ಸರ್ಕಾರ ಗೈಡ್ ಲೈನ್ ಫಾಲೋ ಮಾಡಲಿ - ಅದನ್ನು ಬಿಟ್ಟು ಅಧಿವೇಶನದಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ನಿಷೇಧ ಸಲ್ಲ; ದಿನೇಶ್ ಗುಂಡೂರಾವ್

ಮಾಧ್ಯಗಳನ್ನು ನಿಷೇಧ ಮಾಡಿರುವುದರಿಂದ  ಸದನದಲ್ಲಿ ನಡೆಯುವ ವಿಚಾರಗಳು ಜನರಿಗೆ ಸ್ಪಷ್ಟವಾಗಿ ತೋರಿಸಲು ಅಗುತ್ತಿಲ್ಲ. ಅತ್ಯಂತ ಕೆಟ್ಟ ಕ್ರಮವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ.

G Hareeshkumar | news18-kannada
Updated:October 12, 2019, 12:43 PM IST
ಸರ್ಕಾರ ಗೈಡ್ ಲೈನ್ ಫಾಲೋ ಮಾಡಲಿ - ಅದನ್ನು ಬಿಟ್ಟು ಅಧಿವೇಶನದಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ನಿಷೇಧ ಸಲ್ಲ; ದಿನೇಶ್ ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
  • Share this:
ಬೆಂಗಳೂರು (ಅ.12) : ಮಾಧ್ಯಮಗಳಿಗೆ ನೀತಿ ನಿಯಮಗಳಿದ್ರೆ, ಗೈಡ್ ಲೈನ್ ಇದ್ರೆ ಅದರ ಪ್ರಕಾರ ಸರ್ಕಾರ ಮಾಡಲಿ. ಅದನ್ನು ಬಿಟ್ಟು ಅಧಿವೇಶನದಲ್ಲಿ ಸಂಪೂರ್ಣ ನಿಷೇಧ ಮಾಡೋದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್​ ಹೇಳಿದರು.

ಮಾಧ್ಯಗಳನ್ನು ನಿಷೇಧ ಮಾಡಿರುವುದರಿಂದ  ಸದನದಲ್ಲಿ ನಡೆಯುವ ವಿಚಾರಗಳು ಜನರಿಗೆ ಸ್ಪಷ್ಟವಾಗಿ ತೋರಿಸಲು ಅಗುತ್ತಿಲ್ಲ. ಅತ್ಯಂತ ಕೆಟ್ಟ ಕ್ರಮವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ. ಅಹಿತಕರ ವಿಚಾರಗಳು ನಡೆದಾಗ, ಚರ್ಚೆ ಅದಾಗ ಅದನ್ನ ತೋರಿಸಿದ್ದಾರೆ. ಆದರೆ ಈಗ ದೂರದರ್ಶನ ಸರ್ಕಾರದ ನಿಯಂತ್ರಣದಲ್ಲಿದೆ ಎಂದರು.

ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ನಾಯಕರು ಅವರ ಮನೆ ಮೇಲೆ ಐಟಿ ದಾಳಿ ನಡೆಸಿ, ಕಾಂಗ್ರೆಸ್ ಪಕ್ಷವನ್ನ ಮುಗಿಸಲು ಈ ರೀತಿ ಮಾಡುತ್ತಿದೆ. ಬಿಜೆಪಿ ವಿರುದ್ಧ ಇರುವವರ ಮೇಲೆ ದಾಳಿ ನಡೆಯುತ್ತೆ. ಕಾಂಗ್ರೆಸ್ ಗೆ ಯಾರು ಸಪೋರ್ಟ್ ಮಾಡಬಾರದು ಅಂತ ಈ  ಬಿಜೆಪಿ ಈ ರೀತಿ ಮಾಡಿದೆ. ಪ್ರಜಾಪ್ರಭುತ್ವ ಇಂದು ದೇಶದಲ್ಲಿ ಇಲ್ಲ. ಆದರೆ, ದೇಶದ ಪರಿಸ್ಥಿತಿ ಮುಂದೆ ಏನೇನಾಗುತ್ತೊ ಗೊತ್ತಿಲ್ಲ ಎಂದು ತಿಳಿಸಿದರು.

ನಾವೆಲ್ಲ ಪರಮೇಶ್ವರ್ ಜತೆಗೆ ಇದ್ದೀವಿ. ಕಾಂಗ್ರೆಸ್ ಸರ್ಕಾರ ಮಾಧ್ಯಮಗಳ ಯಾವತ್ತು ದ್ವೇಷ ಮಾಡಿಲ್ಲ. ಯುಪಿಎ ಸರ್ಕಾರ ಎಷ್ಟು ಟೀಕೆಗಳನ್ನ ಎದುರಿಸಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾಧ್ಯಮಗಳನ್ನ ನಿಯಂತ್ರಣ ಮಾಡುತ್ತಿದೆ ಎಂದು ಹೇಳಿದರು.

 ಯುಪಿಎ ಸರ್ಕಾರ ಯಾವತ್ತು ಕೆಟ್ಟ ತೀರ್ಮಾನ ಮಾಡಿಲ್ಲ : ಕೆ ಎಚ್ ಮುನಿಯಪ್ಪ

ನಾವು 50 ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಯುಪಿಎ ಸರ್ಕಾರ ಕೂಡ ಆಡಳಿತ ನಡೆಸಿದೆ. ಆದರೆ ಇಂತಹ ಕೆಟ್ಟ ತೀರ್ಮಾನ ನಾವು ಯಾವತ್ತು ಮಾಡಿಲ್ಲ. ಕಾಂಗ್ರೆಸ್ ಮುಖಂಡರಿರುವ ಸಂಸ್ಥೆಗೆ ಕೈ ಹಾಕಿದ್ದಾರೆ ಇದು ಸರಿಯಲ್ಲ  ಎಂದು ಮಾಜಿ ಸಂಸದ ಕೆ ಎಚ್​ ಮುನಿಯಪ್ಪ ಹೇಳಿದರು.

ಮಾಧ್ಯಮಗಳನ್ನು ಅಧಿವೇಶನದ ಒಳಗಡೆ ಬಿಡೋದ್ರಿಂದ ಗಲಾಟೆ ಕಡಿಮೆಯಾಗತ್ತೆ. ಆಗ ಆರೋಗ್ಯಕರ ಚರ್ಚೆ ನಡೆಯಲು ಸಾಧ್ಯ. ಇದನ್ನು ಕೇಂದ್ರ ನಾಯಕರು  ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಇದು ಬಹಳ‌ ದಿನ ನಡೆಯಲ್ಲ. ನಾನು‌ 28 ವರ್ಷ ಸಂಸತ್ತಿನಲ್ಲಿ ಕೆಲಸ ಮಾಡಿದ್ದು, ವಾಜಪೇಯಿ ಸರ್ಕಾರವನ್ನೂ ನೋಡಿದ್ದೇನೆ. ವಾಜಪೇಯಿ ಬಹಳ ದೊಡ್ಡ ನಾಯಕ. ಆದರೆ  ಇಂತಹ ಕೆಟ್ಟ ಕೆಲಸಕ್ಕೆ ಯಾವತ್ತು ಅವರು ಮುಂದಾಗಿಲಿಲ್ಲ. ಅದು ನಿಜವಾದ ರಾಜಕೀಯ. ಈ ರೀತಿಯ ರಾಜಕೀಯ ನಾನು ಒಪ್ಪೋದಿಲ್ಲ. ಎಂದರು.
First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading