• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Jagadish Shettar: ಸಂಜೆಯವರೆಗೆ ಕಾದು ನೋಡೋಣ; ಹೈಕಮಾಂಡ್​ಗೆ ಮತ್ತೊಂದು ಗಡುವು ನೀಡಿದ ಮಾಜಿ ಸಿಎಂ

Jagadish Shettar: ಸಂಜೆಯವರೆಗೆ ಕಾದು ನೋಡೋಣ; ಹೈಕಮಾಂಡ್​ಗೆ ಮತ್ತೊಂದು ಗಡುವು ನೀಡಿದ ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

BJP Politics: ಮುಂದೆ ಏನು ಮಾಡಬೇಕು ಅನ್ನೋ ಪರಿಸ್ಥಿತಿ ಬರಲ್ಲ ಅಂತ ನಂಬಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

 • News18 Kannada
 • 5-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ನಾನು ಬಿಎಸ್ ಯಡಿಯೂರಪ್ಪ (BS Yediyurappa) ಅವರ ನಾಯಕತ್ವದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಕಟ್ಟಿದ್ದೇನೆ. ಪಕ್ಷ ನನಗೆ ಎಲ್ಲಾ ಗೌರವಗಳನ್ನು ನೀಡಿದೆ. ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ (BJP Candidate List) ನನ್ನ ಹೆಸರು ಯಾಕೆ ಬಂದಿಲ್ಲ ಎಂದು ರಾಜ್ಯದ ಪ್ರಮುಖ ನಾಯಕರು ಕೇಳುತ್ತಿದ್ದಾರೆ. ಆರು ಬಾರಿ ಚುನಾವಣೆಯಲ್ಲಿ (Election) ಸ್ಪರ್ಧಿಸಿ ಗೆದ್ದಿದ್ದೇನೆ. ಏಳನೇ ಬಾರಿ ಟಿಕೆಟ್ ಕೊಟ್ಟರೆ ಅಧಿಕ ಮತಗಳಿಂದ ಗೆಲ್ಲುತ್ತೇನೆ ಎಂಬ ಅಂಶ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi), ಸಚಿವ ಮುನೇನಕೊಪ್ಪ ಸಹ ಬಂದು ಮಾತನಾಡಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸವಿದೆ. ಇಂದು ಸಾಯಂಕಾಲದವರೆಗೂ ಸಮಯ ಇದೆ ಎಂದು ಹೈಕಮಾಂಡ್​ಗೆ ಮತ್ತೊಂದು ಗಡುವು ನೀಡಿದರು.


ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20ರವರೆಗೆ ಸಮಯ ಇದೆ. ಒಂದು ವೇಳೆ ಟಿಕೆಟ್ ಸಿಗದಿದ್ರೆ ಏನು ಮಾಡಬೇಕು ಅನ್ನೋದನ್ನು ಚರ್ಚೆ ಮಾಡೋಣ ಎಂದರು. ಮುಂದೆ ಏನು ಮಾಡಬೇಕು ಅನ್ನೋ ಪರಿಸ್ಥಿತಿ ಬರಲ್ಲ ಅಂತ ನಂಬಿದ್ದೇನೆ ಎಂದರು.


ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದವನು. ಸಿಕ್ಕ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ.  ನನ್ನನ್ನು ಲೀಡರ್ ಮತ್ತು ಹೀರೋ ಮಾಡಿದ್ದು ಜನರು. ಯಾವುದೇ ಅಧಿಕಾರದ ಆಸೆಗಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಕ್ಷೇತ್ರದ ಜನತೆಯ ಕೆಲಸ ಮಾಡಬೇಕು ಅಂತ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ಸಂಜೆಯವರೆಗೆ ಸಮಯವಿದೆ


ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಈಗ ಈ ರೀತಿ ನಡೆಸಿಕೊಳ್ತಿರೊದ್ರ ಬಗ್ಗೆ ಬೇಸರವಾಗಿದೆ . ಹೈಕಮಾಂಡ್ ಗೆ ಸಂಜೆವರೆಗೂ ಕಾಲಾವಕಾಶ ಕೊಡೋಣ
ಸ್ಪರ್ಧೆಗೆ ಇನ್ನೂ ಸಮಯಾವಕಾಶವಿದೆ.


ಇದನ್ನೂ ಓದಿ:  Shiggaon: ಲಕ್ಕಿ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ


ನನಗೆ ಟಿಕೆಟ್ ಯಾಕೆ ತಪ್ಪಿಸಿದ್ರು ಅಂತ ಇದುವರೆಗೂ ಗೊತ್ತಾಗಿಲ್ಲ..ನನಗೊಂದೇ ಅಲ್ಲ ಜನಸಾಮಾನ್ಯರಿಗೂ ಕಾಡ್ತಾ ಇದೆ. ಇದನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಭೆ ನಂತರ ಹಿರಿಯರ ಜೊತೆ ಮಾತುಕತೆ ಮಾಡ್ತೇನೆ. ನಂತರ ಅಂತಿಮ‌ ನಿರ್ಧಾರ ಪ್ರಕಟಿಸ್ತೇನೆ ಎಂದು ನಿವಾಸದ ಮಂದೆ ಸೇರಿದ್ದ ಬೆಂಬಲಿಗರಿಗೆ ಹೇಳಿದರು.

top videos
  First published: