• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Jagadish Shettar: 4 ಬಾರಿ ಸಂಸದ, ಕೇಂದ್ರದ ಮಂತ್ರಿ ಆಗಿರೋ ಜೋಶಿ ರಾಜಕೀಯ ಬಿಡಲಿ ನೋಡೋಣ? ಶೆಟ್ಟರ್ ಸವಾಲ್

Jagadish Shettar: 4 ಬಾರಿ ಸಂಸದ, ಕೇಂದ್ರದ ಮಂತ್ರಿ ಆಗಿರೋ ಜೋಶಿ ರಾಜಕೀಯ ಬಿಡಲಿ ನೋಡೋಣ? ಶೆಟ್ಟರ್ ಸವಾಲ್

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಪ್ರಹ್ಲಾದ್ ಜೋಶಿಯವರು ನಾಲ್ಕು ಬಾರಿ ಸಂಸದ, ಮಂತ್ರಿಯಾಗಿದ್ದಾರೆ ರಾಜಕಾರಣ ಬಿಡಲಿ ಎಂದು ಸವಾಲು ಹಾಕಿದರು.

 • Share this:

ಹುಬ್ಬಳ್ಳಿ: ಇಂದು ಹುಬ್ಬಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar), ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ವಿರುದ್ಧ ವಾಗ್ದಾಳಿ ನಡೆಸಿ, ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು. ನನ್ನನ್ನು ಪ್ರಹ್ಲಾದ್ ಜೋಶಿ ಮಂತ್ರಿ ಮಾಡಿದ್ರು ಅಂತ ನಾನೂ ಹೇಳಿಲ್ಲ, ಅವರೂ ಹೇಳಿಲ್ಲ. ಈಗ ಚುನಾವಣೆಗಾಗಿ ಈ ಮಾತುಗಳನ್ನು ಹೇಳ್ತಿದ್ದಾರೆ. ಪ್ರಹ್ಲಾದ್ ಜೋಶಿ ಸುಳ್ಳು ಹೇಳೋದನ್ನು ಕಲ್ತಿದ್ದಾರೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟು ಶಾಸಕ ಮಾಡಿದ್ರೆ ಎಲ್ಲಾ ಸರಿಯಿರುತ್ತಿತ್ತು. ನನಗೆ ಟಿಕೆಟ್ ತಪ್ಪಿದ್ದು ಹದಿನೈದು, ಇಪ್ಪತ್ತು ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಿದೆ ಎಂದು ಹೇಳಿದರು.


ನಾನು ಏನೋ ಆಗಬೇಕು ಅಂತ ಆಸೆಯಿಂದ ಕಾಂಗ್ರೆಸ್ ಸೇರಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಇವರು ಮಾಡಿದ ಮೋಸಕ್ಕಾಗಿ ಕಾಂಗ್ರೆಸ್ ಸೇರಿದೆ. ಶಾಸಕನಾದ್ರೆ ಮನಸ್ಸಿಗೆ ಸಮಾಧಾನ ಆಗುತ್ತದೆ. ಪ್ರಹ್ಲಾದ್ ಜೋಶಿಯವರು ನಾಲ್ಕು ಬಾರಿ ಸಂಸದ, ಮಂತ್ರಿಯಾಗಿದ್ದಾರೆ ರಾಜಕಾರಣ ಬಿಡಲಿ ಎಂದು ಸವಾಲು ಹಾಕಿದರು.


ಮೋದಿಯವರು ರಾಜಕೀಯ ಬಿಡ್ತಾರಾ?


ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರಧಾ‌‌ನಿ ಆದ್ರು. ಮೋದಿಯವರು ರಾಜಕೀಯ ಬಿಡ್ತಾರಾ? ಅದು ಸಾಧ್ಯವಿಲ್ಲ. ಅವರು ಇನ್ನೊಮ್ಮೆ ಪಿಎಮ್ ಆಗಲು ಪ್ರಯತ್ನ ಮಾಡ್ತಿದ್ದಾರೆ, ಆಗಲಿ ಅಂತಾ ನಾನು ಹೇಳ್ತೀನಿ. ಎಲ್ಲಿವರೆಗೆ ಜನಾಶೀರ್ವಾದ ಇರುತ್ತೊ? ಅಲ್ಲಿಯವರೆಗೂ ರಾಜಕೀಯದಲ್ಲಿ ಇರಬೇಕು ಅನ್ನೋದು ನನ್ನ ನಿಲುವು ಎಂದು ಹೇಳಿದರು.




ಮೀಸಲಾತಿ ಜನರಿಗೆ ತಲುಪಲಿಲ್ಲ


ದಿನೆ ದಿನೇ ರಾಜ್ಯ ಸರ್ಕಾರದ ಆಡಳಿತವನ್ನು ಜನರು ನೋಡುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಸರ್ಕಾರದ ಯೋಜನೆಗಳು, ಮೀಸಲಾತಿ ಜನರಿಗೆ ತಲುಪಲಿಲ್ಲ.




ಇದನ್ನೂ ಓದಿ:  Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ

top videos


  ಮೀಸಲಾತಿ ಅನುಷ್ಠಾನ ಮಾಡಲ್ಲಾ ಅಂತಾ ಕೋರ್ಟ್‌ಗೆ ಹೇಳಿ ಜನರಿಗೆ ಮೋಸ ಮಾಡಿದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

  First published: