• Home
  • »
  • News
  • »
  • state
  • »
  • Leopard: ಬೆಂಗಳೂರಿನಲ್ಲಿ ಚಿರತೆ, ಗೃಹ ಬಂಧನದಲ್ಲಿ ಸ್ಥಳೀಯರು; ಕೃಷಿ ಚಟುವಟಿಕೆಗಳು ಸ್ಥಗಿತ

Leopard: ಬೆಂಗಳೂರಿನಲ್ಲಿ ಚಿರತೆ, ಗೃಹ ಬಂಧನದಲ್ಲಿ ಸ್ಥಳೀಯರು; ಕೃಷಿ ಚಟುವಟಿಕೆಗಳು ಸ್ಥಗಿತ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನರು ಫಾರೆಸ್ಟ್ ಮಧ್ಯದಲ್ಲಿ ಇರುವ ರಸ್ತೆಯಲ್ಲಿ ಓಡಾಟ ಮಾಡಬಾರದು. ಹಾಗೇನಾದ್ರೂ ಮಾಡಿದರೂ, ಗುಂಪಾಗಿ ಶಬ್ಧ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

  • Share this:

ಬೆಂಗಳೂರು ತುರಹಳ್ಳಿ ಅರಣ್ಯ ಪ್ರದೇಶದಲ್ಲಿ (Turahalli Forest Area, Bengaluru) ಕಾಣಿಸಿಕೊಂಡಿರುವ ಚಿರತೆಗಳು (Leopard) ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿವೆ. ಚಿರತೆ ಕಾಣಿಸಿಕೊಂಡು ಮೂರು ದಿನ ಕಳೆದ್ರೂ ಪತ್ತೆಯಾಗಿಲ್ಲ. ಮತ್ತೊಂದೆಡೆ ಇಂದು ಬೆಳಗಿನ ಜಾವ 4 ಗಂಟೆಯಿಂದಲೇ ಚಿರತೆ ಪತ್ತೆ ಕಾರ್ಯ (Leopard Operation) ಆರಂಭಗೊಂಡಿದೆ. ಏರ್​​ಪೋರ್ಟ್ ರಸ್ತೆಯ ಐಟಿಸಿ ಪ್ಯಾಕ್ಟರಿಯಲ್ಲಿ (ITC Factory) ಸಿಸಿಟಿವಿಯಲ್ಲಿ (CCTV Footage) ಚಿರತೆಯ ಚಲನವಲನ ಪತ್ತೆಯಾಗಿತ್ತು. ಚಿರತೆ ಒಳಗಿದ್ಯಾ ಅಥವಾ ಹೋಗಿದ್ಯಾ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಐಟಿಸಿಯಲ್ಲಿ ಸಾವಿರಾರು ಮಂದಿ ಆತಂಕದಿಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಟಿಸಿ ಫ್ಯಾಕ್ಟರಿ ಕಾಂಪೌಂಡ್ ಗೆ ಹೊಂದಿಕೊಂಡಂತಿರೋ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಸದ್ಯ ತೋಟದಲ್ಲಿ ಮಾರ್ಕ್ ಮಾಡಿರೋ ಅರಣ್ಯಾಧಿಕಾರಿಗಳು, ಚಿರತೆ ಪತ್ತೆಗೆ ಮುಂದಾಗಿದ್ದಾರೆ.


ಫ್ಯಾಕ್ಟರಿ 80 ಎಕರೆ ಪ್ರದೇಶದಲ್ಲಿದ್ದು, ಸುತ್ತಲೂ ಅರಣ್ಯ ಪ್ರದೇಶವಿದೆ. ಸದ್ಯ ಫ್ಯಾಕ್ಟರಿ ಒಳಗೆ ನಾಲ್ಕು ಬೋನ್​ಗಳನ್ನು ಇರಿಸಲಾಗಿದೆ.


ಚಿರತೆ ಕಾಣಿಸಿಕೊಂಡ ದಿನದಿಂದ ಜಾನುವಾರು ಮೇಯಿಸಲು ಭಯವಾಗುತ್ತಿದೆ. ಹೊಲ, ತೋಟದ ಕೆಲಸಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕಿದ್ದರು. ತೋಟಗಳಲ್ಲಿ ಗುಡಿಸಲು ಹಾಕಿಕೊಂಡಿದ್ದ ಕಾರ್ಮಿಕ ವರ್ಗ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ.


ಸ್ಥಳೀಯರ ಅಸಹಾಯಕತೆ


ಇನ್ನು ಮನೆ ಮುಂದೆಯೇ ಜಾನುವಾರುಗಳನ್ನು ಕಟ್ಟುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇದೀಗ ಚಿರತೆ ಭಯದಿಂದ ಜಾನುವಾರುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವುದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದರು.


ಕೃಷಿ ಚಟುವಟಿಕೆಗಳು ಸ್ಥಗಿತ


ತೆಂಗಿನ ತೋಟದಲ್ಲಿ ಹೆಜ್ಜೆ ಗುರುತು ನೋಡಿ ಆಂಧ್ರದಿಂದ ಕೂಲಿಗೆ ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿ ಭಯದಿಂದ ಊರಿಗೆ ಹೋಗಿದ್ದಾರೆ. ಇದೀಗ ಚಿರತೆ ಭಯದಿಂದಾಗಿ ಎಲ್ಲಾ ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದ ನಮಗೆ ಹಾನಿಯಾಗುತ್ತಿದೆ ಎಂದು ತೆಂಗಿನ ತೋಟದ ಮಾಲೀಕರೊಬ್ಬರು ಬೇಸರ ಹೊರ ಹಾಕಿದರು.


ಬನ್ನೇರುಘಟ್ಟಕ್ಕೆ ಹೋಗಿರುವ ಸಾಧ್ಯತೆ


ಚಿರತೆ ಪತ್ತೆ ಕಾರ್ಯಾಚರಣೆ ಸಂಬಂಧ ನ್ಯೂಸ್ 18 ಕನ್ನಡದ ಜೊತೆ DRFO ರವಿ ಮಾತನಾಡಿದರು.  ತುರಹಳ್ಳಿ ಫಾರೆಸ್ಟ್ ನಲ್ಲಿ ಚಿರತೆ ಕಾರ್ಯಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ. ಚಿರತೆ ತುರಹಳ್ಳಿ ಫಾರೆಸ್ಟ್​​ನಿಂದ ಬನ್ನೇರುಘಟ್ಟಕ್ಕೆ ಹೋಗಿರುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ನಮ್ಮ ತಂಡ ಫಾರೆಸ್ಟ್​​ನಲ್ಲಿ ಕಾರ್ಯಚರಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ:  Hire Benakal: ಯುನೆಸ್ಕೋದ ನಾಮನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆದ ಹಿರೇ ಬೆಣಕಲ್ ಬಗ್ಗೆ ನಿಮಗೆಷ್ಟು ಗೊತ್ತು?


ಎಲ್ಲೂ ಚಿರತೆಯ ಹೆಜ್ಜೆ ಗುರುತಾಗಲಿ, ಇನ್ನಿತರ ಯಾವುದೇ ಸುಳಿವು ಸಿಕ್ಕಿಲ್ಲ. ಚಿರತೆ ಒಂದು ಕಡೆ ಇರುವುದಿಲ್ಲ, ಆಹಾರ ಅರಸಿ ಸಂಚಾರ ಮಾಡುತ್ತಿರುತ್ತೆ. ಚಿರತೆ ಒಂದು ಕಡೆ ವಾಸ ಮಾಡಬೇಕು ಅಂದ್ರೆ ಅಲ್ಲಿ ಬೆಟ್ಟ ಗುಡ್ಡಗಳು ಇರಬೇಕು. ತುರಹಳ್ಳಿಯಲ್ಲಿ ಎಲ್ಲಿಯೂ ಬೆಟ್ಟ, ಬಂಡೆಗಳು ಇಲ್ಲ. ಹೀಗಾಗಿ ಇಲ್ಲಿಂದ ಹತ್ತಿರದ ಬನ್ನೇರುಘಟ್ಟ ಕಾಡಿಗೆ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದರು.


ಗುಂಪಾಗಿ ತಿರುಗಾಡಿ


ನಾವು ಕಾರ್ಯಚರಣೆ ಮುಂದುವರಿಸಿದ್ದೇವೆ, ಒಂದು ಕಡೆ ಬೋನ್ ಇಟ್ಟಿದ್ದೇವೆ. ಇನ್ನು ಕೆಲ ದಿನಗಳ ಕಾಲ ಕಾರ್ಯಚರಣೆ ಮುಂದುವರಿಸುತ್ತೇವೆ. ಜನರು ಫಾರೆಸ್ಟ್ ಮಧ್ಯದಲ್ಲಿ ಇರುವ ರಸ್ತೆಯಲ್ಲಿ ಓಡಾಟ ಮಾಡಬಾರದು. ಹಾಗೇನಾದ್ರೂ ಮಾಡಿದರೂ, ಗುಂಪಾಗಿ ಶಬ್ಧ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.


ಇದನ್ನೂ ಓದಿ:  JDS Leader Death: ಚನ್ನಪಟ್ಟಣದ ಹಿರಿಯ ಜೆಡಿಎಸ್​ ಮುಖಂಡ ಸಿಂ ಲಿಂ ನಾಗರಾಜು ವಿಧಿವಶ


ಮೈಕ್ ಮೂಲಕ ಜಾಗೃತಿ


ಇನ್ನು ಚಿರತೆ ಕಾಣಿಸಿಕೊಂಡ ರಸ್ತೆಯಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರು ವಾಕಿಂಗ್​ಗೆ ಬಂದಿಲ್ಲ. ಮತ್ತೊಂದೆಡೆ ಅರಣ್ಯ ಸಿಬ್ಬಂದಿ ಮೈಕ್ ಮೂಲಕ ಅನಾವಶ್ಯಕವಾಗಿ ಹೊರಗಡೆ ಬರಬೇಡಿ. ರಾತ್ರಿ ವೇಳೆ ಮನೆ ಮುಂದೆ ಮಲಗುವುದು, ಬಹಿರ್ದೆಸೆಗೆ ಹೋಗಬೇಡಿ. ಮಲಗಿರುವ ಮತ್ತು ಕುಳಿತಿರುವ ಜನರ ಮೇಲೆ ಚಿರತೆಗಳು ದಾಳಿ ಮಾಡುವ ಸಾಧ್ಯೆತೆಗಳಿವೆ ಎಂದು ಜಾಗೃತಿ  ಮೂಡಿಸುತ್ತಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು