HOME » NEWS » State » LEOPARD TRAPPED AT BEGUR NEAR BANGALORE TODAY LG

ಬೇಗೂರು ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ

ವಾರದಿಂದ ಚಿರತೆಗಾಗಿ ಅರಣ್ಯ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದರೂ ಸಹ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಇಂದು ಮುಂಜಾನೆ ಸುಮಾರು 15 ವರ್ಷದ ಗಂಡು ಚಿರತೆ, ಅರಣ್ಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.

news18-kannada
Updated:February 1, 2021, 4:43 PM IST
ಬೇಗೂರು ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ
ಸೆರೆಸಿಕ್ಕ ಚಿರತೆ
  • Share this:
ಆನೇಕಲ್(ಫೆ.01):  ಆ ಚಿರತೆ ಕಳೆದ ಒಂದು ವಾರದಿಂದ ನಗರ ಪ್ರದೇಶದಲ್ಲಿ ಕಾಣಿಸಿಕೊಂಡು ಜನರಲ್ಲಿ ತಲ್ಲಣ ಮೂಡಿಸಿತ್ತು.  ಅಲ್ಲಿನ ವಾಸಿಗಳಂತೂ ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದರು. ಎಷ್ಟೇ ಹುಡುಕಾಡಿದರೂ  ಅದರ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ. ಆದ್ರೆ ಇಂದು ಅರಣ್ಯಾಧಿಕಾರಿಗಳು ತೋಡಿದ್ದ ಖೆಡ್ಡಾಗೆ ಬಿದ್ದ ಚಿರತೆ ಸೆರೆಯಾಗಿದ್ದು, ಅಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು, ಕಳೆದೊಂದು ವಾರದಿಂದ ಬೆಂಗಳೂರಿನ ಬೇಗೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಮುಂಜಾನೆ ಬಿದ್ದಿದೆ. ವಾರದ ಹಿಂದೆ ಬೇಗೂರು ರಸ್ತೆ ಹುಳಿಮಾವು ಬಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಆವರಣದಲ್ಲಿ ರಾತ್ರಿ ವೇಳೆ ಚಿರತೆ ಓಡಾಟದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸರೆಯಾಗಿತ್ತು. ಆತಂಕಗೊಂಡ ಅಪಾರ್ಟ್ಮೆಂಟ್ ವಾಸಿಗಳು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಅಧಿಕಾರಿಗಳು ಚಿರತೆ ಚಲನವಲನಗಳನ್ನು ಆಧರಿಸಿ ಅಪಾರ್ಟ್​​ಮೆಂಟ್​ ಸಮೀಪ ಬೋನ್ ಇರಿಸಿದ್ದರು. ವಾರದಿಂದ ಚಿರತೆಗಾಗಿ ಅರಣ್ಯ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದರೂ ಸಹ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಇಂದು ಮುಂಜಾನೆ ಸುಮಾರು 15 ವರ್ಷದ ಗಂಡು ಚಿರತೆ, ಅರಣ್ಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.

Union Budget 2021: ಕೇಂದ್ರ ಬಜೆಟ್​​ನಲ್ಲಿ ಮಧ್ಯಮ ವರ್ಗದ ಜನರಿಗೆ ನಿರಾಸೆ; ಟ್ವಿಟರ್​​ನಲ್ಲಿ ಹರಿದಾಡಿದ ಮೀಮ್ಸ್​ಗಳು

ಇನ್ನು, ಚಿರತೆ ಸೆರೆ ಕಾರ್ಯಾಚರಣೆ ಬಗ್ಗೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದು, ಅರಣ್ಯ ಅಧಿಕಾರಿಗಳು ಮತ್ತು ಹುಳಿಮಾವು ಪೊಲೀಸರ ಶ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಮಾತ್ರವಲ್ಲದೆ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚಿರತೆ ಸೆರೆ ಹಿಡಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸೆರೆ ಸಿಕ್ಕಿರುವ ಚಿರತೆ ಬನ್ನೇರುಘಟ್ಟ ಅರಣ್ಯದಿಂದ ಆಹಾರ ಅರಸಿ ನಾಡಿಗೆ ಬಂದಿರುವ ಸಾಧ್ಯತೆ ಇದೆ. ಕಳೆದೊಂದು ವಾರದ ಹಿಂದೆ ಬೇಗೂರು ಸಮೀಪದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಬಳಿ ಸುಳಿದಾಡಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಹಾಗಾಗಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಕೊನೆಗೂ ಯಶಸ್ವಿಯಾಗಿ ಚಿರತೆ ಸೆರೆ ಹಿಡಿಯಲಾಗಿದೆ.

ಸದ್ಯ ಚಿರತೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಕಾಡಿನ ಯಾವ ಪ್ರದೇಶದಲ್ಲಿ ಚಿರತೆಯನ್ನು ಬಿಡುಗಡೆ ಮಾಡಬೇಕು ಎಂಬುದನ್ನು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕ್ರಮವಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Youtube Video

ಒಟ್ಟಿನಲ್ಲಿ ಬೆಂಗಳೂರು ನಗರಕ್ಕೆ ಅನತಿ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅಸಂಖ್ಯಾತ ಜೀವ ಸಂಕುಲಗಳ ತಾಣವಾಗಿದೆ. ಅಲ್ಲಿ ಹುಲಿ ಸಹ ತನ್ನ ಸರಹದ್ದನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದೆ. ಆದರ ಜೊತೆಗೆ  ಚಿರತೆಗಳು ಸಹ ಬನ್ನೇರುಘಟ್ಟ ಅರಣ್ಯದಲ್ಲಿ ಯಥೇಚ್ಛವಾಗಿದ್ದು, ಆಗಿಂದಾಗ್ಗೆ ಆಹಾರ ಅರಸಿ ನಾಡಿನತ್ತ ಬರುವುದು ಸರ್ವೇ ಸಾಮಾನ್ಯವಾಗಿದೆ. ಸದ್ಯ ನಗರ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಯಾಗಿದ್ದು, ನಗರ ವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
Published by: Latha CG
First published: February 1, 2021, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories