• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Operation Cheetha: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!

Operation Cheetha: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿರತೆ ಪತ್ತೆ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ಕರೆತರಲಾಗಿದೆ. ಆದರೂ ಲಾಭವೇನೂ ಆಗುತ್ತಿಲ್ಲ. ಮತ್ತೊಂದೆಡೆ ಅರಣ್ಯಾಧಿಕಾರಿಗಳು, ತಜ್ಞರಿಗೆಲ್ಲ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಟ್ರೋಲ್ಸ್‌ ಹರಿದಾಡುತ್ತಿದೆ.

ಮುಂದೆ ಓದಿ ...
  • Share this:

ಬೆಳಗಾವಿ: ಕಳೆದ 23 ದಿನಗಳಿಂದ ಕುಂದಾನಗರಿ ಬೆಳಗಾವಿ
(Belagavi) ಜನರ ನಿದ್ದೆ ಗೆಡಿಸಿರುವ ಚಿರತೆ (Leopard) ಮಾತ್ರ, ಬೆಳಗಾವಿ ಬಿಟ್ಟು ಹೋಗುವುದಕ್ಕೆ ಮನಸ್ಸು ಮಾಡಿದಂತೆ ಕಾಣಿಸುತ್ತಿಲ್ಲ. ಕಣ್ಣ ಮುಂದೆ ಸುಳಿದಾಡಿದಂತೆ ಕಾಣಿಸುವ ಚಿರತೆ, ಕ್ಷಣಮಾತ್ರದಲ್ಲೇ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿದೆ. ಸತತ 23 ದಿನಗಳಿಂದ ಬೆಳಗಾವಿಯ ಗಾಲ್ಫ್ ಕ್ಲಬ್​​ನಲ್ಲಿ (Golf Club) ಚಿರತೆ ಅಡಗಿದೆ ಎನ್ನಲಾಗುತ್ತಿದೆ. ಚಿರತೆ ಪತ್ತೆ ಕಾರ್ಯಾಚರಣೆಗೆ (operation) ಶಿವಮೊಗ್ಗದ (Shivamogga) ಸಕ್ರೆಬೈಲು (Sakrebailu) ಬಿಡಾರದಿಂದ ಆನೆಗಳನ್ನು (Elephants) ಕರೆತರಲಾಗಿದೆ. ಆದರೂ ಲಾಭವೇನೂ ಆಗುತ್ತಿಲ್ಲ. ಮತ್ತೊಂದೆಡೆ ಅರಣ್ಯಾಧಿಕಾರಿಗಳು, ತಜ್ಞರಿಗೆಲ್ಲ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತರಹೇವಾರಿ ಟ್ರೋಲ್ಸ್‌ (Trolls) ಹರಿದಾಡುತ್ತಿದೆ.


23 ದಿನಗಳಿಂದ ಚಿರತೆ ಹಿಡಿಯಲು ಕಾರ್ಯಾಚರಣೆ


ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಇಂದಿಗೆ 23 ದಿನಗಳು ಕಳೆದಿದೆ. ಆದರೂ ಅರಣ್ಯ ಸಿಬ್ಬಂದಿ ಕೈಗೆ ಚಿರತೆ ಸಿಗುತ್ತಿಲ್ಲ. ಕಳೆದ 22 ದಿನಗಳ ಹಿಂದೆ ಬೆಳಗಾವಿಯ ಜಾಧವ್ ನಗರದ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ 250 ಎಕರೆ ವ್ಯಾಪ್ತಿಯ ಗಾಲ್ಫ್ ಮೈದಾನ ಸೇರಿದ ಚಿರತೆ, ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಹೀಗಾಗಿ ಆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಲ್ಲದೇ ಇಡೀ ಬೆಳಗಾವಿ ನಗರದ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಆನೆ ಕರೆತಂದರೂ ಬಲೆಗೆ ಬೀಳದ ಚಿರತೆ


ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ಕರೆತರಲಾಗಿದೆ. ಸಕ್ರೆಬೈಲಿನ ಆಲೆ ಹಾಗೂ ಅರ್ಜುನ ಸೇರಿದಂತೆ ಎರಡು ಆನೆಗಳನ್ನು ಗಾಲ್ಫ್ ಕ್ಲಬ್ ನಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಎಂಟು ಮಂದಿ ವೈದ್ಯರು ಟ್ಯಾಂಕ್ಯುಲೈಸರ್ ಗನ್ ಸಮೇತ ಚಿರತೆ ಹುಡುಕಾಟದಲ್ಲಿ ತೊಡಗಿದ್ದಾರೆ. ಕಾಂಪೌಂಡ್ ಹೊರಗೆ ಚಿರತೆ ದಾಟದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ.


ಚಿರತೆ ಕುರಿತಾದ ಟ್ರೋಲ್ಸ್


ಇದನ್ನೂ ಓದಿ: Elephant: ಹೆಣ್ಣಾನೆ ಬಳಸಿ ಕಾಡಾನೆಗೆ ಖೆಡ್ಡಾ! ಭಾನುಮತಿ ನಿನ್ನ ನಂಬಿದ್ರೆ ಫಜೀತಿ ಅಂತ ಒಂಟಿ ಸಲಗ ಎಸ್ಕೇಪ್!


ಇದುವರೆಗೂ 22 ಲಕ್ಷ ರೂಪಾಯಿ ಖರ್ಚು


ಇನ್ನು ಕಳೆದ 22 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಿತ್ಯ ಲಕ್ಷ ಲಕ್ಷ ವ್ಯಯಿಸುತ್ತಿದೆ. ಆದರೂ, ಚಾಲಾಕಿ ಚಿರತೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ನಿತ್ಯ ಅಂದಾಜು 2.50 ಲಕ್ಷ ವ್ಯಯಿಸುತ್ತಿದೆ. ಈವರೆಗೆ ಅಂದಾಜು 40 ಲಕ್ಷ ವೆಚ್ಚ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಆನೆಗಳಿಗೆ ಆಹಾರ, ಬೇಟೆ ನಾಯಿ,ಹಂದಿ ಹಿಡಿಯುವವರು, ಜೆಸಿಬಿ ಸೇರಿದಂತೆ ಇತರ ಸಂಪನ್ಮೂಲಗಳಿಗೆ ಲಕ್ಷಾಂತರ ಹಣವನ್ನು ಖರ್ಚು ಮಾಡಲಾಗುತ್ತಿದೆ. ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ಚಿರತೆ ಬಲೆಗೆ ಬೀಳದೇ ಇರೋದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವು ತಂದಿದೆ.


ಚಿರತೆ ಕುರಿತಾದ ಟ್ರೋಲ್ಸ್


ಅರಣ್ಯಾಧಿಕಾರಿಗಳಿಂದ ಸತತ ಕಾರ್ಯಾಚರಣೆ


ಅರಣ್ಯ ಇಲಾಖೆಯ ಬೆಳಗಾವಿ ವೃತ್ತ ವ್ಯಾಪ್ತಿಗೆ ಒಳಪಟ್ಟ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 320 ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ಇಳಿಸಲಾಗಿದೆ. ಇದಲ್ಲದೇ 150 ಪೊಲೀಸ್ ಸಿಬ್ಬಂದಿ ಕೂಡ ಗಾಲ್ಫ್ ಮೈದಾನ ಸುತ್ತುವರಿದಿದ್ದಾರೆ. ಇನ್ನು ಇಂದು ಭಾರೀ ಮಳೆ ಬರುತ್ತಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಕ್ಕೆ ಅಡ್ಡಿಯಾಗಿದೆ.


ಇದನ್ನೂ ಓದಿ: Belagavi Leopard: ನಾನ್ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ, ಬೆಳಗಾವಿ ನಂದೈತಿ! ಚಿರತೆ ತಮಾಷೆ ಫೋಟೋ ವೈರಲ್


ಸೋಶಿಯಲ್ ಮೀಡಿಯಾಗಳಲ್ಲಿ ಚಿರತೆಯದ್ದೇ ಹವಾ


ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಕಂಡರೂ ಕೈಗೆ ಸಿಗದ ಚಿರತೆ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಚಿರತೆ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. 'ನಾ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ. ಯಾರಪ್ಪಂದ ಏನೈತಿ, ಬೆಳಗಾವಿ ನಂದೈತಿ', 'ಈ ಬಾರಿ ಬೆಳಗಾವಿ ಗಣೇಶೋತ್ಸವ ಮುಗಿಸಿಯೇ ನಾನು ಹೋಗೋದು'. 'ಬೆಳಗಾವಿಯ ಗಾಳಿ, ನೀರು ಚೆನ್ನಾಗಿದೆ ಕುಟುಂಬ ಸಮೇತ ಇಲ್ಲೇ ಶಿಫ್ಟ್ ಆಗ್ತೇನೆ'. 'ಏನ್ ಮಾಡ್ಕೋತಿ ಮಾಡ್ಕೋ.. ರಾಜ್ಯೋತ್ಸವಕ್ಕೆ ಚನ್ನಮ್ಮ ಸರ್ಕಲ್ ‌ದಾಗ ಒಂದ್ ರೌಂಡ್ ಡ್ಯಾನ್ಸ್ ಮಾಡಿ ಹೋಗಾಂವ'. ಈ ರೀತಿ ವಿವಿಧ ಬರಹ ಬರೆದು ಚಿರತೆ ಫೋಟೋ ಹಾಕಿ ಪೋಸ್ಟ್ ಮಾಡಲಾಗುತ್ತಿದೆ. ಕೆಲವರಂತೂ ಚಿರತೆ ಹೆಸರಲ್ಲಿ ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್ ಚಿತ್ರ ಹಾಕಿಸಿ, ಟ್ರೋಲ್ ಮಾಡುತ್ತಿದ್ದಾರೆ.

top videos
    First published: