾರಿಗಳ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ ಹೊರ ಹಾಕಿದ್ದು, ಸ್ಥಳಕ್ಕೆ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರೈಲ್ವೆ ಇಲಾಖೆ ಐಡಬ್ಲ್ಯೂ ಅಧಿಕಾರಿ ಸಂತೋಷ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದು ಅಧಿಕಾರಿಗಳು ವಿವಾದಕ್ಕೆ ಕಾರಣರಾಗಿದ್ದರು. ಸದ್ಯ ಸ್ಥಳದಲ್ಲಿ ಕಲಬುರಗಿ ನಗರ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.


ಇದನ್ನೂ ಓದಿ: Champa Shashti 2022: ಸುಬ್ರಹ್ಮಣ್ಯ ದೇವರ ಬೆಳ್ಳಿ ರಥೋತ್ಸವ, ದೇವಸ್ಥಾನ ಪ್ರದಕ್ಷಿಣೆ ಹಾಕಿದ ಗರುಡ!


ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ


ಮಂಕಿ ಕ್ಯಾಪ್ ಧರಿಸಿ ಅಫಜಲಪುರ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ


ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಸ್ಥಾನ ಕಳ್ಳತನ ನಡೆದಿದ್ದು, ಖಧೀಮರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಕಿ ಕ್ಯಾಪ್ ಹಾಕಿಕೊಂಡು ಇಬ್ಬರು ಕಳ್ಳರು ಗರ್ಭ ಗುಡಿಯೊಳಗೆ ಪ್ರವೇಶ ಮಾಡಿದ್ದಾರೆ.


ದೇವಿಯ ಮೈಮೇಲಿದ್ದ ಚಿನ್ನಾಭರಣ ದೋಚಿ ಹೊರಬಂದ ಕಳ್ಳರು, ನಂತರ ಆವರಣದಲ್ಲಿನ ಹುಂಡಿಗೆ ಕನ್ನ ಹಾಕಿದ್ದಾರೆ. ಸುಮಾರು 7 ಲಕ್ಷ 90 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್​​​​​ಪಿ ಇಶಾ ಪಂತ್, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದ್ದರು. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು