ಮೈತ್ರಿ ಸರ್ಕಾರ ಇಂದೇ ಬಹುಮತ ಸಾಬೀತುಪಡಿಸಲಿ; ಸ್ಪೀಕರ್​ಗೆ ಸೂಚಿಸಿದ ರಾಜ್ಯಪಾಲರು; ಕಿಡಿಕಾರಿದ ಕೈ-ತೆನೆ ನಾಯಕರು!

ಗುರುವಾರ ಸದನಕ್ಕೆ ಮಹತ್ವದ ಸೂಚನೆ ನೀಡಿದ ರಾಜ್ಯಪಾಲ ವಜುಭಾಯ್ ವಾಲಾ ಕುಮಾರಸ್ವಾಮಿ ನೇತೃತ್ವದ ಆಡಳಿತ ಸರ್ಕಾರ ಗುರುವಾರವೇ ಬಹುಮತ ಸಾಬೀತುಪಡಿಸಬೇಕು, ಕಾಲಹರಣ ಮಾಡಲು ಆಸ್ಪದ ನೀಡಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದೆ. ರಾಜ್ಯಪಾಲರ ಈ ಆದೇಶ ಮೈತ್ರಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

MAshok Kumar | news18
Updated:July 18, 2019, 6:14 PM IST
ಮೈತ್ರಿ ಸರ್ಕಾರ ಇಂದೇ ಬಹುಮತ ಸಾಬೀತುಪಡಿಸಲಿ; ಸ್ಪೀಕರ್​ಗೆ ಸೂಚಿಸಿದ ರಾಜ್ಯಪಾಲರು; ಕಿಡಿಕಾರಿದ ಕೈ-ತೆನೆ ನಾಯಕರು!
ಹೆಚ್​.ಡಿ. ಕುಮಾರಸ್ವಾಮಿ, ವಜುಭಾಯ್ ವಾಲಾ.
  • News18
  • Last Updated: July 18, 2019, 6:14 PM IST
  • Share this:
ಬೆಂಗಳೂರು (ಜುಲೈ.18); ಗುರುವಾರ ಅಧಿವೇಶನದಲ್ಲಿ ಬಹುಮತ ಸಾಬೀತಿನ ಮೇಲೆ ಬೆಳಗಿನಿಂದ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಆದರೆ, ಸರ್ಕಾರ ಬಹಮತ ಸಾಬೀತಿಗೆ ವಿಳಂಬನೀತಿ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆಯ ನಡುವೆ, ಸ್ಪೀಕರ್​ ರಮೇಶ್ ಕುಮಾರ್ ಅವರಿಗೆ ಸಂದೇಶ ಕಳಿಸಿರುವ ರಾಜ್ಯಪಾಲ ವಜುಭಾಯ್ ವಾಲಾ ಆಡಳಿತ ಪಕ್ಷ ಇಂದೇ ಬಹುಮತ ಸಾಬೀತುಪಡಿಸಲಿ ಎಂದು ಸೂಚಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ರಾಜ್ಯಪಾಲರನ್ನು ಸಂಪರ್ಕಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ “ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಇದೇ ಕಾರಣಕ್ಕೆ ವಿಶ್ವಾಸ ಮತಯಾಚನೆಗೆ ಸಿಎಂ ಕುಮಾರಸ್ವಾಮಿ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದರು.

ವಿರೋಧ ಪಕ್ಷದ ಮನವಿಗೆ ಸ್ಪಂದಿಸಿದ್ದ ರಾಜ್ಯಪಾಲರು ಇಂದಿನ ಸಂಪೂರ್ಣ ಕಲಾಪದ ಮಾಹಿತಿ ಪಡೆಯಲು ಸ್ಪೀಕರ್ ಬಳಿ ತಮ್ಮ ಕಾರ್ಯದರ್ಶಿಯನ್ನು ಕಳಿಸಿದ್ದರು. ಹೀಗೆ ಸಂಪೂರ್ಣ ಮಾಹಿತಿ ಪಡೆದ ರಾಜ್ಯಪಾಲರು ಸಂಜೆ 4.30ರ ಸುಮಾರಿಗೆ ಸ್ಪೀಕರ್ ಅವರಿಗೆ ಸೂಚನೆ ನೀಡಿದ್ದು, “ಆಡಳಿತ ಪಕ್ಷ ಗುರುವಾರವೇ ಬಹುಮತ ಸಾಬೀತುಪಡಿಸಬೇಕು” ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಆಡಳಿತ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಇದನ್ನೂ ಓದಿ : ಶ್ರೀರಾಮುಲುಗೆ ಡಿಸಿಎಂ ಆಫರ್ ಕೊಟ್ರಾ ಡಿಕೆಶಿ?; ಅನುಮಾನಕ್ಕೆ ಕಾರಣವಾಗಿದೆ ಸದನದಲ್ಲಿ ಇಬ್ಬರು ನಾಯಕರ ನಡುವಿನ ಮಾತುಕತೆ!

ರಾಜ್ಯಪಾಲರ ಮಹತ್ವದ ಆದೇಶ; ಇಕ್ಕಟ್ಟಿನಲ್ಲಿ ಮೈತ್ರಿ

ಗುರುವಾರ ಸದನಕ್ಕೆ ಮಹತ್ವದ ಸೂಚನೆ ನೀಡಿದ ರಾಜ್ಯಪಾಲ ವಜುಭಾಯ್ ವಾಲಾ, ”ಕುಮಾರಸ್ವಾಮಿ ನೇತೃತ್ವದ ಆಡಳಿತ ಸರ್ಕಾರ ಗುರುವಾರವೇ ಬಹುಮತ ಸಾಬೀತುಪಡಿಸಬೇಕು, ಕಾಲಹರಣ ಮಾಡಲು ಆಸ್ಪದ ನೀಡಬಾರದು” ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದೆ. ಆದರೆ, ರಾಜ್ಯಪಾಲರ ಈ ಆದೇಶ ಒಂದೆಡೆ ಮೈತ್ರಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಮತ್ತೊಂದೆಡೆ ರಾಜ್ಯಪಾಲರ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿದೆ.

ಸದನದ ಕಲಾಪದಲ್ಲಿ ಮಧ್ಯಪ್ರವೇಸಿಸುವ ರಾಜ್ಯಪಾಲರ ಹಕ್ಕನ್ನು ಪ್ರಶ್ನೆ ಮಾಡಿದ ಸಚಿವ ಹೆಚ್.ಕೆ. ಪಾಟೀಲ್, “ಸಂವಿಧಾನದ ಪ್ರಕಾರ ಸದನದ ಕಲಾಪದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ, ಅವರಿಗೆ ಈ ಹಕ್ಕು ಇಲ್ಲ ಎಂದು ನೀತಿ ನಿಯಮ ಇದೆ. ಹೀಗಿದ್ದ ಮೇಲೆ ಬಿಜೆಪಿ ಪಕ್ಷದ ನಾಯಕರ ಒತ್ತಾಯದ ಮೇರೆ ಬಹುಮತ ಸಾಬೀತುಪಡಿಸಬೇಕು ಎಂದು ಸ್ಪೀಕರ್ ಅವರಿಗೆ ಸೂಚನೆ ನೀಡುವ ಒತ್ತಡ ಹೇರುವ ಅಧಿಕಾರ ಅವರಿಗೆ ಏನಿದೆ?” ಎಂದು ಪ್ರಶ್ನೆ ಮಾಡಿದರು.ಇದೇ ಸಂದರ್ಭದಲ್ಲಿ ರಾಜ್ಯಪಾಲರ ಆದೇಶ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಭೈರೇಗೌಡ, “ಬಿಜೆಪಿಯವರ ಇಚ್ಛೆಯನ್ನು, ಅವರ ಆಸೆಯನ್ನು ರಾಜ್ಯಪಾಲರ ಸೂಚನೆ ಪ್ರತಿಬಿಂಬಿಸುತ್ತಿದೆ. ಇದು ಹತ್ತಾರು ಅನುಮಾನಕ್ಕೆ ಕಾರಣವಾಗಿದೆ” ಎಂದು ರಾಜ್ಯಪಾಲರ ನಡೆಯನ್ನು ಟೀಕಿಸಿದರು. ಅಲ್ಲದೆ "ಪಕ್ಷಾಂತರ ನಿಷೇಧ ಕಾಯ್ದೆ ಸೇರಿದಂತೆ ಎಲ್ಲಾ ವಿಚಾರಗಳ ಕುರಿತು ವಿಸ್ಕೃತ ಚರ್ಚೆ ನಡೆಸಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೆ ಬಹುಮತಯಾಚನೆಗೆ ಅವಕಾಶ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ವಿಶ್ವಾಸ ಮತಯಾಚನೆಗೆ ಮುನ್ನ ಕ್ರಿಯಾಲೋಪ ಎತ್ತಿದ ಮೈತ್ರಿನಾಯಕರು; ಇದು ಕಾಲಹರಣ ಎಂದು ಬಿಜೆಪಿ ಆಕ್ಷೇಪ

ಆದರೆ ಕೃಷ್ಣಭೈರೇಗೌಡ ಅವರ ಟೀಕೆಯನ್ನು ಬಿಜೆಪಿ ಶಾಸಕ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಯಡಿಯೂರಪ್ಪ  ಸೇರಿದಂತೆ ಎಲ್ಲಾ ನಾಯಕರು ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, "ವಿಶ್ವಾಸ ಮತಯಾಚನೆ ಕುರಿತ ಇಂದಿನ ಚರ್ಚೆ ರಾತ್ರಿ 12 ಗಂಟೆಯವರೆಗೆ ಮುಂದುವರೆಯಲಿ ಆ ಕುರಿತು ನಮ್ಮ ಯಾವುದೇ ತಕರಾರಿಲ್ಲ. ಆದರೆ, ವಿಶ್ವಾಸ ಮತಯಾಚನೆ ಪ್ರಕ್ರಿಯೆ ಇಂದೇ ಆಗಬೇಕು" ಎಂದು ಒತ್ತಾಯಿಸಿದರು.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading